ಜಿನೆವಾ(ಸೆ.11): ಜಾಗತಿಕ ಮಟ್ಟದಲ್ಲಿ ಸಿಕ್ಕ ಅವಕಾಶಗಳನ್ನು ಪಾಕಿಸ್ತಾನ, ಭಾರತ ವಿರುದ್ಧ ದ್ವೇಷ ಕಾರಲು ಬಳಸುತ್ತಿದೆ.  ಇದೀಗ ವಿಶ್ವಸಂಸ್ಥೆಯ  ಸಂಸ್ಕೃತಿ ಹಾಗೂ ಶಾಂತಿ ಕುರಿತ ಉನ್ನತ ಮಟ್ಟದ ವೇದಿಕೆಯಲ್ಲಿ ಪಾಕಿಸ್ತಾನದ ಕುತಂತ್ರಿ ಬುದ್ದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಭಾರತದ ವಿರುದ್ಧ ದ್ವೇಷ ಭಾಷಣ ಮಾಡಲು ವಿಶ್ವ ಸಂಸ್ಥೆಯ ವೇದಿಕೆ ಬಳಿಸಿಕೊಂಡ ಪಾಕಿಸ್ತಾನವನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಉಗ್ರ ಚಟುವಟಿಕೆ ವಿರುದ್ಧ ಕ್ರಮ ಅಗತ್ಯ; ಭಾರತ-ಅಮೆರಿಕ ಜಂಟಿಯಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ!.

ಭಾರತದ ಕುರಿತು ಬೊಟ್ಟು ಮಾಡುವಾಗ ನಿಮ್ಮ ದೇಶದಲ್ಲಿ ಏನಾಗುತ್ತಿದೆ. ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು, ಅಲ್ಪಸಂಖ್ಯಾತರ ಸದ್ದಡಗಿಸುವ ಪ್ರಯತ್ನಗಳ ಕುರಿತು ಆಲೋಚಿಸಿ. ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ದಮನ ಮಾಡಲು ಪಾಕಿಸ್ತಾನ ಧರ್ಮನಿಂದನೆ ಕಾನೂನು ಬಳಕೆ ಮಾಡುತ್ತಿದೆ ಎಂದು ಭಾರತ ವಿಶ್ವ ಸಂಸ್ಥೆಯಲ್ಲಿ ಹೇಳಿದೆ.

ಗಡಿ ಸಮಸ್ಯೆ ಲಾಭ ಪಡೆಯಲು ಮುಂದಾದರೆ ತಕ್ಕ ಶಾಸ್ತಿ; ಪಾಕ್‌ಗೆ ಬಿಪಿನ್ ರಾವತ್ ಎಚ್ಚರಿಕೆ!..

ಯುಎನ್‌ನ ಸಂಸ್ಕೃತಿ ಮತ್ತು ಶಾಂತಿ ಕುರಿತ ಉನ್ನತ ಮಟ್ಟದ ವೇದಿಕೆಯಲ್ಲಿ ಮಾತನಾಡಿದ ಭಾರತೀಯ ಕೌನ್ಸೆಲರ್ ಪೌಲೋಮಿ ತ್ರಿಪಾಠಿ, ಭಾರತದ ವಿರುದ್ಧ ದ್ವೇಷ ಭಾಷಣ ಮಾಡಲು ವಿಶ್ವ ಸಂಸ್ಥೆ ವೇದಿಕೆಯನ್ನು ಪಾಕಿಸ್ತಾನ ನಿಯೋಗ ಬಳಸಿಕಿಕೊಂಡಿದೆ. ಇದಕ್ಕೆ ಭಾರತ ಸಾಕ್ಷಿಯಾಗಿದೆ.  ಪಾಕಿಸ್ತಾನದಲ್ಲಿ ಹಾಗೂ ಗಡಿಯುದ್ಧಕ್ಕೂ ಹಿಂಸಾಚಾರದ ಸಂಸ್ಕೃತಿ ದಾರಿ ಹಿಡಿದಿದೆ ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಮಹಿಳೆಯರು ಹಾಗೂ ಹುಡುಗಿಯರ ಮೇಲೆ ಅತ್ಯಾಚಾರವಾಗುತ್ತಿದೆ, ಅಪರಹರಣ ಮಾಡಲಾಗುತ್ತಿದೆ , ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ಮೇಲೆ ಆರೋಪ ಮಾಡುವ ಮುನ್ನ ಪರಿಶೀಲಿಸುವುದು ಅಗತ್ಯ. ದ್ವೇಷ ಕಾರಲೇಬೇಕು ಎಂಬ ಹಠಕ್ಕೆ ಬಿದ್ದು ಮಾತನಾಡಬೇಡಿ ಎಂದು ಪೊಲೋಮಿ ತ್ರಿಪಾಠಿ ತಿರುಗೇಟು ನೀಡಿದ್ದಾರೆ.