Asianet Suvarna News Asianet Suvarna News

ಶಾಲೆಯಲ್ಲಿ ಅನಿವಾಸಿ ಭಾರತೀಯ ವಿದ್ಯಾರ್ಥಿ ಮೇಲೆ ಭಯಾನಕ ಹಲ್ಲೆ: ವಿಡಿಯೋ ವೈರಲ್‌

  • ಅನಿವಾಸಿ ಭಾರತೀಯ ವಿದ್ಯಾರ್ಥಿ ಮೇಲೆ ಭಯಾನಕ ಹಲ್ಲೆ
  • ಶಾಲೆಯಲ್ಲಿ ಸಹ ವಿದ್ಯಾರ್ಥಿಯಿಂದ ಭೀಭತ್ಸ ಕೃತ್ಯ
  • ವಿಡಿಯೋ ವೈರಲ್: ಆರೋಪಿ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ
Indian American Boy Choked and Bullied in Texas School: Outrage After video goes viral akb
Author
Bangalore, First Published May 18, 2022, 10:55 AM IST

ನವದೆಹಲಿ: ಭಾರತೀಯ ಮೂಲದ ಅಮೆರಿಕನ್‌ ಬಾಲಕನ ಮೇಲೆ ಆತನಿಗಿಂತ ಸಧೃಡವಾಗಿರುವ ಶ್ವೇತವರ್ಣೀಯ ತರುಣನೋರ್ವ ಹಲ್ಲೆ ಮಾಡಿದ ಘಟನೆ ನಡೆದಿದೆ. ಅದರ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲ್ಲೆಯ ಭೀಭತ್ಸ ಕೃತ್ಯ ನೋಡಿದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಪ್ಪಿತಸ್ಥ ವಿದ್ಯಾರ್ಥಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಈ ವಿಡಿಯೋವನ್ನು ತರಗತಿಯಲ್ಲಿರುವ ಇತರ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅಮೆರಿಕಾದ ಕೊಪ್ಪೆಲ್ ಇಂಡಿಪೆಂಡೆಂಟ್ ಸ್ಕೂಲ್ (Coppell Independent School) ಡಿಸ್ಟ್ರಿಕ್ಟ್ (ಕೊಪ್ಪೆಲ್ ISD) ನಲ್ಲಿ ಈ ದುರಂತ ನಡೆದಿದೆ. ಹೀಗೆ ಸಹಪಾಠಿಯಿಂದ ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಶಾನ್ ಪ್ರೀತ್ಮಣಿ (Shaan Pritmani) ಎಂದು ಗುರುತಿಸಲಾಗಿದೆ. ಆದರೆ ಹೀಗೆ ಸಾವು ಬದುಕಿನ ನಡುವೆ ಹೋರಾಡುವಂತೆ ಹಲ್ಲೆ ಮಾಡಿದ ಶ್ವೇತ ವರ್ಣೀಯ ಅಮೆರಿಕನ್ ವಿದ್ಯಾರ್ಥಿಗೆ (Student) ಕೇವಲ ಮೂರು ದಿನದ ಅಮಾನತಿನ ಶಿಕ್ಷೆ ಮಾತ್ರ ನೀಡಲಾಗಿದೆ. ಮೇ 11 ರಂದು ಅಮೆರಿಕಾದ ಟೆಕ್ಸಾಸ್‌ನ ಕೊಪ್ಪೆಲ್ ಇಂಡಿಪೆಂಡೆಂಟ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಈ ವಿದ್ಯಾರ್ಥಿಗಳು ರಸ್ಲಿಂಗ್(WWF) ಅನ್ನು ನೋಡಿ ನೋಡಿ ಪ್ರಭಾವಿತನಾಗಿ ಈ ರೀತಿ ಹಲ್ಲೆ ಮಾಡಿರುವ ಸಾಧ್ಯತೆ ಇದೆ. 

ಕಾರು ಅಪಘಾತ: ರಸ್ತೆ ಮಧ್ಯೆ ವಿದ್ಯಾರ್ಥಿಗಳ ಹೊಡೆದಾಟ!

ವಿಡಿಯೋದಲ್ಲಿ ಕಾಣಿಸುವಂತೆ ಹಲ್ಲೆಗೊಳಗಾದ ವಿದ್ಯಾರ್ಥಿ ಶಾನ್ ಪ್ರೀತ್ಮಣಿ ಕ್ಯಾಮೆರಾದ ಕಡೆಗೆ ಮುಖವನ್ನು ಇಟ್ಟುಕೊಂಡು ಕುಳಿತಿದ್ದಾನೆ. ಈ ವೇಳೆ ಹಿಂದಿನಿಂದ ಬರುವ ಬಿಳಿಯ ವಿದ್ಯಾರ್ಥಿ ಶಾನ್‌ ಪ್ರೀತ್ಮಣಿ ಬಳಿಗೆ ಬಂದು ಅವನಿಗೆ ಒರಗುತ್ತಾನೆ ಮತ್ತು ಕೆಟ್ಟ ಭಾಷೆಯಲ್ಲಿ ಬೈಯುತ್ತಾ ಆತನನ್ನು ಕುಳಿತ ಬೆಂಚಿನಿಂದ ಮೇಲೆ ಎದ್ದೇಳುವಂತೆ ಹೇಳುತ್ತಾನೆ. ಆದರೆ ಭಾರತೀಯ ಮೂಲದ ಶಾನ್ ಪ್ರೀತ್ಮಣಿ ಇದಕ್ಕೆ ನಿರಾಕರಿಸುತ್ತಾನೆ. ಆದರೂ ಸುಮ್ಮನಿರದ  ಶ್ವೇತವರ್ಣೀಯ ವಿದ್ಯಾರ್ಥಿಯು ಅವನಿಗೆ ಕಿರುಕುಳ ನೀಡುವುದನ್ನು ಮುಂದುವರೆಸುತ್ತಾನೆ .

ನಂತರ ಶಾನ್ ಕುತ್ತಿಗೆಯ ಸುತ್ತಲು ತನ್ನ ಕೈಯನ್ನು ತರುವ ಶ್ವೇತವರ್ಣೀಯ ವಿದ್ಯಾರ್ಥಿ ಆತನ ಕುತ್ತಿಗೆಯನ್ನು ಒತ್ತಲು ಯತ್ನಿಸುತ್ತಾನೆ. ಆದರೆ ಮೊದಲ ಬಾರಿಗೆ ಶಾನ್ ಆತನ ಕೈಯನ್ನು ದೂರ ತಳ್ಳುತ್ತಾನೆ. ಆದರೆ ಇದರಿಂದ ಮತ್ತೆ ಕೆರಳಿದ ಶ್ವೇತ ವರ್ಣೀಯ ವಿದ್ಯಾರ್ಥಿ ಮತ್ತೆ ತನ್ನ ಒಂದು ಕೈಯನ್ನು ಶಾನ್ ಕುತ್ತಿಗೆಯ ಸುತ್ತ ತಂದು ಜಾಮರ್‌ನಂತೆ ಕುತ್ತಿಗೆ ಹಿಚುಕಿ ಉಸಿರು ಕಟ್ಟಿಸಲು ಯತ್ನಿಸುತ್ತಾನೆ. ಅಲ್ಲದೇ ಅವನನ್ನು ಕುಳಿತಿದ್ದ ಬೆಂಚಿನಿಂದ ಕೆಳಗೆ ಬೀಳಿಸಿ ಕುತ್ತಿಗೆಯನ್ನು ಸಂಪೂರ್ಣ ತಿರುಗಿಸಲು ಯತ್ನಿಸುತ್ತಾನೆ. 

25 ದಿನದ ಬಳಿಕ ಕುವೈಟ್‌ನಿಂದ ತವರಿಗೆ ಬಂದ ಅನಿವಾಸಿ ಕನ್ನಡಿಗನ ಮೃತದೇಹ
 

ಈ ವೇಳೆ ಶಾನ್ ಎದ್ದೇಳಲು ಪ್ರಯತ್ನಿಸಿದಾಗ ಮತ್ತೆ ಆತನನ್ನು ಬಲವಂತವಾಗಿ ಕೆಳಗೆ ತಳ್ಳುತ್ತಾನೆ. ಇಂತಹ ಭಯಾನಕ ಘಟನೆಯ ವೇಳೆ ಯಾರೂ ಕೂಡ ಶಾನ್ ರಕ್ಷಣೆಗೆ ಧಾವಿಸಿಲ್ಲ. ಜೊತೆಗೆ ಇದನ್ನು ನೋಡಿ ಜೋರಾಗಿ ನಕ್ಕು ಹರ್ಷೋದ್ಗಾರ ಮತ್ತು ಗೇಲಿ ಮಾಡುತ್ತಿದರುವುದು ವಿಡಿಯೋದಲ್ಲಿ ಕೇಳಿಸುತ್ತಿದೆ. ಈ ಭೀಬತ್ಸ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿ ವಿರುದ್ಧ ಶಾಲೆಯಿಂದ ಕ್ರಮ ಕೈಗೊಳ್ಳಲು ಹಾಗೂ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಲು change.org ಮೂಲಕ ಆನ್‌ಲೈನ್‌ನಲ್ಲಿ ಅಭಿಯಾನ ಶುರು ಮಾಡಲಾಗಿದೆ. 

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲೆ 14 ರ TX SBOEಯ ಅಭ್ಯರ್ಥಿ ಟ್ರೇಸಿ ಫಿಶರ್ (Tracy Fisher) ಅವರು ಈ ಘಟನೆಗೆ ಸಂಬಂಧಿಸಿದಂತೆ ಕೊಪ್ಪೆಲ್‌ ಜಿಲ್ಲೆಯ ಅಧಿಕೃತ ಹೇಳಿಕೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬೆದರಿಸುವ, ಮೌಖಿಕ ಮತ್ತು ದೈಹಿಕ ಆಕ್ರಮಣಕಾರಿ ಕ್ರಿಯೆಗಳು ಎಂದಿಗೂ ಸ್ವೀಕಾರಾರ್ಹವಲ್ಲ. ಕೊಪ್ಪೆಲ್‌ ಜಿಲ್ಲೆ ಮತ್ತು ನಾವು ನಮ್ಮ ಪ್ರಮುಖ ಮೌಲ್ಯಗಳಲ್ಲಿ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು  ಟ್ವಿಟ್‌ನಲ್ಲಿ ಬರೆಯಲಾಗಿದೆ. ಮತ್ತೊಂದು ಟ್ವೀಟ್‌ನಲ್ಲಿ ಈ ಘಟನೆಯನ್ನು ಸಿಐಎಸ್‌ಡಿ ವಿದ್ಯಾರ್ಥಿ ನೀತಿ ಸಂಹಿತೆಯ ಪ್ರಕಾರ ಶಾಲಾ ಮತ್ತು ಜಿಲ್ಲಾ ಮಟ್ಟದಿಂದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. 
 

Follow Us:
Download App:
  • android
  • ios