Asianet Suvarna News Asianet Suvarna News

ಡಬಲ್‌ ಡೋಸ್‌ನಿಂದ 1 ವರ್ಷಕ್ಕಿಂತ ಹೆಚ್ಚಿನ ಸುರಕ್ಷೆ : ಸೌಮ್ಯಾ ಸ್ವಾಮಿನಾಥನ್‌!

*ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಅವಧಿಗೆ ಕೋವಿಡ್‌ನಿಂದ ರಕ್ಷಣೆ
*ಮತ್ತೆ ಜಾಗತಿಕ ಮಟ್ಟದಲ್ಲಿ ಸೋಂಕು ಉಲ್ಬಣ ನಿರೀಕ್ಷಿತ
*ಆದರೆ ಲಸಿಕೆಯಿಂದಾಗಿ ಸಾವು ಗಮನಾರ್ಹ ಏರಿಕೆ ಇಲ್ಲ
*ಡಬ್ಲ್ಯುಎಚ್‌ಒ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ ಅಭಿಪ್ರಾಯ

Double Dose May Offer Protection for Year or More said WHO Scientist Soumya Swaminathan mnj
Author
Bengaluru, First Published Nov 17, 2021, 6:46 AM IST
  • Facebook
  • Twitter
  • Whatsapp

ನವದೆಹಲಿ(ನ17): ಕೋವಿಡ್‌  ಲಸಿಕೆಗಳು (Corona Vaccine) ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಸೋಂಕಿನಿಂದ (Virus) ರಕ್ಷಣೆ ನೀಡಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಹಿರಿಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ (Soumya Swaminathan) ಹೇಳಿದ್ದಾರೆ. ಇದೇ ವೇಳೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸೋಂಕಿನ ಪ್ರಮಾಣ ಉಲ್ಬಣಗೊಳ್ಳುವುದು ನಿರೀಕ್ಷಿತವಾಗಿದೆ ಎಂದಿದ್ದಾರೆ. ಪಶ್ಚಿಮ ಯುರೋಪ್‌ನ (Europe) ಹಲವು ದೇಶಗಳಲ್ಲಿ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಜೊತೆಗೆ ನಾನಾ ಕಾರಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಆದರೆ ಸಾವಿನ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ದಾಖಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ, ಸೋಂಕಿಗೆ ತುತ್ತಾಗುವ ಸಾಧ್ಯತೆ ಇದ್ದ ಬಹುತೇಕ ಜನರಿಗೆ ಎರಡೂ ಡೋಸ್‌ ಲಸಿಕೆ (2nd Dose) ನೀಡಿರುವುದು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಇತ್ತೀಚಿನ ಸಾಕ್ಷ್ಯಗಳ ಅನ್ವಯ, ಎರಡೂ ಡೋಸ್‌ ಲಸಿಕೆ ಪಡೆದ ಬಹುತೇಕ ವಯಸ್ಕರಲ್ಲಿ ಒಂದು ವರ್ಷದ ಬಳಿಕ ರೋಗದ ವಿರುದ್ಧ ಹೋರಾಡುವ ಪ್ರತಿಕಾಯಗಳ (Antibodies) ಪ್ರಮಾಣದಲ್ಲಿ ಇಳಿಕೆಯಾದರೂ, ಲಸಿಕೆಯು ಕನಿಷ್ಠ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ (A Year or More)ರಕ್ಷಣೆ ನೀಡುವುದು ಕಂಡುಬಂದಿದೆ ಎಂದಿದ್ದಾರೆ.

ಸಮರ್ಥನೆ:

ಈ ನಡುವೆ ಕೋವ್ಯಾಕ್ಸಿನ್‌ಗೆ (Covaxin) ಅನುಮತಿ ನೀಡಲು ಸುದೀರ್ಘ ಅವಧಿಗೆ ತೆಗೆದುಕೊಂಡಿದ್ದನ್ನು ಸಮರ್ಥಿಸಿದ ಡಾ. ಸೌಮ್ವಾ ಸ್ವಾಮಿನಾಥನ್‌, ಸ್ವತಂತ್ರ ವೈಜ್ಞಾನಿಕ (scientific) ಮತ್ತು ತಾಂತ್ರಿಕ (Technical) ಪ್ರಕ್ರಿಯೆಗಳನ್ನು ಗೌರವಿಸಬೇಕು. ಯಾವುದೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಪ್ರಕ್ರಿಯೆಯು ಕನಿಷ್ಠ 45ರಿಂದ 165 ದಿನಗಳವರೆಗೆ ನಡೆಯುತ್ತದೆ. ಕೋವ್ಯಾಕ್ಸಿನ್‌ಗೆ 90 ದಿನಗಳಲ್ಲೇ ಅಂಥ ಅನುಮತಿ ಸಿಕ್ಕಿದೆ. ಹೀಗಾಗಿ ವ್ಯಾಕ್ಸಿನ್‌ಗೆ ಅನುಮತಿ ನೀಡಲು ಸುದೀರ್ಘ ಅವಧಿ ತೆಗೆದುಕೊಳ್ಳಲಾಗಿದೆ ಎಂಬುದು ಸರಿಯಲ್ಲ ಎಂದು ಡಬ್ಲ್ಯುಎಚ್‌ಒ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Covid19| ಡ್ರೋನ್‌ನಲ್ಲಿ ಕೋವಿಡ್‌ ಲಸಿಕೆ ಪೂರೈಕೆ..!

ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರೀಸ್‌(National Aerospace Laboratories) (NAL) ತನ್ನ ಡ್ರೋನ್‌ ‘ಅಕ್ಟಾಕಾಪ್ಟರ್‌’ ಮೂಲಕ 50 ವಯಲ್ಸ್‌ ಕೋವಿಡ್‌ ಲಸಿಕೆಯನ್ನು ಬೆಂಗಳೂರು ಹೊರವಲಯದ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಯಶಸ್ವಿಯಾಗಿ ರವಾನಿಸಿದೆ. ಇದು ನಗರದಲ್ಲಿ ನಡೆದ ಮೊದಲ ಕಾರ್ಯಾಚರಣೆಯಾಗಿದೆ.

ಸ್ವದೇಶಿ ನಿರ್ಮಿತ ಅಕ್ಟಾಕಾಪ್ಟರ್‌(Octacopter) ಬೆಳಗ್ಗೆ 9.43ಕ್ಕೆ ಚಂದಾಪುರ ಆರೋಗ್ಯ ಕೇಂದ್ರದಿಂದ ಕೋವಿಡ್‌ ಲಸಿಕೆಯನ್ನು(Covid Vaccine) ವಿಶೇಷವಾದ ಕಂಟೈನರ್‌ನಲ್ಲಿ ತುಂಬಿಸಿಕೊಂಡು 14 ಕಿ.ಮೀ. ದೂರದಲ್ಲಿದ್ದ ಹರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೇವಲ 10 ನಿಮಿಷ ಅವಧಿಯಲ್ಲಿ ಲಸಿಕೆಯನ್ನು(Vaccine) ತಲುಪಿಸಿತು. ಲಸಿಕೆ ತಲುಪಿಸಿದ ಡ್ರೋನ್‌(Drone) ಆ ಬಳಿಕ ಮತ್ತೆ ಚಂದಾಪುರಕ್ಕೆ ವಾಪಾಸ್‌ ಆಯಿತು. ಈ ಇಡೀ ಪ್ರಕ್ರಿಯೆ ಕೇವಲ 20 ನಿಮಿಷದಲ್ಲಿ ಮುಕ್ತಾಯಗೊಂಡಿತು. ಸೆಕೆಂಡ್‌ಗೆ 10 ಮೀಟರ್‌ ದೂರ ಕ್ರಮಿಸುವ ಸಾಮರ್ಥ್ಯವನ್ನು ಈ ಡ್ರೋನ್‌ ಹೊಂದಿದೆ.

ರಸ್ತೆ ಮಾರ್ಗದಲ್ಲಿ ಚಂದಾಪುರದಿಂದ ಹಾರಗದ್ದೆಗೆ ಲಸಿಕೆ ಸಾಗಿಸಲು 30ರಿಂದ 40 ನಿಮಿಷ ಸಮಯ ಬೇಕಾಗುತ್ತದೆ. ಆಕಾಶ ಮಾರ್ಗದಲ್ಲಿ(Sky Path) ವೇಗ ಮತ್ತು ಸುರಕ್ಷಿತವಾಗಿ ಲಸಿಕೆ ರವಾನೆಯಾಗಿದ್ದು, ಆರೋಗ್ಯ ಕೇಂದ್ರದ ವೈದ್ಯರು(Doctors) ಮತ್ತು ಸಿಬ್ಬಂದಿಗೆ ಸಂತಸ ತಂದಿದೆ. ಎನ್‌ಎಎಲ್‌ನ ಜೊತೆಗಿನ ಸಹಭಾಗಿತ್ವವನ್ನು ಮುಂದುವರಿಸುತ್ತೇವೆ ಎಂದು ರಾಜ್ಯ ಆರೋಗ್ಯ ಇಲಾಖೆಯ(Department of Health) ಡಾ, ಮನೀಷಾ ಹೇಳಿದ್ದಾರೆ.

Follow Us:
Download App:
  • android
  • ios