Asianet Suvarna News Asianet Suvarna News

ಸಾವಿಗೂ ಅಂಜದ ವೀರ: ಭೀಕರ ಹಿಮಪಾತದ ಮಧ್ಯೆ ಗಟ್ಟಿಯಾಗಿ ನಿಂತ ಪರ್ವತಾರೋಹಿ.. ವಿಡಿಯೋ ವೈರಲ್

  • ಸುರಿಯುತ್ತಿರುವ ಭೀಕರ ಹಿಮದ ಮಧ್ಯೆಯೂ ಪರ್ವತಾರೋಹಣ
  • ತೀವ್ರ ಹಿಮಪಾತದ ನಡುವೆ ಧೈರ್ಯವಾಗಿ ನಿಂತ ಪರ್ವತಾರೋಹಿ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
Ice climber hangs on mountain ledge as avalanche hits akb
Author
Bangalore, First Published Feb 24, 2022, 1:29 PM IST

ಭಯಾನಕ ಹಿಮಪಾತದ ಮಧ್ಯೆಯೂ ಪರ್ವತಾರೋಹಿಯೋರ್ವ ಎದೆಕೊಟ್ಟು ಧೈರ್ಯವಾಗಿ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏಕಾಂಗಿಯಾಗಿ ಪರ್ವತಾರೋಹಣ ನಡೆಸುತ್ತಿರುವ ವ್ಯಕ್ತಿಯೋರ್ವ ಹಿಮಪಾತಕ್ಕೆ ಸಿಲುಕಿದ್ದರೂ, ಧೃತಿಗೆಡದೇ ಸಾವನ್ನೇ ಓಡಿಸಿದ್ದಾನೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. 

ಕೊಲೆರಾಡೋ (Colorado) ಮೂಲದ ಲೆಲ್ಯಾಂಡ್ ನಿಸ್ಕಿ (Leland Nisky) ಫೆಬ್ರವರಿ 8 ರಂದು ಔರೆಯಲ್ಲಿನ(Ouray) ದಿ ರಿಬ್ಬನ್‌ನ (The Ribbon)ಎಂಬ ಪರ್ವತದ ಮೇಲ್ಭಾಗವನ್ನು ಏಕಾಂಗಿಯಾಗಿ ಏರುತ್ತಿದ್ದಾಗ, ನೆಲದಿಂದ 400 ಅಡಿಗಳಷ್ಟು ಎತ್ತರದಲ್ಲಿ ಭಾರಿ ಹಿಮಪಾತಕ್ಕೆ ಸಿಲುಕಿದ್ದರು. ಅಲ್ಲದೇ ಪರ್ವತವೇರುವ ವೇಳೆ ಅವರು ಯಾವುದೇ ಸುರಕ್ಷತ ಹಗ್ಗವನ್ನು ಇಟ್ಟುಕೊಂಡಿರಲಿಲ್ಲ. ಆದಾಗ್ಯೂ ಅವರು ಭಯಾನಕ ಕ್ಷಣವನ್ನು ಹಿಮ್ಮೆಟ್ಟಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Leland Nisky (@nemonisky)

ಹಿಮ ಪರ್ವತವನ್ನು ಏರಲು ಬಳಸುವ ಕೊಕ್ಕೆಯಂತಹ ಸಾಧನದಲ್ಲಿ ಅವರು ನೇತಾಡುತ್ತಾ ಬಗ್ಗಿಕೊಂಡು ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಪರ್ವತಾರೋಹಿ ನಿಸ್ಕಿಯ ಕ್ಯಾಮೆರಾ ಹೆಲ್ಮೆಟ್ (amera helmet) ಈ ಭಯಾನಕ ಘಟನೆಯನ್ನು ಸೆರೆಹಿಡಿದಿದೆ. ಪರ್ವತವೇರಲು ಬಳಸುವ ತನ್ನ ಉಪಕರಣಗಳನ್ನು ಊರಲು ಸ್ಥಿರವಾದ ಸ್ಥಾನವನ್ನು ಹುಡುಕಲು  ಈತ ಪ್ರಯತ್ನಿಸುತ್ತಿರುವಾಗ ಸಮತೋಲನವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರ್ವತಾರೋಹಣದಲ್ಲಿ ಅವರ ವರ್ಷಗಳ ಅನುಭವ ಇಲ್ಲಿ ಉಪಯೋಗಕ್ಕೆ ಬಂದಿದೆ. ಅವರು ತಮ್ಮ ಪಾದಗಳನ್ನು ಎಡಕ್ಕೆ ಬದಲಾಯಿಸುವ ಮೊದಲು ತಮ್ಮ ಉಪಕರಣಗಳನ್ನು ಗಟ್ಟಿಯಾಗಿ ಹಿಡಿದಿದ್ದರು.

ಹಿಮಾಚಲದ ಸ್ನೋಫಾಲ್ .. ಸ್ವರ್ಗವೇ ಧರೆಗೆ.. ನೋಡಿಯೇ ಆನಂದಿಸಬೇಕು!

ಈ ಹಿಮಪಾತವು ಎರಡು ನಿಮಿಷಗಳ ಕಾಲ ಸುರಿದಿದೆ. ನಂತರ ನಿಸ್ಕಿ ತಮ್ಮ ಮೇಲೆ ಬಿದ್ದಂತಹ ಹಿಮವನ್ನು ದೇಹವನ್ನು ಕೊಡಹುವ ಮೂಲಕ ಕೆಳಗೆ ಬೀಳಿಸಿದರು. ಆ ಸಮಯದಲ್ಲಿ, ಅವರು ತಮ್ಮ ಆಂಕರ್‌ಗಿಂತ ಸುಮಾರು 10 ಅಡಿಗಳಷ್ಟು  ಮೇಲೆ ಏರಿದ್ದಾರೆಂಬುದು ಅವರ ಅರಿವಿಗೆ ಬಂದಿದೆ. (ಕ್ಲೈಂಬಿಂಗ್ ಆಂಕರ್ ಎಂದರೆ ಪ್ರತ್ಯೇಕ ಆಂಕರ್ ಪಾಯಿಂಟ್‌ಗಳಿಂದ ಮಾಡಲ್ಪಟ್ಟ ಒಂದು ವ್ಯವಸ್ಥೆಯಾಗಿದ್ದು, ಹಗ್ಗವನ್ನು ಆರೋಹಿಗಳು ಬಂಡೆಗೆ ಸುರಕ್ಷಿತವಾಗಿ ಜೋಡಿಸಲು ಕ್ಲಿಪ್ ಮಾಡುವ ಮಾಸ್ಟರ್ ಪಾಯಿಂಟ್ ಅನ್ನು ರಚಿಸುವಂತಹದ್ದಾಗಿದೆ.)

ಈ ಹಿಮಪಾತದಿಂದ ಬದುಕುಳಿದ ನಂತರ, ನಿಸ್ಕಿ ಪರ್ವತದಿಂದ ಕೆಳಗಿಳಿದರು. ಅಲ್ಲದೇ ಅಂತಿಮವಾಗಿ ತನ್ನ ಆಂಕರ್ ಅನ್ನು ಪತ್ತೆಮಾಡಿ ಮತ್ತು ಅದಕ್ಕೆ ಅವರನ್ನು  ಜೋಡಿಸಿಕೊಂಡರು. ಒಮ್ಮೆಲೆ ಹಿಮಪಾತ ಎದುರಾದಾಗ ನಾನು ನನ್ನ ಉಪಕರಣಗಳನ್ನು ಇರಿಸಲು ನನ್ನ ಕೈಗಳನ್ನು ಬದಲಾಯಿಸುತ್ತಿದ್ದೆ. ಅದು ಭಯಾನಕವಾಗಿತ್ತು. ವರ್ಷಗಳ ಹಿಂದೆ ವಾಷಿಂಗ್ಟನ್‌ನಲ್ಲಿ ನಾನು ಹೀಗೆ ಪರ್ವತವೇರುತ್ತಿದ್ದಾಗ ಹಿಮಪಾತದಲ್ಲಿ ಭಾಗಶಃ ಸಮಾಧಿ ಆದಂತಹ ಅನುಭವವಾಗಿತ್ತು.  ಅದೇ ಭಯಾನಕ ಅನುಭವ ಇಲ್ಲೂ ಆಯಿತು ಎಂದು ನಿಸ್ಕಿ ಹೇಳಿದರು.

ಭೀಕರ ಹಿಮಪಾತಕ್ಕೆ ಅಂಜದೆ ನಿಂತ ಗಂಡು... ಭಾರತೀಯ ಯೋಧನ ವಿಡಿಯೋ ವೈರಲ್‌
 

ನಾನು ಭಯಗೊಂಡರೆ ನಾನು ಬಹುಶಃ ಸಾಯುತ್ತೇನೆ ಎಂದು ನನಗೆ ತಿಳಿದಿತ್ತು, ಆದ್ದರಿಂದ ನಾನು ನನ್ನ ಉಸಿರಾಟವನ್ನು ನಿಯಂತ್ರಿಸುವತ್ತ ಗಮನಹರಿಸಿದೆ. ನನ್ನ ದೇಹದ ಮೇಲೆ ಹಿಮವನ್ನು ತಡೆಯಲು ಪರ್ವತಕ್ಕೆ ಬಿಗಿಯಾಗಿ ಅಂಟಿಕೊಂಡೆ ಮತ್ತು ಸ್ವಲ್ಪ ಗಾಳಿಯ ಗುಳ್ಳೆಯನ್ನು ಉಸಿರಾಡಲು ನನ್ನ ತಲೆಯನ್ನು ಕೆಳಗೆ ಹಾಕಿದೆ, ಎಂದು ಅವರು ತಮ್ಮ ಅನುಭವವನ್ನು ಹೇಳಿದರು.

ಈ ಹಿಮಪಾತವೂ ಒಂದು ಟನ್ ತೂಕದೊಂದಿಗೆ ಮೇಲೆರಗಿದಂತಹ ಅನುಭವವಾಯಿತು . ಇದರಿಂದ ಅಗಾಧವಾದ ಒತ್ತಡ ಉಂಟಾಯಿತು. ನನ್ನ ಬೆನ್ನುಹುರಿ ಹಾಗೂ ದೇಹದ ಮೇಲೆ ಹಿಮದ ತುಂಡುಗಳು ಬಿದ್ದು ಬೇರೆಡೆ ರಟ್ಟುವಂತಹ(Bounce) ಸ್ಥಿತಿಯನ್ನು ನಾನು ಅನುಭವಿಸಿದೆ. ನಾನು ಸಾಯುತ್ತೇನೆ ಎಂದು ನಾನು ಭಾವಿಸಿದೆ. ಯಾವುದೇ ದೊಡ್ಡದಾದ ಅಲೆಯು ಅಪ್ಪಳಿಸಿದರೆ ನಾನು ಉಳಿಯಬಲ್ಲೆ ಎಂದು ನಾನು ಭಾವಿಸುವುದಿಲ್ಲ ಎಂದು ನಿಸ್ಕಿ ಹೇಳಿದರು. ಇಂತಹ ಭಯಾನಕ ಹಿಮ ಕುಸಿತದ ನಂತರವೂ ನಿಸ್ಕಿ ತನ್ನ ಪರ್ವತಾರೋಹಣವನ್ನು ನಿಲ್ಲಿಸಲಿಲ್ಲ. ಹಿಮಪಾತ ನಿಲ್ಲುತ್ತಿದ್ದಂತೆ ಮೇಲೆದ್ದ ಅವರು  45 ನಿಮಿಷಗಳಲ್ಲಿ ಆರೋಹಣವನ್ನು ಪೂರ್ಣಗೊಳಿಸಿದರು.
 

Follow Us:
Download App:
  • android
  • ios