Asianet Suvarna News Asianet Suvarna News

International Flights ಸಂಚಾರ ಡಿಸೆಂಬರ್‌ 15ರಿಂದ ಆರಂಭ!

*2020ರ ಮಾ.23ರಿಂದ ನಿಂತಿದ್ದ ವಿಮಾನ ಸಂಚಾರ
*ಒಂದೂವರೆ ವರ್ಷ ಬಳಿಕ ಸಂಚಾರ ಎಂದಿನ ಸ್ಥಿತಿಗೆ
*ಕೋವಿಡ್‌ ಇಳಿಮುಖ ಹಿನ್ನೆಲೆಯಲ್ಲಿ ಪುನಾರಂಭ!
 

India to resume scheduled international flights from December 15 says Aviation Ministry mnj
Author
Bengaluru, First Published Nov 27, 2021, 1:52 PM IST
  • Facebook
  • Twitter
  • Whatsapp

ನವದೆಹಲಿ(ನ.27):  ಇದೇ ಡಿಸೆಂಬರ್‌ 15ರಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ (International Flights) ಸಂಚಾರ ಆರಂಭಿಸಲು ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ಶುಕ್ರವಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇದರಿಂದಾಗಿ ಅಂದಿನಿಂದ ಕೋವಿಡ್‌ಪೂರ್ವ  ಕಾಲದಲ್ಲಿ ಇದ್ದಂತೆ ಎಲ್ಲ ದೈನಂದಿನ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಡೆಯಲಿದೆ. ಕೋವಿಡ್‌ ಅಬ್ಬರ ಆರಂಭವಾಗಿದ್ದ ಕಾರಣ 2020ರ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಲ್ಲಿಸಲಾಗಿತ್ತು. ಆದರೆ ಕೋವಿಡ್‌ ಮೊದಲ ಅಲೆಯ (Covid first wave) ಅಬ್ಬರ 2020ರ ಜುಲೈನಲ್ಲಿ ಕೊಂಚ ಇಳಿಕೆಯಾದ ಪರಿಣಾಮ 28 ದೇಶಗಳೊಂದಿಗೆ ಮಾತ್ರ ‘ದ್ವಿಪಕ್ಷೀಯ ಸಹಮತಿ’ ಆಧಾರದಲ್ಲಿ ಸೀಮಿತ ವಿಶೇಷ ವಿಮಾನಗಳ ಸಂಚಾರ ಆರಂಭವಾಗಿತ್ತು.

ಆದರೆ ಕೋವಿಡ್‌ 2ನೇ‌ ಅಲೆ ಭಾರತದಲ್ಲಿ ತಗ್ಗುತ್ತಿದ್ದು, ಕೆಲ ಪಾಶ್ಚಾತ್ಯ ದೇಶಗಳನ್ನು ಹೊರತುಪಡಿಸಿ ಮಿಕ್ಕ ದೇಶಗಳಲ್ಲಿ ಸೋಂಕು ನಿಯಂತ್ರಣದಲ್ಲಿದೆ ಹಾಗೂ ಲಸಿಕಾಕರಣ (Vaccination) ಕೂಡ ತೀವ್ರಗೊಂಡಿದೆ. ಹೀಗಾಗಿ ಎಂದಿನಂತೆ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭಿಸುವ ಸುಳಿವನ್ನು ಇತ್ತೀಚೆಗೆ ವಿಮಾನಯಾನ ಸಚಿವಾಲಯ ನೀಡಿತ್ತು. ಈ ಪ್ರಕಾರ ಶುಕ್ರವಾರ ಆದೇಶ ಹೊರಬಿದದ್ದಿದೆ. ‘ಆರೋಗ್ಯ ಸಚಿವಾಲಯ, ಗೃಹ ಸಚಿವಾಲಯ ಹಾಗೂ ವಿದೇಶಾಂಗ ಸಚಿವಾಲಯಗಳ ಜತೆ ಚರ್ಚೆ ನಡೆಸಿ ಸಮಗ್ರ ಅಧ್ಯಯನದ ಬಳಿಕ ಡಿ.15ರಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ವಿಮಾನಯಾನ ಸಚಿವಾಲಯ ಹೇಳಿದೆ.

ಡಿಸೆಂಬರ್‌ 15ರಿಂದ ಸಂಚಾರ!

“ಭಾರತಕ್ಕೆ ಮತ್ತು ಭಾರತದಿಂದ ನಿಗದಿತ ವಾಣಿಜ್ಯ ಅಂತರರಾಷ್ಟ್ರೀಯ ಪ್ರಯಾಣಿಕರ ಸೇವೆಗಳನ್ನು ಪುನರಾರಂಭಿಸುವ ವಿಷಯವನ್ನು ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಪರಿಶೀಲಿಸಲಾಗಿದೆ. ಮತ್ತು ಭಾರತಕ್ಕೆ ಮತ್ತು ಭಾರತದಿಂದ ನಿಗದಿತ ವಾಣಿಜ್ಯ ಅಂತರರಾಷ್ಟ್ರೀಯ ಪ್ರಯಾಣಿಕರ ಸೇವೆಗಳನ್ನು 15 ಡಿಸೆಂಬರ್, 2021 ರಿಂದ ಪುನರಾರಂಭಿಸಬಹುದು ಎಂದು ನಿರ್ಧರಿಸಲಾಗಿದೆ." ಎಂದು ನಾಗರಿಕ ವಿಮಾನಯಾನ ಸಚಿವಾಲಯವು  ತನ್ನ ಆದೇಶದಲ್ಲಿ ತಿಳಿಸಿದೆ. COVID-19 ಕಾರಣದಿಂದಾಗಿ ಕಳೆದ ವರ್ಷ ಮಾರ್ಚ್ 23 ರಿಂದ ಭಾರತದಲ್ಲಿ ನಿಗದಿತ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ. ಆದಾಗ್ಯೂ, ವಿಶೇಷ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಕಳೆದ ವರ್ಷ ಜುಲೈನಿಂದ ಕಾರ್ಯನಿರ್ವಹಿಸುತ್ತಿವೆ.

Hubballi: ಮತ್ತಷ್ಟು ಸುಂದರವಾಗಲಿದೆ ಏರ್‌ಪೋರ್ಟ್‌

ದಕ್ಷಿಣ ಆಫ್ರಿಕಾದಲ್ಲಿ (South Africa) ಮತ್ತು ಬೋಟ್ಸ್ವಾನಾ (Botswana), ಇಸ್ರೇಲ್ (Isreal) ಮತ್ತು ಹಾಂಗ್ ಕಾಂಗ್‌ನಲ್ಲಿ (Hong Kong) ಮೊದಲು ಪತ್ತೆಯಾದ B.1.1.529 ತಳಿಯ ಬಗ್ಗೆ ಕಳವಳದ ನಡುವೆಯೂ ನಿಗದಿತ ಅಂತರಾಷ್ಟ್ರೀಯ ವಿಮಾನವನ್ನು ಮರು-ತೆರೆಯುವ ನಿರ್ಧಾರ ಮಾಡಲಾಗಿದೆ. ಹೊಸ ರೂಪಾಂತರವನ್ನು (New Corona Variant) ನಿಲ್ಲಿಸಲು ಸರ್ಕಾರಗಳು ಹರಸಾಹಸ ಮಾಡುತ್ತಿರುವುದರಿಂದ ದಕ್ಷಿಣ ಆಫ್ರಿಕಾದಿಂದ ಹೆಚ್ಚಿನ ಪ್ರಯಾಣವನ್ನು ಜರ್ಮನಿ, ಇಟಲಿ ಹಾಗೂ ಯುಕೆ ನಿಷೇಧಿಸಿವೆ.  ಯುರೋಪಿಯನ್ ಯೂನಿಯನ್ ಪ್ರತ್ಯೇಕವಾಗಿ ದಕ್ಷಿಣ ಆಫ್ರಿಕಾದಿಂದ ಪ್ರಯಾಣವನ್ನು ನಿಷೇಧಿಸಲು ಪ್ರಸ್ತಾಪಿಸಿದೆ.

Pilot lands plane in Antarctica: ಮೊದಲ ಬಾರಿಗೆ ಮಂಜುಗಡ್ಡೆ ಮೇಲಿಳಿದ ಕಮರ್ಷಿಯಲ್ ವಿಮಾನ

ವಿಶ್ವ ಆರೋಗ್ಯ ಸಂಸ್ಥೆ (World health organisation) ತಕ್ಷಣವೇ ಪ್ರಯಾಣದ ನಿರ್ಬಂಧಗಳನ್ನು ಹೇರುವುದರ ವಿರುದ್ಧ ದೇಶಗಳಿಗೆ ಎಚ್ಚರಿಕೆ ನೀಡಿದೆ. ಅಪಾಯ ಆಧಾರಿತ ಮತ್ತು ವೈಜ್ಞಾನಿಕ ವಿಧಾನವನ್ನು ಅನುಸರಿಸಿ ನಿರ್ಬಂಧ ಹೇರುವಂತೆ ದೇಶಗಳಿಗೆ ಕರೆ ನೀಡಿದೆ. ಕಳೆದ ವಾರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರು ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳನ್ನು  ಆರಂಭಿಸುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದ್ದರು. 

Follow Us:
Download App:
  • android
  • ios