Asianet Suvarna News Asianet Suvarna News

ಭಾರತದ ಅಚ್ಚರಿಯ ನಡೆ: ಇಸ್ರೇಲ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ

ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್‌ ವಾಸ ನೆಲೆಗಳನ್ನು ಸ್ಥಾಪಿಸುವುದನ್ನು ಅಕ್ರಮ ಎಂದು ಸಾರುವ ನಿರ್ಣಯವನ್ನು ಬೆಂಬಲಿಸಿ ವಿಶ್ವಸಂಸ್ಥೆಯಲ್ಲಿ ಭಾರತ ಮತ ಹಾಕಿರುವುದು ರಾಜತಾಂತ್ರಿಕ ವಲಯದಲ್ಲಿ (diplomatic circle) ಭಾರಿ ಅಚ್ಚರಿಗೆ ಕಾರಣವಾಗಿದೆ.

India votes against Israel in United Nations which resolution condemning Israeli settlement in Palestine akb
Author
First Published Nov 13, 2023, 8:04 AM IST | Last Updated Nov 13, 2023, 8:04 AM IST

ನವದೆಹಲಿ: ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್‌ ವಾಸ ನೆಲೆಗಳನ್ನು ಸ್ಥಾಪಿಸುವುದನ್ನು ಅಕ್ರಮ ಎಂದು ಸಾರುವ ನಿರ್ಣಯವನ್ನು ಬೆಂಬಲಿಸಿ ವಿಶ್ವಸಂಸ್ಥೆಯಲ್ಲಿ ಭಾರತ ಮತ ಹಾಕಿರುವುದು ರಾಜತಾಂತ್ರಿಕ ವಲಯದಲ್ಲಿ (diplomatic circle) ಭಾರಿ ಅಚ್ಚರಿಗೆ ಕಾರಣವಾಗಿದೆ.

ಪೂರ್ವ ಜೆರುಸಲೇಂ (East Jerusalem) ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಭೂಭಾಗ ಹಾಗೂ ಆಕ್ರಮಿತ ಸಿರಿಯನ್‌ ಗೋಲನ್‌ನಲ್ಲಿ ಇಸ್ರೇಲ್‌ನ ವಸಾಹತು (Israeli settlements) ಸ್ಥಾಪನೆ’ ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ (United Nations) ಮಂಡಿಸಲಾಗಿತ್ತು. ಭಾರತ ಸೇರಿ 145 ದೇಶಗಳು ನಿರ್ಣಯದ ಪರ ಮತ ಚಲಾವಣೆ ಮಾಡಿದವು. ಅಮೆರಿಕ (America), ಕೆನಡಾ, ಇಸ್ರೇಲ್‌ ಸೇರಿ 7 ದೇಶಗಳು ವಿರುದ್ಧ ಮತ ಹಾಕಿದರೆ, 18 ದೇಶಗಳು ತಟಸ್ಥವಾಗಿ (neutral) ಉಳಿದವು. ಹೀಗಾಗಿ ನಿರ್ಣಯ ಅಂಗೀಕಾರವಾಯಿತು.

ಗಾಜಾ ಜನರ ರಕ್ಷಣೆ ಇಸ್ರೇಲ್-ವಿಶ್ವಸಂಸ್ಥೆ ಹೊಣೆ, ನಾಗರೀಕರ ನಡು ನೀರಿನಲ್ಲಿ ಕೈಬಿಟ್ಟ ಹಮಾಸ್!

ಗಾಜಾ ಪಟ್ಟಿಯಲ್ಲಿ ತಕ್ಷಣ, ದೀರ್ಘಕಾಲಿನ ಹಾಗೂ ಸುಸ್ಥಿರ ಮಾನವೀಯ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಕೆಲವೇ ವಾರಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಯುದ್ಧ ನಿಲ್ಲಿಸುವ ಪರ ಆ ನಿರ್ಣಯ ಇದ್ದ ಕಾರಣ ಭಾರತ ಮತದಾನ ಪ್ರಕ್ರಿಯೆಯಿಂದಲೇ ದೂರ ಉಳಿದಿತ್ತು. ಆದರೆ ಈಗ ಪ್ಯಾಲೆಸ್ತೀನ್‌ ಭೂಭಾಗದಲ್ಲಿ ಇಸ್ರೇಲ್‌ ವಸಾಹತು ಸ್ಥಾಪನೆ ಖಂಡಿಸುವ ನಿರ್ಣಯದ ಪರ ಮತ ಚಲಾವಣೆ ಮಾಡಿದೆ.

'ಹಮಾಸ್‌ ಭಯೋತ್ಪಾದಕರ ಬಗ್ಗೆ ಒಂದೂ ಶಬ್ದವಿಲ್ಲ..' ವಿಶ್ವಸಂಸ್ಥೆ ನಿರ್ಣಯಕ್ಕೆ ಮತ ಹಾಕದ ಭಾರತದ ನೇರ ಉತ್ತರ!

ನಿರ್ಣಯ ಏನು ಹೇಳುತ್ತದೆ?:

ಪ್ಯಾಲೆಸ್ತೀನ್‌ ಭೂಭಾಗದಲ್ಲಿ ಜಾಗ ಕಸಿಯುವುದು, ಸಂರಕ್ಷಿತ ಜನರ ಜೀವನೋಪಾಯಗಳನ್ನು ಅಸ್ತವ್ಯಸ್ತಗೊಳಿಸುವುದು, ಬಲವಂತವಾಗಿ ನಾಗರಿಕರನ್ನು ಸ್ಥಳಾಂತರಿಸುವುದು, ಜಾಗವನ್ನು ಕಬಳಿಸುವುದನ್ನು ಖಂಡಿಸುವ ಅಂಶ ನಿರ್ಣಯದಲ್ಲಿದೆ.

ಇಸ್ರೇಲ್‌-ಹಮಾಸ್‌ ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ನಿರ್ಣಯ, ಭಾರತ ಸೇರಿದಂತೆ 45 ದೇಶಗಳ ನೋ ವೋಟ್‌!

Latest Videos
Follow Us:
Download App:
  • android
  • ios