ಶಿಮ್ಲಾ ( ಏ 23)   ಏಪ್ರಿಲ್ ತಿಂಗಳಲ್ಲಿ ಹಿಮಾಲಯದಲ್ಲಿ ಹಿಮಪಾತವನ್ನು ಎಂದಾದರೂ ನೋಡಿದ್ದೀರಾ? ಇಲ್ಲವೇ.. ಹಾಗಾದರೆ ಈ ದೃಶ್ಯಗಳನ್ನು ನೋಡಿ.. ಸೋಶಿಯಲ್ ಮೀಡಿಯಾ ಸ್ನೋ ಫಾಲ್ ಸಂಭ್ರಮಿಸುತ್ತಿದೆ.

ಹಿಮಾಚಲ ಪ್ರದೇಶ ಶುಕ್ರವಾರ ಬೆಳಿಗ್ಗೆ  ಹಿಮಪಾತವಾಗಿದೆ. ಹಿಮಪಾತದ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿವೆ. ಸೌಂದರ್ಯವನ್ನು ಆಸ್ವಾದಿಸಲಾಗಿದೆ.

ಲಾಕ್ ಡೌನ್ ಗೆ ಒಳ್ಳೆ ಸ್ವಾಗತ ಕೊಟ್ಟ ಮಳೆರಾಯ

ಶಿಮ್ಲಾ ಜಿಲ್ಲೆಯ ಮಾಂಡೋಲ್ ಗ್ರಾಮದ ದೃಶ್ಯ ಎಲ್ಲದಕ್ಕಿಂತ ಮೇಲೆ ನಿಲ್ಲುತ್ತದೆ.  ಶಿಮ್ಲಾ ಪಟ್ಟಣದಲ್ಲಿ 83 ಎಂಎಂ ಮಳೆ ಸಹ ಆಗಿದೆ. ಯಾಗಿದೆ, ಇದು ಏಪ್ರಿಲ್ ತಿಂಗಳಲ್ಲಿ ಒಂದೇ ದಿನದಲ್ಲಿ ಆದ ಅತಿ ಹೆಚ್ಚು ಮಳೆ ಎಂದು ಅಲ್ಲಿನ ಹವಾಮಾನ ಕೇಂದ್ರ ತಿಳಿಸಿದೆ.

 1979 ರ ನಂತರ ಇದೊಂದು ದಾಖಲೆ.  ಆಲಿಕಲ್ಲು ಮಳೆ ಸಹ ಆಗಿದ್ದು ಸ್ವರ್ಗವೇ ಧರೆಗಿಳಿದಂತೆ  ಭಾಸವಾಗುತ್ತಿತ್ತು.   ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡು ಸಂಭ್ರಮಿಸಿದ ಪೋಟೋಗಳನ್ನು ನೀವು  ನೋಡಿಕೊಂಡು ಬನ್ನಿ