Asianet Suvarna News Asianet Suvarna News

ಭೀಕರ ಹಿಮಪಾತಕ್ಕೆ ಅಂಜದೆ ನಿಂತ ಗಂಡು... ಭಾರತೀಯ ಯೋಧನ ವಿಡಿಯೋ ವೈರಲ್‌

  • ಭೀಕರ ಹಿಮಗಾಳಿಗೆ ಅಂಜದೆ ನಿಂತ ಯೋಧ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌
  • ದೇಶ ಕಾಯುವ ಯೋಧನ ಸಾಹಸಕ್ಕೆ ಮೆಚ್ಚುಗೆ
Army jawan stands firm amid fierce snow storm in Kashmir watch viral video akb
Author
Bangalore, First Published Jan 9, 2022, 3:33 PM IST

ಕಾಶ್ಮೀರ(ಜ.9): ಕಾಶ್ಮೀರ ( Kashmir)ದಲ್ಲಿ ಬಿರುಗಾಳಿ ಜೊತೆ ಬರುವ ಮಳೆಯಂತೆ ಸುರಿಯುವ ಭಾರಿ ಹಿಮಪಾತಕ್ಕೆ ಯೋಧನೋರ್ವ ಯಾವುದೇ ತಲೆಕಡಿಸಿಕೊಳ್ಳದೇ ಸಧೃಡವಾಗಿ ನಿಂತು ದೇಶ ಕಾಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸೂಪರ್‌ಹೀರೋಗೆ ನೆಟ್ಟಿಗರು ಸಲಾಂ ಹೇಳುತ್ತಿದ್ದಾರೆ. 

ಉತ್ತರ ಭಾರತದ ( North India) ಹಲವೆಡೆ ಈಗಾಗಲೇ  ಹಿಮಪಾತಗಳಾಗುತ್ತಿದ್ದು, ಅದರ ವಿಡಿಯೋಗಳು ಈಗಾಗಲೇ ವೈರಲ್‌ ಆಗಿವೆ. ಆ ವಿಷಮ ಸ್ಥಿತಿಯಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸುವಲ್ಲಿ ಸೇನಾ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ, ಮೊಣಕಾಲು ಆಳದಷ್ಟು ಇರುವ ಹಿಮದಲ್ಲಿ ಸೇನಾ ಜವಾನ ದೃಢವಾಗಿ ನಿಂತಿರುವ ವೀಡಿಯೊ ನೆಟ್ಟಿಗರ ಬೆರಗುಗೊಳಿಸಿದೆ.

 

ರಕ್ಷಣಾ ಸಚಿವಾಲಯದ  PRO (ಸಾರ್ವಜನಿಕ ಸಂಪರ್ಕ ಅಧಿಕಾರಿ) ದ ಅಧಿಕೃತ ಟ್ವಿಟ್ಟರ್ ಪ್ರೊಫೈಲ್ ಉಧಮ್‌ಪುರ್ (Udhampur) ಈ ವಿಡಿಯೋವನ್ನು ಪೋಸ್ಟ್‌ ಮಾಡಿದೆ. ಈ ವಿಡಿಯೋ ನಿಮಗೂ ಮೈ ನವಿರೇಳಿಸಲಿದೆ ಮತ್ತು ದೇಶಕ್ಕಾಗಿ ಹೋರಾಡುವವರ ಬಗ್ಗೆ ಕೃತಜ್ಞತೆಯ ಭಾವನೆಯನ್ನು ಹುಟ್ಟು ಹಾಕುತ್ತದೆ. ಗನ್ ಹಿಡಿದುಕೊಂಡು ಮೊಣಕಾಲು ಆಳದ ಹಿಮದಲ್ಲಿ ಜವಾನ ನಿಂತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ಭೀಕರ ಹಿಮದ ಬಿರುಗಾಳಿಯೂ ಸುತ್ತಲೂ ಕೆರಳಿಸುತ್ತಿರುವಾಗಲೂ ಸೈನಿಕನು ಸ್ಥಳದಲ್ಲಿ ದೃಢವಾಗಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ರುಡ್ಯಾರ್ಡ್ ಕಿಪ್ಲಿಂಗ್ (Rudyard Kipling) ಅವರ ಕವಿತೆ ಫಾರ್ ಆಲ್ ವಿ ಹ್ಯಾವ್ ಅಂಡ್ ಆರ್‌ನ ( For All We Have And Are) ಎಂಬ ಪದ್ಯದೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

Snowfall In Pakistan: ಕಾರಿನಲ್ಲಿ ಕುಳಿತಿದ್ದವರು ಹೆಪ್ಪುಗಟ್ಟಿದರು, 21 ಮಂದಿ ಪ್ರವಾಸಿಗರು ಹಿಮಪಾತಕ್ಕೆ ಬಲಿ!

ಸುಲಭವಾದ ಭರವಸೆ ಅಥವಾ ಸುಳ್ಳುಗಳಿಲ್ಲ. ನಮ್ಮನ್ನು ನಮ್ಮ ಗುರಿಯತ್ತ ತರೋಣ, ಆದರೆ ದೇಹದ ಕಠಿಣವಾದ ಇಚ್ಛೆ, ಆತ್ಮ  ತ್ಯಾಗ, ಎಲ್ಲರಿಗೂ ಒಂದೇ ಕೆಲಸ. ನೀಡಲು ಪ್ರತಿಯೊಬ್ಬರಿಗೂ ಒಂದೇ ಜೀವನ. ಆದರೆ ಸ್ವಾತಂತ್ರ್ಯ ಬಿದ್ದರೆ ಯಾರು ನಿಲ್ಲುತ್ತಾರೆ ಎಂದು ಈ ಕವಿತೆಯನ್ನು ಬರೆಯಲಾಗಿದೆ. ಸದ್ಯ ಈ ವಿಡಿಯೋವನ್ನು 561 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಜೊತೆಗೆ ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.  ಸೈನಿಕನ ತಾಳ್ಮೆ ಮತ್ತು ಶಕ್ತಿಗೆ ಕೆಲವರು ಬೆರಗಾದರೆ, ಇತರರು ಅಂತಹ ಕಠಿಣ ಪರಿಸ್ಥಿತಿಗಳ ನಡುವೆ ದೇಶವನ್ನು ರಕ್ಷಿಸಿದ್ದಕ್ಕಾಗಿ ಅವನಿಗೆ ಸೆಲ್ಯೂಟ್ ಹೊಡೆದಿದ್ದಾರೆ. 

Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!

ಕಳೆದ ವರ್ಷ  ಏಪ್ರಿಲ್ ತಿಂಗಳಲ್ಲಿ ಹಿಮಾಲಯದಲ್ಲಿ ಹಿಮಪಾತವಾದ ವಿಡಿಯೋವೊಂದು ವೈರಲ್ ಆಗಿತ್ತು. ಶಿಮ್ಲಾ ಜಿಲ್ಲೆಯ ಮಾಂಡೋಲ್ ಗ್ರಾಮದ ಹಿಮಪಾತದ ಮೋಹಕ ದೃಶ್ಯವೊಂದು ಎಲ್ಲೆಡೆ ವೈರಲ್ ಆಗಿತ್ತು. ಅಂದು ಶಿಮ್ಲಾ (shimla) ಪಟ್ಟಣದಲ್ಲಿ 83 ಎಂಎಂ ಮಳೆ ಸಹ ಆಗಿತ್ತು. ಇದು ಏಪ್ರಿಲ್ ತಿಂಗಳಲ್ಲಿ ಒಂದೇ ದಿನದಲ್ಲಿ ಆದ ಅತಿ ಹೆಚ್ಚು ಮಳೆ ಎಂದು ಅಲ್ಲಿನ ಹವಾಮಾನ ಕೇಂದ್ರ ತಿಳಿಸಿತ್ತು. 1979 ರ ಬಳಿಕದ ಅಥಿ ಹೆಚ್ಚು ಮಳೆಯಾದ ದಾಖಲೆ ಇದಾಗಿತ್ತು. ಆಲಿಕಲ್ಲು ಮಳೆ ಸಹ ಆಗಿದ್ದು ಸ್ವರ್ಗವೇ ಧರೆಗಿಳಿದಂತೆ  ಭಾಸವಾಗುತ್ತಿತ್ತು.  ಆ ಘಟನೆಯ ದೃಶ್ಯಾವಳಿಗಳು  ಸೋಶಿಯಲ್ ಮೀಡಿಯಾದಲ್ಲಿ  ವೈರಲ್‌ ಆಗಿದ್ದವು.

Follow Us:
Download App:
  • android
  • ios