ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ಟರ್ಕಿ ವಿರುದ್ಧ ಭಾರತ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಭಾರತ ಮತ್ತು ಟರ್ಕಿ ನಡುವಿನ ಶತಕೋಟಿ ಡಾಲರ್ ವ್ಯಾಪಾರ ಒಪ್ಪಂದಗಳು ಪರಿಶೀಲನೆಯಲ್ಲಿವೆ. ಕಾಶ್ಮೀರ ವಿಷಯದಲ್ಲಿ ಟರ್ಕಿಯ ನಿಲುವು ಭವಿಷ್ಯದ ಒಪ್ಪಂದಗಳ ಮೇಲೆ ಪರಿಣಾಮ ಬೀರಬಹುದು.
ಉಗ್ರರಿಗೆ ಪೋಷಣೆ ನೀಡುತ್ತಿರುವ ಯಾರಿಗೇ ಆದರೂ ನಾವು ಸುಮ್ಮನೇ ಬಿಡುವುದಿಲ್ಲ ಎಂದು ಈ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದರು. ಧರ್ಮ ಕೇಳಿ, ಪೆಹಲ್ಗಾಮ್ನಲ್ಲಿ ಹಿಂದೂ ಪುರುಷರ ನರಮೇಧ ಮಾಡಿದ ಪಾಕಿಸ್ತಾನ ಪೋಷಿತ ಉಗ್ರರು ಅವರಿಗೆ ಬೆಂಬಲ ನೀಡುತ್ತಿರುವ ಎಲ್ಲರೂ ಅವರು ಊಹಿಸಿಕೊಳ್ಳಲು ಅಸಾಧ್ಯವಾಗುವಂಥ ಶಿಕ್ಷೆ ನೀಡುತ್ತೇವೆ ಎಂದು ಮೋದಿ ಹೇಳಿದ್ದರು. ಅದರಂತೆಯೇ ಇದೀಗ ಪಾಕಿಸ್ತಾನ ಭಾರತದ ಕಾಲಿಗೆ ಬೀಳುವ ಸ್ಥಿತಿ ಎದುರಾಗಿದೆ. ಕದನ ವಿರಾಮದ ಬಳಿಕವೂ ತನ್ನ ಕ್ರೂರ ಚಾಳಿಯನ್ನು ಮುಂದುವರೆಸುವ ದುಸ್ಸಾಹಸ ತೋರಿದ್ದ ಪಾಪಿಸ್ತಾನಕ್ಕೆ, ಭಾರತ ಸರಿಯಾದ ತಿರುಗೇಟು ಕೊಡುವ ಮೂಲಕ, ಈಗ ಗೋಳೋ ಎಂದು ಕಣ್ಣೀರು ಹಾಕುವ ಸ್ಥಿತಿ ಪಾಕ್ಗೆ ಬಂದಿದೆ. ಆದರೆ ಇದರ ಬೆನ್ನಲ್ಲೇ ಇದೀಗ ಟರ್ಕಿಯ ಮೇಲೆಯೂ ಆಪರೇಷನ್ ಶುರು ಮಾಡಿದೆ ಭಾರತ!
ಪಾಕಿಸ್ತಾನಕ್ಕೆ ಗುಟ್ಟಾಗಿ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಟರ್ಕಿ. ಇದು ಭಾರತದ ವಿರೋಧ ಕೃತ್ಯಕ್ಕೆ ಬಳಕೆಯಾಗುವುದಕ್ಕಾಗಿ ಹೀಗೆ ಮಾಡಲಾಗುತ್ತಿದೆ. ತಾವು ಉಗ್ರರಿಗೆ ಸಪೋರ್ಟ್ ಮಾಡುತ್ತಿಲ್ಲ ಎಂದು ರಾಜಾರೋಷವಾಗಿ ಸುಳ್ಳು ಹೇಳಿದ್ದ ಟರ್ಕಿಗೆ ಇದಾಗಲೇ ಭಾರತ ಪಾಠ ಕಲಿಸಲು ಮುಂದಾಗಿದೆ. ಭಾರತ ಮತ್ತು ಟರ್ಕಿಯ ನಡುವೆ ಶತಕೋಟಿ ಡಾಲರ್ಗಳ ಒಪ್ಪಂದವಿದೆ. ಆಟೋಮೊಬೈಲ್ ನಿಂದ ಹಿಡಿದು ಐಟಿ ವರೆಗೆ, ಮೆಟ್ರೋ ರೈಲಿನಿಂದ ಹಿಡಿದು ಸುರಂಗ ಮಾರ್ಗದವರೆಗೆ - ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ದೆಹಲಿ ಹೀಗೆ ಕನಿಷ್ಠ ಐದು ರಾಜ್ಯಗಳಲ್ಲಿ ಟರ್ಕಿಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಟರ್ಕಿಶ್ ಸಂಸ್ಥೆಗಳು ಮತ್ತು ಕಂಪೆನಿಗಳೊಂದಿಗೆ, ವಿವಿಧ ವಲಯಗಳಲ್ಲಿ ಸಹಿ ಮಾಡಲಾದ ಹಲವಾರು ಒಪ್ಪಂದಗಳನ್ನು ಗಣನೆಗೆ ತೆಗೆದುಕೊಂಡರೆ, ದ್ವಿಪಕ್ಷೀಯ ವ್ಯಾಪಾರವು 2024 ಹಣಕಾಸು ವರ್ಷದಲ್ಲಿ 10.4 ಬಿಲಿಯನ್ ಡಾಲರ್ ಆಗಿದೆ.
ಪಾಕಿಸ್ತಾನದಲ್ಲಿ ಮತ್ತೆ ಮತ್ತೆ ಭೂಂಕಪ! ಪರಮಾಣು ಪರೀಕ್ಷೆ ನಡೆಸ್ತಿದ್ಯಾ ಪಾಕ್? ಏನಂದ್ರು ತಜ್ಞರು?
"ಏಪ್ರಿಲ್ 2000 ರಿಂದ ಸೆಪ್ಟೆಂಬರ್ 2024 ರವರೆಗೆ US$ 240.18 ಮಿಲಿಯನ್ ಸಂಚಿತ ವಿದೇಶಿ ನೇರ ಹೂಡಿಕೆ (FDI)ಯೊಂದಿಗೆ ಟರ್ಕಿ ಭಾರತಕ್ಕೆ FDI ಇಕ್ವಿಟಿ ಒಳಹರಿವಿನಲ್ಲಿ 45 ನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ಇಲಾಖೆಯಿಂದ ಸ್ಥಾಪಿಸಲ್ಪಟ್ಟ ಟ್ರಸ್ಟ್ ಆಗಿದೆ. ಈ ಹೂಡಿಕೆಗಳು ನಿರ್ಮಾಣ, ಉತ್ಪಾದನೆ, ವಾಯುಯಾನ ಮತ್ತು ಮೆಟ್ರೋ ರೈಲು ಮೂಲಸೌಕರ್ಯದಂತಹ ಕಾರ್ಯತಂತ್ರದ ವಲಯಗಳನ್ನು ಮತ್ತು ಶಿಕ್ಷಣ ಮತ್ತು ಮಾಧ್ಯಮದಂತಹ ಜ್ಞಾನ ಹಂಚಿಕೆ ವಲಯಗಳನ್ನು ವ್ಯಾಪಿಸಿವೆ. ಏತನ್ಮಧ್ಯೆ, ಕಳೆದ ದಶಕದಲ್ಲಿ ಎರಡೂ ರಾಷ್ಟ್ರಗಳ ನಡುವೆ ಹಲವಾರು ತಿಳಿವಳಿಕೆ ಒಪ್ಪಂದಗಳಿಗೆ (MoU) ಸಹಿ ಹಾಕಲಾಗಿದೆ - ಗಸಗಸೆ ಬೀಜಗಳ ವ್ಯಾಪಾರದಿಂದ ದೂರಸಂಪರ್ಕ, ಸಂಸ್ಕೃತಿ, ಶಿಕ್ಷಣ, ಮಾಧ್ಯಮ ಮತ್ತು ರಾಜತಾಂತ್ರಿಕತೆಯ ಸಹಕಾರದವರೆಗೆ ಈ ಒಪ್ಪಂದಗಳಿವೆ.
ಟರ್ಕಿ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತಕ್ಕೆ ವ್ಯಾಪಾರ, ನಿರ್ಮಾಣ ಮತ್ತು ತಂತ್ರಜ್ಞಾನ ಪಾಲುದಾರನಾಗಿದೆ, ಆದರೆ, ಇದೀಗ ಆಪರೇಷನ್ ಸಿಂದೂರ ಮತ್ತು ನಂತರದ ಘಟನೆಗಳ ನಂತರ, ಸರ್ಕಾರವು ಈಗ ದೇಶದೊಂದಿಗೆ ತನ್ನ ದ್ವಿಪಕ್ಷೀಯ ನೀತಿಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಮಾಧ್ಯಮಗಳ ಜೊತೆ ಮಾತನಾಡಿರು ಸಚಿವಾಲಯದೊಂದಿಗೆ ಕೆಲಸ ಮಾಡುತ್ತಿರುವ ಹಿರಿಯ ವ್ಯಾಪಾರ ತಜ್ಞರು, "ಎಲ್ಲಾ ಒಪ್ಪಂದಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ ಕೆಲವು ಒಪ್ಪಂದಗಳು ಅದರಲ್ಲಿಯೂ ಮುಖ್ಯವಾಗಿ ವ್ಯಾಪಾರ ಒಪ್ಪಂದಗಳು ಅಥವಾ ಯೋಜನಾ ಒಪ್ಪಂದಗಳನ್ನು ದೀರ್ಘಾವಧಿಯ ಆಧಾರದ ಮೇಲೆ ಮಾಡಲಾಗಿದೆ. ಪ್ರಸ್ತುತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ನಂತರ ಅವು ಪರಿಣಾಮ ಬೀರದಿರಬಹುದು. ಆದಾಗ್ಯೂ, ಕಾಶ್ಮೀರ ವಿಷಯದ ಬಗ್ಗೆ ಟರ್ಕಿಯ ನಿರಂತರ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ, ಭವಿಷ್ಯದ ಯಾವುದೇ ವ್ಯಾಪಾರ ಒಪ್ಪಂದಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದಾಗಲೇ ಭಾರತ ಇವುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಪಾಕ್ನಲ್ಲಿ ವಿಕಿರಣ ಸೋರಿಕೆ- ವೈದ್ಯಕೀಯ ಎಮರ್ಜೆನ್ಸಿ? ಕದನ ವಿರಾಮದ ಘನಘೋರ ಸತ್ಯ ಬಯಲು?


