Asianet Suvarna News Asianet Suvarna News

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಎತ್ತಿದ ಪಾಕಿಸ್ತಾನ : ಭಾರತದ ಖಡಕ್ ತಿರುಗೇಟು!

*ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ !
*ಪಾಕ್‌ನಿಂದ ವಿಶ್ವಸಂಸ್ಥೆ ವೇದಿಕೆ ದುರುಪಯೋಗ : ಭಾರತ ತಿರುಗೇಟು 
*ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಮಾತ್ರ ಮಾತುಕತೆ
*ನಿಷೇಧಿತ ಭಯೋತ್ಪಾದಕರಿಗೆ ಪಾಕಿಸ್ತಾನದಿಂದ ಆತಿಥ್ಯ : ಕಾಜಲ್ ಭಟ್

India Hits back at Pakistan over Kashmir issue in United nations security council mnj
Author
Bengaluru, First Published Nov 17, 2021, 11:34 AM IST

ಯುಎಸ್‌ಎ(ನ.17): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UN Security Council) 15 ರಾಷ್ಟ್ರಗಳ ಸಭೆಯಲ್ಲಿ ಕಾಶ್ಮೀರ (Kasmir) ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ (Pakistan) ಭಾರತವು  ತಿರುಗೇಟು ನೀಡಿದೆ. ಪಾಕಿಸ್ತಾನದಿಂದ ನಡೆಸಲಾಗುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತವು (India) ದೃಢ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಲಿದೆ ಎಂದು ವಿಶ್ವಸಂಸ್ಥೆಯಲ್ಲಿ ನವದೆಹಲಿಯ ಪ್ರತಿನಿಧಿ ಮಂಗಳವಾರ ಹೇಳಿದ್ದಾರೆ. ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಮಾತ್ರ ನಡೆಯಬಹುದಾದ ಯಾವುದೇ ಅರ್ಥಪೂರ್ಣ ಸಂವಾದಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಭಾರತ ಹೊಂದಿದೆ ಎಂದು ಹೇಳಿದೆ.

"ಭಾರತವು ಪಾಕಿಸ್ತಾನ ಸೇರಿದಂತೆ ಎಲ್ಲಾ ದೇಶಗಳೊಂದಿಗೆ ಸಾಮಾನ್ಯ ನೆರೆಹೊರೆಯ ಸಂಬಂಧವನ್ನು (International Relations) ಬಯಸುತ್ತದೆ. ಸಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಗೆ ಸಂಬಂಧಪಟ್ಟಂತೆ  ಯಾವುದೇ ಸಮಸ್ಯೆಗಳಿದ್ದರೆ ಅದನ್ನು ದ್ವಿಪಕ್ಷೀಯ ಮತ್ತು ಶಾಂತಿಯುತವಾಗಿ   ಪರಿಹರಿಸಲು ಬದ್ಧವಾಗಿದೆ" ಎಂದು ಯುಎನ್‌ಗೆ ಭಾರತದ ಖಾಯಂ ಮಿಷನ್‌ನ ಕೌನ್ಸಿಲರ್ ಕಾಜಲ್ ಭಟ್ (Kajal Bhat) ಹೇಳಿದರು.

ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಮಾತ್ರ ಮಾತುಕತೆ!

ಭಯೋತ್ಪಾದನೆ (Terrorism), ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಮಾತ್ರ ಯಾವುದೇ ರೀತಿಯ  ಮಾತುಕತೆ  ನಡೆಸಬಹುದು. ಅಂತಹ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ. ಅಲ್ಲಿಯವರೆಗೆ ಭಾರತವು ಗಡಿಯಾಚೆಗೆ ಭಯೋತ್ಪಾದನೆಗೆ ಪ್ರತಿಕ್ರಿಯಿಸಲು ದೃಢ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. 

ಡಬಲ್‌ ಡೋಸ್‌ನಿಂದ 1 ವರ್ಷಕ್ಕಿಂತ ಹೆಚ್ಚಿನ ಸುರಕ್ಷೆ : ಸೌಮ್ಯಾ ಸ್ವಾಮಿನಾಥನ್‌!

"ನನ್ನ ದೇಶದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರಕ್ಕಾಗಿ ವಿಶ್ವಸಂಸ್ಥೆ ಒದಗಿಸಿದ ವೇದಿಕೆಗಳನ್ನು ಪಾಕಿಸ್ತಾನದ ಪ್ರತಿನಿಧಿ ದುರುಪಯೋಗಪಡಿಸಿಕೊಂಡಿದ್ದು (Misuse) ಇದೇ ಮೊದಲಲ್ಲ. ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗರ ಹಲವು ಸವಲತ್ತು ನೀಡಲಾಗಿದೆ ಆದರೆ ಸಾಮಾನ್ಯ ಜನರ ಜೀವನ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ (Minority community) ಸೇರಿದವರ ಜೀವನ ತಲೆಕೆಳಗಾಗಿದೆ" ಎಂದು ಭಟ್ ಹೇಳಿದರು.

ಪಾಕಿಸ್ತಾನಕ್ಕೆ ಭಾರತದ ತಿರುಗೇಟು!

ವಿಶ್ವಸಂಸ್ಥೆಯಲ್ಲಿನ '' ರಾಜತಾಂತ್ರಿಕತೆಯ ಮೂಲಕ ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆ'' ಕುರಿತು ಬಹಿರಂಗ ಚರ್ಚೆಯಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಂ (Munir Akram) ಅವರು  ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ ಭಟ್ ಪ್ರತಿಕ್ರಿಯಿಸಿದರು. ಭಯೋತ್ಪಾದಕರಿಗೆ ಆಶ್ರಯ ನೀಡುವ, ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ಇತಿಹಾಸ ಮತ್ತು ನೀತಿಯನ್ನು ಪಾಕಿಸ್ತಾನ ಹೊಂದಿದೆ ಎಂದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ತಿಳಿದಿದೆ ಎಂದು  ಭಟ್ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.  

ಪಾಕ್‌ ಪ್ರಧಾನಿ ಇಮ್ರಾನ್‌ ಪದಚ್ಯುತಿ?: 5 ದಿನದಲ್ಲಿ ಹುದ್ದೆ ತೊರೆಯಲು ಸೇನೆ ತಾಕೀತು!

"ಪಾಕಿಸ್ತಾನ ರಾಜ್ಯ ನೀತಿಯ ವಿಷಯವಾಗಿ ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವ, ತರಬೇತಿ ನೀಡುವ, ಹಣಕಾಸು ಒದಗಿಸುವ ಮತ್ತು ಶಸ್ತ್ರಾಸ್ತ್ರ ನೀಡುವ ದೇಶವಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಇದು ಯುಎನ್ ಭದ್ರತಾ ಮಂಡಳಿಯಿಂದ ನಿಷೇಧಿಸಲ್ಪಟ್ಟ ಅತಿ ಹೆಚ್ಚು ಸಂಖ್ಯೆಯ ಭಯೋತ್ಪಾದಕರಿಗೆ ಆತಿಥ್ಯ ವಹಿಸುವ ಅಮಾನುಷ ದಾಖಲೆಯನ್ನು ಹೊಂದಿದೆ ಎಂದು ಕಾಜಲ್‌ ಹೇಳಿದ್ದಾರೆ

POK ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಿ!

ಭಾರತದ ನಿಲುವಿನ ಬಗ್ಗೆ ಮಾತನಾಡುತ್ತಾ, ಜಮ್ಮು ಮತ್ತು ಕಾಶ್ಮೀರ (Jammu & Kasmir) ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಅವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಇದು ಪಾಕಿಸ್ತಾನದ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ಜತೆಗೆ ತನ್ನ ಅಕ್ರಮ ವಶದಲ್ಲಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡುವಂತೆ ಭಾರತ ಪಾಕಿಸ್ತಾನಕ್ಕೆ ಕರೆ ನೀಡಿತು.

Follow Us:
Download App:
  • android
  • ios