ನಾವು ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರು, ಇಸ್ರೇಲ್ ಕಪಿಮುಷ್ಠಿಯಿಂದ ಪ್ಯಾಲೆಸ್ತಿನ್ ಜನರನ್ನು ಮುಕ್ತಿಗೊಳಿಸಲು ನಮ್ಮ ಹೋರಾಟ ಎಂದು ವಿಶ್ವಾದ್ಯಂತ ಬೆಂಬಲ ಗಿಟ್ಟಿಸಿಕೊಂಡಿರುವ ಹಮಾಸ್ ಉಗ್ರರ ಅಸಲಿ ಮುಖ ಬಯಲಾಗಿದೆ. ಸಂದರ್ಶನದಲ್ಲಿ ಹಮಾಸ್ ಸದಸ್ಯ ತಮ್ಮ ಉದ್ದೇಶ ಭಯೋತ್ಪಾದನೆ ಹೊರತು, ಗಾಜಾ ಜನರ ರಕ್ಷಿಸುವುದಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.
ಖತಾರ್(ಅ.30) ಪ್ಯಾಲೆಸ್ತಿನ್ ಪರ, ಹಮಾಸ್ ಉಗ್ರರ ಕೇರಳ ಸೇರಿದಂತೆ ಭಾರತದ ಕೆಲ ರಾಜ್ಯಗಳಲ್ಲೂ ಬೆಂಬಲ ವ್ಯಕ್ತವಾಗಿದೆ. ಹಮಾಸ್ ಉಗ್ರ ಸಂಘಟನೆಯಲ್ಲ, ಅದು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹೋರಾಟಗಾರರು ಅನ್ನೋ ಹಣೆಪಟ್ಟಿಯನ್ನು ನೀಡಿದೆ. ಇನ್ನು ವಿಶ್ವಾದ್ಯಂತ ಫ್ರೀ ಪ್ಯಾಲೆಸ್ತಿನ್, ಕಿಲ್ ಯಹೂದಿ ಅನ್ನೋ ಘೋಷಣೆಗಳಿಗೆ ಭಾರಿ ಮನ್ನಣೆಯೂ ದೂರಕಿದೆ. ಆದರೆ ಈ ಹಮಾಸ್ ಉಗ್ರರ ಅಸಲಿ ಮುಖವನ್ನು ಅವರೇ ಬಹಿರಂಗಪಡಿಸಿದ್ದಾರೆ. ಖಾಸಗಿ ವಾಹಿನಿಗೆ ನೀಡಿರು ಸಂದರ್ಶನದಲ್ಲಿ ಹಮಾಸ್ ಉಗ್ರ ಸಂಘಟನೆ ಪ್ರಮುಖ ಸದಸ್ಯ ಮೂಸಾ ಅಬೂ ಮರ್ಜೌಕ್ ನೀಡಿದ ಹೇಳಿಕೆ ಇದೀಗ ಉಗ್ರರ ಹೋರಾಟದ ಸಂಪೂರ್ಣ ಚಿತ್ರಣ ಬಯಲಾಗಿದೆ. ಗಾಜಾ ಜನರ ಸಂರಕ್ಷಣೆ ಹೊಣೆ ಇಸ್ರೇಲ್ ಹಾಗೂ ವಿಶ್ವಸಂಸ್ಥೆ ಜವಾಬ್ದಾರಿ. ಅದು ನಮ್ಮ ಜವಾಬ್ದಾರಿ ಅಲ್ಲ ಎಂದಿದೆ.
ಹಮಾಸ್ ಪ್ಯಾಲೆಸ್ತಿನ್ ಜನರಿಗಾಗಿ ಹೋರಾಟ ಮಾಡುತ್ತಿದೆ ಎಂದು ಹೇಳುತ್ತಿದೆ. ಆದರೆ ಹಮಾಸ್ ಅತೀ ದೊಡ್ಡ ಸುರಂಗಗಳನ್ನು, ಬಾಂಬ್ ಶೆಲ್ಟರ್ ನಿರ್ಮಿಸಿ ಕೇವಲ ಹಮಾಸ್ ಸದಸ್ಯರಿಗೆ ಮಾತ್ರ ರಕ್ಷಣೆ ನೀಡುತ್ತಿದೆ. ಜನರಿಗೂ ಇದೇ ರೀತಿಯ ಬಾಂಬ್ ಶೆಲ್ಟರ್, ಸುರಂಗ ನಿರ್ಮಿಸಿಕೊಟ್ಟಿದ್ದರೆ ಇಷ್ಟು ಸಾವು ನೋವು ಸಂಭವಿಸುತ್ತಿರಲಿಲ್ಲ ಎಂದು ಮಾಧ್ಯಮ ನಿರೂಪಕ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮೂಸಾ ಅಬೂ ಮರ್ಜೌಕ್ , ನಾವು ನಿರ್ಮಿಸಿದ ಅಂಡರ್ ಗ್ರೌಂಡ್ ಶೆಲ್ಟರ್, ಸುರಂಗಗಳು ಹಮಾಸ್ ಹೋರಾಟಗಾರರಿಗೆ ಮಾತ್ರ. ಗಾಜಾ ಜನರ ರಕ್ಷಣೆ ನಮ್ಮ ಜವಾಬ್ದಾರಿ ಅಲ್ಲ. ಗಾಜಾ ಜನರ ರಕ್ಷಣೆ, ಆಹಾರ, ವಸತಿ ನೀಡುವ ಹೊಣೆ ಇಸ್ರೇಲ್ ಹಾಗೂ ವಿಶ್ವಸಂಸ್ಥಯದ್ದು ಎಂದು ನೇರವಾಗಿ ಉತ್ತರಿಸಿದ್ದಾರೆ.
ಹಮಾಸ್ ಉಗ್ರರು ಅಪಹರಿಸಿ ಬೆತ್ತಲೇ ಪರೇಡ್ ಮಾಡಿದ್ದ ಶಾನಿ ಮೃತದೇಹ ಪತ್ತೆ, ತಾಯಿ ಅಸ್ವಸ್ಥ!
ಹಮಾಸ್ ಒಂದು ಸಂಘಟನೆ. ಇದು ಹೋರಾಟದ ಸಂಘಟನೆ. ಹಮಾಸ್ ಪ್ಯಾಲೆಸ್ತಿನ್ ಹೋರಾಟದ ಭಾಗ ಎಂದು ಮೂಸಾ ಹೇಳಿದ್ದಾರೆ. ಈ ಮೂಲಕ ಹಮಾಸ್ ಉಗ್ರ ಸಂಘಟನೆ, ನಮ್ಮ ಜನರ ರಕ್ಷಣೆ ನಮ್ಮದಲ್ಲ. ನಮ್ಮದು ದಾಳಿ ಅಷ್ಟೇ ಎಂದು ನೇರವಾಗಿ ಉಲ್ಲೇಖಿಸಿದ್ದಾರೆ.
