ವಾಶಿಂಗ್ಟನ್(ಸೆ.11):   ಭಾರತ ಗಡಿಯೊಳಕ್ಕೆ ಉಗ್ರರನ್ನು ನಸುಳಲು ಅವಕಾಶ ಮಾಡಿಕೊಡುವುದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿರುವ ವಿರುದ್ಧ ಇದೀಗ ಭಾರತ ಹಾಗೂ ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ತನ್ನು ಭಯೋತ್ಪಾದಕ ಹಾಗೂ ಉಗ್ರರ ಪೋಷಣೆ ತಕ್ಷಣವೇ ನಿಲ್ಲಿಸಿ, ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಭಾರತ ಹಾಗೂ ಅಮೆರಿಕ ಕೌಂಟರ್ ಟೆರರಿಸಂ ಜಾಯಿಂಟ್ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಹೇಳಲಾಗಿದೆ.

ಹಿಜ್ಬುಲ್‌ ಉಗ್ರನಿಗೆ ಪಾಕ್‌ ಅಧಿಕಾರಿ ಸ್ಥಾನಮಾನ!

17ನೇ ಸಭೆ ಬಳಿಕ ಭಾರತ ಹಾಗೂ ಅಮೆರಿಕ ಜಂಟಿಯಾಗಿ, ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ರವಾನಿಸಿದೆ.  ಈ ಸಭೆಯಲ್ಲಿ ಭಯೋತ್ಪಾದಕ ನಿರ್ಮೂಲನೆಗೆ ಭಾರತ ಹಾಗೂ ಅಮೆರಿಕ ತೆಗೆದುಕೊಳ್ಳಬೇಕಾದ ನಿರ್ಣಯಗಳ ಕುರಿತು ಚರ್ಚಿಸಲಾಯಿತು. ಪ್ರಮುಖವಾಗಿ ಪಾಕಿಸ್ತಾನ ಗಡಿ ಸನಿಹದಲ್ಲಿ ಉಗ್ರ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಭಾರತದ ಮನವಿಗೆ ಸ್ಪಂದಿಸಿದ ರಷ್ಯಾ; ಪಾಕಿಸ್ತಾನಕ್ಕಿಲ್ಲ ಶಸ್ತ್ರಾಸ್ರ್ರ!

ಅಲ್ ಖೈದಾ, ಐಸಿಸ್, ಲಷ್ಕರ್ ಇ ತೊಯ್ಬಾ, ಜೈಶೇ ಇ ಮೊಹಮ್ಮದ್, ಹಿಜ್ಬ್ ಉಲ್ ಮುಜಾಹಿದ್ದೀನ್ ಸೇರಿದಂತೆ ಪ್ರಮುಖ ಉಗ್ರ ಸಂಘಟನೆಗಳನ್ನು ನಿಷೇಧಿಸಲು ಹಾಗೂ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯಿಸಲಾಗಿದೆ. ಇನ್ನು 200ರ ಮುಂಬೈ ದಾಳಿ ಹಾಗೂ ಪಠಾನ್‌ಕೋಟ್ ಮೇಲಿನ ಉಗ್ರರ ದಾಳಿಗೆ ನ್ಯಾಯ ಒದಗಿಸಬೇಕಿದೆ. ಇದಕ್ಕಾಗಿ ಪಾಕಿಸ್ತಾನದಲ್ಲಿರುವ ಭಾರತದ ಮೇಲಿನ ದಾಳಿ ರೂವಾರಿಗಳ ವಿರುದ್ದ ಕ್ರಮ ಅನಿವಾರ್ಯವಾಗಿದೆ ಎಂದು ಸಭಯಲ್ಲಿ ತೀರ್ಮಾನಿಸಲಾಗಿದೆ.