ಭಾರೀ ಮಳೆಯ ನಡುವೆ ಆಗಮಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮಹಿಳಾ ಅಧಿಕಾರಿಯೊಬ್ಬರು ಛತ್ರಿ ಹಿಡಿದಿದ್ದರು. ಕೆಲ ಹೆಜ್ಜೆ ಸಾಗಿದ ಬಳಿಕ ಮಹಿಳಾ ಅಧಿಕಾರಿಗೆ ಏನನ್ನೋ ಹೇಳಿದ ಷರೀಫ್, ಆಕೆಯ ಕೈಯಿಂದ ಛತ್ರಿ ತೆಗೆದುಕೊಂಡು ಹೊರಡಲು ಆರಂಭ ಮಾಡುತ್ತಾರೆ.
ನವದೆಹಲಿ (ಜೂ.23): ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್, ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಹೊಸ ಜಾಗತಿಕ ಹಣಕಾಸು ಒಪ್ಪಂದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಫ್ರಾನ್ಸ್‌ಗೆ ಬಂದಿಳಿದರು. ಷರೀಫ್ ಫ್ರಾನ್ಸ್‌ಗೆ ಆಗಮಿಸಿದ್ದ ಬೆನ್ನಲ್ಲಿಯೇ ಪಾಕಿಸ್ತಾನದ ಪ್ರಧಾನಿ ಕಚೇರಿ ಸೋಶಿಯಲ್ ಮೀಡಿಯಾದಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿತು. ಆದರೆ, ವಿಡಿಯೋ ಪೋಸ್ಟ್ ಆದ ಬೆನ್ನಲ್ಲಿಯೇ ಷರೀಫ್ ಅವರ ವರ್ತನೆ ಟೀಕೆಗೆ ಗುರಿಯಾಗಿದೆ. ಹೆಚ್ಚಿನವರು ಈ ವಿಡಿಯೋಗಳನ್ನು ವ್ಯಾಪಕವಾಗಿ ಹಂಚಿಕೊಂಡಿದ್ದು, ಬಹುಶಃ ಒಂದು ದೇಶದ ಪ್ರಧಾನಿಯಾಗಿ ಅಭ್ಯ ನಡವಳಿಕೆ ತೋರಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೀಡಿಯೊದಲ್ಲಿ, ಶೆಹಬಾಜ್ ಷರೀಫ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ಯಾರಿಸ್‌ನ ಪಲೈಸ್ ಬ್ರೋಗ್ನಿಯರ್ಟ್‌ಗೆ ಆಗಮಿಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ, ಅವರು ಸ್ಥಳಕ್ಕೆ ಅಗಮಿಸುವ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬರುತ್ತಿತ್ತು. ಈ ಸಮಯದಲ್ಲಿ ಪ್ರೊಟೋಕಾಲ್‌ನಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಛತ್ರಿಯನ್ನು ಹಿಡಿದು ಪಾಕ್ ಪ್ರಧಾನಿಗೆ ಸಹಾಯ ಮಾಡಿದರು. ಆಕೆಯೊಂದಿಗೆ ಕೆಲ ಹೊತ್ತು ಮಾತನಾಡುತ್ತಲೇ ಮುಂದೆ ಬರುವ ಷರೀಫ್, ಸ್ವಲ್ಪ ನಿಂತು ಏನನ್ನೋ ಹೇಳಿದ್ದಾರೆ. ಬಳಿಕ ಆಕೆಯ ಕೈಯಲ್ಲಿದ್ದ ಛತ್ರಿಯನ್ನು ತಾವೇ ಹಿಡಿದುಕೊಂಡು ಮುಂದೆ ಹೋಗಿದ್ದಾರೆ.
ಪಾಕ್ ಪ್ರಧಾನಿ ಷರೀಫ್, ಛತ್ರಿ ಹಿಡಿದು ಮುಂದೆ ಹೋಗುತ್ತಿದ್ದರೆ, ಭಾರೀ ಮಳೆಯ ನಡುವೆ ಮಹಿಳಾ ಅಧಿಕಾರಿ ನೆನೆದುಕೊಂಡೇ ಅವರ ಹಿಂದೆ ಬರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋವನ್ನು ಪ್ರಧಾನಿ ಕಚೇರಿ ಹಂಚಿಕೊಂಡ ಬಳಿಕ ಪರ ವಿರೋಧದ ಚರ್ಚೆಗಳು ಆರಂಭವಾಗಿದೆ. ಕೆಲವರು ಇದು ಉತ್ತಮ ನಡೆ ಎಂದು ಹೇಳಿದ್ದರೆ, ಇನ್ನೂ ಕೆಲವರು ಪಾಕ್ ಪ್ರಧಾನಿಯ ವರ್ತನೆ ಮುಜುಗರ ತರುವಂಥದ್ದು ಎಂದಿದ್ದಾರೆ. ಅದರಲ್ಲೂ ಕೆಲವು ಪಾಕಿಸ್ತಾನ ಪ್ರಧಾನಿ ಸ್ವಲ್ಪ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಹಿಂಸಾಚಾರ: ಬ್ರಿಡ್ಜ್ ಟೂರ್ನಮೆಂಟ್‌ಗೆ ತೆರಳಿದ್ದ ತಂಡಕ್ಕೆ ವಾಪಾಸ್ ಬರುವಂತೆ ಸೂಚಿಸಿದ ಭಾರತ!
ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪ್ಯಾರಿಸ್‌ಗೆ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು, ಜಾಗತಿಕ ಸಾಲದಾತರಿಂದ ಹೆಚ್ಚು ಅಗತ್ಯವಿರುವ ಸಾಲವನ್ನು ಪಡೆಯುವ ಕೊನೆಯ ಪ್ರಯತ್ನದಲ್ಲಿ ಪ್ರಧಾನ ಮಂತ್ರಿ ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರನ್ನು ಭೇಟಿಯಾದರು ಎಂದು ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ. ಕೆಲವು ಷರತ್ತುಗಳ ನೆರವೇರಿಕೆಯ ಮೇರೆಗೆ ಪಾಕಿಸ್ತಾನಕ್ಕೆ USD 6 ಶತಕೋಟಿ ನೀಡಲು 2019 ರಲ್ಲಿ IMF ಒಪ್ಪಂದಕ್ಕೆ ಸಹಿ ಹಾಕಿತು.
ಟರ್ಕಿಗೆ ನೆರವು ನೀಡಿದ ವ್ಯಕ್ತಿಗೆ ಪಾಕ್ ಪ್ರಧಾನಿ ಮೆಚ್ಚುಗೆ; ಪಾಕ್‌ಗೇಕೆ ಸಹಾಯ ಮಾಡಿಲ್ಲ ಎಂದು ನೆಟ್ಟಿಗರ ವ್ಯಂಗ್ಯ
