Asianet Suvarna News Asianet Suvarna News

ಚೀನಾ ಸೋಲಿಸಿ ವಿಶ್ವಸಂಸ್ಥೆ ECOSOC ಸದಸ್ಯತ್ವ ಗಿಟ್ಟಿಸಿದ ಭಾರತ!

ಭಾರತ ವಿಶ್ವಗುರುವಾಗಿ ಬದಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶೇಷ ಮನ್ನಣೆ ಸಿಗುತ್ತಿದೆ. ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿಯಾಗಿದೆ. ವಿಶ್ವಸಂಸ್ಥೆಯ ECOSOC ಸದಸ್ಯತ್ವ ಗಿಟ್ಟಿಸಿಕೊಂಡಿದೆ ವಿಶೇಷವಾಗಿ ಚೀನಾ ಸೋಲಿಸಿ ಭಾರತದ ಈ ಸಾಧನೆ ಮಾಡಿದೆ.

India elected as a member of the United Nations Commission on Status of Women ECOSOC ckm
Author
Bengaluru, First Published Sep 15, 2020, 6:37 PM IST

ವಾಶಿಂಗ್ಟನ್(ಸೆ.15):  ಜಾಗತಿಕ ಮಟ್ಟದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಗೆಲುವು ಪಡೆದುಕೊಂಡಿದೆ. ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ(ECOSOC) ಮಹಿಳಾ ವಿಭಾಗದ ಸದಸ್ಯತ್ವಕ್ಕೆ ಭಾರತ ಆಯ್ಕೆಯಾಗಿದೆ. ಇಷ್ಟೇ ಅಲ್ಲ ಚೀನಾ ಸೋಲಿಸಿ ಭಾರತದ ಈ ಸ್ಥಾನ ಗಿಟ್ಟಿಸಿಕೊಂಡಿದೆ.

ವಿಶ್ವಸಂಸ್ಥೆಯಲ್ಲಿ ಖಾಯಂ ಸ್ಥಾನ : ಭಾರತದ ಬೆಂಬಲಕ್ಕೆ ನಿಂತ ಫ್ರಾನ್ಸ್

ಯುನೈಟೆಡ್ ನೇಷನ್ಸ್ ಕಮಿಷನ್ ಆನ್ ಸ್ಟೇಟಸ್ ಆಫ್ ವುಮೆನ್ ಸದಸ್ಯತ್ವಕ್ಕೆ ಭಾರತ ಆಯ್ಕೆಯಾದ ಸಂತಸವನ್ನು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹಂಚಿಕೊಂಡಿದ್ದಾರೆ. ಭಾರತವೂ ಪ್ರತಿಷ್ಠಿತ  ECOSOC ಸದಸ್ಯತ್ವ ಸ್ಥಾನ ಗೆದ್ದುಕೊಂಡಿದೆ. 

ಪಾಕ್ ಧರ್ಮನಿಂದನೆ ಕಾನೂನು ಮೂಲಕ ಅಲ್ಪಸಂಖ್ಯಾತರ ದಮನ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ಇಕೋಸೊಕ್) ಸಂಸ್ಥೆಯಾದ ಯುನೈಟೆಡ್ ನೇಷನ್ಸ್ ಕಮಿಷನ್ ಆನ್ ಸ್ಟೇಟಸ್ ಆಫ್ ವುಮೆನ್ ಸದಸ್ಯರಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರೂಮೂರ್ತಿ ಸೋಮವಾರ (ಸ್ಥಳೀಯ ಸಮಯ) ತಿಳಿಸಿದ್ದಾರೆ. ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವ ನಮ್ಮ ಬದ್ಧತೆಗೆ ಸಿಕ್ಕ ಬಹುದೊಡ್ಡ ಗೆಲುವಾಗಿದೆ. ಬೆಂಬಲ ನೀಡಿದ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಎಂದು ಟಿಎಸ್ ತಿರುಮೂರ್ತಿ ಹೇಳಿದ್ದಾರೆ.

 

ECOSOC ಸದಸ್ಯತ್ವಕ್ಕಾಗಿ ಭಾರತ, ಆಫ್ಘಾನಿಸ್ತಾನ ಹಾಗೂ ಚೀನಾ ಸ್ಪರ್ಧಿಸಿತ್ತು. ಈಗಾಗಲೇ ECOSOC ಸದಸ್ಯತ್ವ ಪಡೆದಿರುವ 54 ರಾಷ್ಟ್ರಗಳು ಮತದಾನ ಮಾಡಿತ್ತು. ಇದರಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಸ್ಥಾನ ಪಡೆದರೆ, ಚೀನಾಗೆ ಅರ್ಧ ಮತಗಳನ್ನು ಪಡೆಯಲು ಸಾಧ್ಯವಾಗದೆ ಸೋಲು ಕಂಡಿತು. ಭಾರತ ಮುಂದಿನ ನಾಲ್ಕು ವರ್ಷಗಳ ವರೆಗೆ ECOSOC ಸದಸ್ಯ ರಾಷ್ಟ್ರವಾಗಿರಲಿದೆ.

Follow Us:
Download App:
  • android
  • ios