Asianet Suvarna News Asianet Suvarna News

Pilot lands plane in Antarctica: ಮೊದಲ ಬಾರಿಗೆ ಮಂಜುಗಡ್ಡೆ ಮೇಲಿಳಿದ ಕಮರ್ಷಿಯಲ್ ವಿಮಾನ

ಬಸ್, ಬೈಕ್, ಕಾರು ಪಾರ್ಕ್ ಮಾಡುವಷ್ಟು ಸುಲಭವಲ್ಲ ಅಕಾಶದಲ್ಲಿ ಹಾರಾಡೋ ವಿಮಾನವನ್ನು ಲ್ಯಾಂಡ್ ಮಾಡಿಸುವುದು. ಆದರೆ ಇಲ್ಲೊಂದು ಕಡೆ ಮೊದಲ ಬಾರಿಗೆ ವಿಮಾನವನ್ನು ಅಂಟಾಕ್ರ್ಟಿಕಾ(Antarctica) ಇಳಿಸಲಾಗಿದೆ.

For the first time in history pilot lands commercial Airbus plane in Antarctica dpl
Author
Bangalore, First Published Nov 25, 2021, 3:55 PM IST

ಇತಿಹಾಸದಲ್ಲಿ ಮೊದಲ ಬಾರಿಗೆ ಕಮರ್ಷಿಯಲ್ ಏರ್‌ಬಸ್(Commericail Airbus) A340 ಅಂಟಾರ್ಕ್ಟಿಕಾದ(Antarctica) ಹಿಮಾವೃತ ಪ್ರದೇಶದ ಮೇಲೆ ಇಳಿದಿದೆ. ಐತಿಹಾಸಿಕ ಟಚ್‌ಡೌನ್‌ನ ಏಳು ನಿಮಿಷಗಳ ಕ್ಲಿಪ್ ಈಗ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ನೆಲದ ಮೇಲೆ ವಿಮಾನ ಲ್ಯಾಂಡ್ ಮಾಡಿದಷ್ಟು ಸುಲಭ ಅಲ್ಲವೇ ಅಲ್ಲ ಹಿಮಾವೃತ ಪ್ರದೇಶದಲ್ಲಿ ಸೇಫಾಗಿ ವಿಮಾನ ಇಳಿಸುವುದು. ಪೈಲಟ್ ಕಾರ್ಲೋಸ್ ಮಿರ್ಪುರಿ ಮತ್ತು ಅವರ ಸಿಬ್ಬಂದಿ ನವೆಂಬರ್ 2 ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಿಂದ 4,506 ಕಿಮೀ ಪ್ರಯಾಣವನ್ನು ಪ್ರಾರಂಭಿಸಿದರು. ಇವರ ಈ ಪ್ರಯಾಣ ಗಮ್ಯಸ್ಥಾನವನ್ನು ತಲುಪಲು ಐದು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು.

ವಿಮಾನ ಮತ್ತು ಏರ್‌ಕ್ರೂ ಎರಡನ್ನೂ ಬಾಡಿಗೆಗೆ ತೆಗೆದುಕೊಳ್ಳುವ ಬಾಟಿಕ್ ಏವಿಯೇಷನ್ ​​ಕಂಪನಿಯಾದ ಹೈ-ಫ್ಲೈನಲ್ಲಿ ಸಿಬ್ಬಂದಿ ಉದ್ಯೋಗಿಯಾಗಿದ್ದಾರೆ. ಅವರು ಲಾಜಿಸ್ಟಿಕ್ಸ್ ಮತ್ತು ವಿಮೆಯನ್ನು ಸಹ ನಿರ್ವಹಿಸುತ್ತಾರೆ.

English Channel Tragedy: ಬೋಟ್ ಮಗುಚಿ 31 ವಲಸಿಗರು ಸಾವು

ತಿಂಗಳ ತಯಾರಿಯಿಂದಾಗಿ ಹಿಮಾವೃತ ಪ್ರದೇಶದಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಯಿತು ಎಂದು ಪೈಲಟ್ ಹೇಳಿದ್ದಾರೆ. 
ನಿಖರವಾದ ಸಿದ್ಧತೆಯ ಹೊರತಾಗಿಯೂ ಪ್ರಯಾಣವು ಬಹಳಷ್ಟು ಆತಂಕ ಮತ್ತು ಭಯವನ್ನು ತಂದಿದೆ ಎಂದು ಪೈಲಟ್ ಮಿರ್ಪುರಿ ಹೇಳಿದ್ದಾರೆ.

ಇದು ಸಾಮಾನ್ಯ ತಯಾರಿ ಅಗತ್ಯವಿರುವ ಲ್ಯಾಂಡಿಂಗ್ ಅಲ್ಲವೇ ಅಲ್ಲ. ಇಳಿಯುವ ಮೊದಲು ಅಂಟಾರ್ಟಿಕಾದಲ್ಲಿ 10,000-ಅಡಿಗಳ ತಾತ್ಕಾಲಿಕ ರನ್‌ವೇಯಲ್ಲಿ ಗ್ರೂವ್‌ಗಳನ್ನು ಕೆತ್ತಬೇಕಾಗಿತ್ತು. ಏರ್‌ಬಸ್‌ಗೆ ಜಾರುವ ಅಪಾಯವಿಲ್ಲದೆ ಇಳಿಯಲು ಸಾಕಷ್ಟು ಹಿಡಿತವನ್ನು ನೀಡಲು ಇದನ್ನು ಮಾಡಲೇಬೇಕಾಗಿರುತ್ತದೆ.

Follow Us:
Download App:
  • android
  • ios