ಮಾಸ್ಕೋ(ಸೆ.04): ರಷ್ಯಾ ಜೊತೆಗೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡಿರುವ ಭಾರತ ಇದೀಗ ಪಾಕಿಸ್ತಾನಕ್ಕೆ ಶಾಕ್ ನೀಡಿದೆ. ಪಾಕಿಸ್ತಾನಕ್ಕೆ ಯಾವುದೇ ಶಸ್ತಾಸ್ತ್ರ ಪೂರೈಸಬಾರದು ಅನ್ನೋ ಭಾರತದ ಮನವಿಯನ್ನು ರಷ್ಯಾ ಸ್ವೀಕರಿಸಿದೆ.  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾ ಪ್ರವಾಸದಲ್ಲಿ ಈ ಮಹತ್ವದ ಮನವಿಗೆ ರಷ್ಯಾ ಸಮ್ಮತಿಸಿದೆ.

ರಕ್ಷಣಾ ಉತ್ಪನ್ನಗಳ ಆಮದಿಗೆ ಬ್ರೇಕ್: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!..

ಗುರುವಾರ(ಸೆ.03) ಮಾಸ್ಕೋದಲ್ಲಿ  ರಾಜನಾಥ್ ಸಿಂಗ್  ರಷ್ಯಾದ ಜನರಲ್ ಸೆರ್ಗೆ ಶೋಯಿಗು ಅವರನ್ನು  ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಭಾರತ ಹಾಗೂ ರಷ್ಯಾ ದ್ವಿಪಕ್ಷೀಯ ರಕ್ಷಣಾ ಸಂಬಂಧ ಕುರಿತು ಉಭಯ ದೇಶದ ರಕ್ಷಣಾ ಸಚಿವರು ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ಭಾರತದ ಮನವಿ ಪ್ರಕಾರ ಪಾಕಿಸ್ತಾನಕ್ಕೆ ಯಾವುದೇ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಿಲ್ಲ ಎಂದು ಪುನರುಚ್ಚರಿಸಿದೆ. 

 

ಭಾರತಕ್ಕೆ ಬಂದಿಳಿದ 'ರಫೇಲ್' ಲೋಹದ ಹಕ್ಕಿಗಳು: ಸೇನಾ ಇತಿಹಾಸದಲ್ಲಿ ಹೊಸ ಶಕೆ ಆರಂಭ!

ರಷ್ಯಾ ನೀತಿಯಿಂದ ಇದೀಗ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗಿದೆ. ಯುದ್ಧ ಶಸ್ತ್ರಾಸ್ತ್ರ ಪೂರೈಕೆ ಮಾಡುವ ದೇಶಗಳ ಪೈಕಿ ರಷ್ಯಾ ಅತೀ ದೊಡ್ಡ ಪಾತ್ರ ನಿರ್ವಹಿಸುತ್ತಿದೆ. ಆದರೆ ನೂತನ ನೀತಿಯಿಂದ ರಷ್ಯಾದಿಂದ ಪಾಕಿಸ್ತಾನ ಯಾವುದೇ ಯುದ್ಧ ಶಸ್ತ್ರಾಸ್ತ್ರ ಖರೀದಿ ಸಾಧ್ಯವಿಲ್ಲ.

ರಷ್ಯಾದ ರಕ್ಷಣಾ ಸಚಿವ ಜನರಲ್ ಸೆರ್ಗೆ ಶೋಯಿಗು ಅವರೊಂದಿಗೆ ಇಂದು ಮಾಸ್ಕೋದಲ್ಲಿ ಮಹತ್ವದ ಸಭೆ ನಡೆಸಿದ್ದೇನೆ.  ನಾವು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೇವೆ, ಅದರಲ್ಲೂ ವಿಶೇಷವಾಗಿ ಉಭಯ ದೇಶಗಳ ನಡುವೆ ರಕ್ಷಣಾ ಮತ್ತು ಕಾರ್ಯತಂತ್ರದ ಸಹಕಾರ ಕುರಿತು ಚರ್ಚಿಸಿದ್ದೇವೆ ಎಂದು ರಾಜನಾಥ್ ಸಿಂಗ್ ತಮ್ಮ ಸಭೆಯ ನಂತರ ಟ್ವೀಟ್ ಮಾಡಿದ್ದಾರೆ.