Asianet Suvarna News Asianet Suvarna News

ಬಾಹ್ಯಾಕಾಶದಲ್ಲಿ ಜಿಮ್ ಹೇಗಿರುತ್ತೆ? Astronaut ಶೇರ್ ಮಾಡಿದ ವಿಡಿಯೋ ವೈರಲ್‌

ಗುರುತ್ವಾಕರ್ಷಣ ಶಕ್ತಿ ಇಲ್ಲದ ಮನುಷ್ಯರು ಕೂಡ ತೇಲುವಂತಹ ಬಾಹ್ಯಾಕಾಶದಲ್ಲಿ ಜಿಮ್ ಹೇಗಿರುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಕುತೂಹಲವನ್ನು ತಣಿಸಲು ಬಾಹ್ಯಾಕಾಶ ಯಾನಿಯೊಬ್ಬರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

how is gym in International space center, Astronaut shares video akb
Author
Bangalore, First Published Aug 19, 2022, 5:26 PM IST

ದೇಹ ದಂಡಿಸಲು ಹಾಗೂ ಸಧೃಡ ದೇಹ ಪಡೆಯಲು ಜಿಮ್‌ನಲ್ಲಿ ಅನೇಕರು ಬೆವರು ಸುರಿಸುವುದನ್ನು ನೋಡಿದ್ದೀರಿ. ಆದರೆ ಗುರುತ್ವಾಕರ್ಷಣ ಶಕ್ತಿ ಇಲ್ಲದ ಮನುಷ್ಯರು ಕೂಡ ತೇಲುವಂತಹ ಬಾಹ್ಯಾಕಾಶದಲ್ಲಿ ಜಿಮ್ ಹೇಗಿರುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಕುತೂಹಲವನ್ನು ತಣಿಸಲು ಬಾಹ್ಯಾಕಾಶ ಯಾನಿಯೊಬ್ಬರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ವೇಟ್‌ಲಿಫ್ಟಿಂಗ್ ಮಾಡುವುದನ್ನು ಈ ವಿಡಿಯೋ ತೋರಿಸುತ್ತಿದೆ. 

ಇಟಾಲಿಯನ್‌ ಯುರೋಪಿಯನ್‌ ಬಾಹ್ಯಾಕಾಶ ಏಜೆನ್ಸಿಯ ಗಗನಯಾತ್ರಿ ಆಗಿರುವ ಸಮಂತಾ ಕ್ರಿಸ್ಟೋಫೊರೆಟ್ಟಿ ಈ ಕುತೂಹಲಕಾರಿಯಾದ ವಿಡಿಯೋವನ್ನು ಗುರುವಾರ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 73 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಸಮಂತಾ ಕ್ರಿಸ್ಟೋಫೊರೆಟ್ಟಿ ಹೇಗೆ ವೈಟ್‌ಲಿಫ್ಟಿಂಗ್‌  ವ್ಯಾಯಾಮ ಬಾಹ್ಯಾಕಾಶದಲ್ಲಿ ಪ್ರಯೋಜನಕಾರಿ ಎಂಬುದನ್ನು ಎಂಬುದನ್ನು ವಿವರಿಸಿದ್ದಾರೆ. 

ಭಾರವೇ ತಿಳಿಯದ ಸ್ಥಳದಲ್ಲಿ ಭಾರ ಎತ್ತುವ ವ್ಯಾಯಾಮ ಮಾಡುವುದು ಒಂದು ಸೋಜಿಗವೇ ಸರಿ. ಭೂಮಿಯ ಮೇಲೆ ಹಾಗೂ ಬಾಹ್ಯಾಕಾಶದಲ್ಲಿ ಭಾರ ಎತ್ತುವ ಈ ವ್ಯಾಯಾಮವೂ ನಮಗೆ ಮೂಳೆ ಸಾಂದ್ರತೆ ಹಾಗೂ ಸ್ನಾಯುಗಳಲ್ಲಿ ಬಲವಾದ ಶಕ್ತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಕ್ರಿಸ್ಟೋಫೊರೆಟ್ಟಿ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುಧಾರಿತ ಪ್ರತಿರೋಧಕ ವ್ಯಾಯಾಮ ಉಪಕರಣದ ಬಗ್ಗೆ ಕ್ರಿಸ್ಟೋಫೊರೆಟ್ಟಿ ವಿವರಿಸುತ್ತಿದ್ದಾರೆ. ಇದು ಸಾಮರ್ಥ್ಯ ಹೆಚ್ಚಿಸಲು ಬಾಹ್ಯಾಕಾಶದಲ್ಲಿ ವ್ಯಾಯಾಮ ಮಾಡಲು ಸಹಾಯ ಮಾಡುತ್ತದೆ. ಬಾಹ್ಯಾಕಾಶ ಮಿಷನ್‌ನಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. 

ಜೆಫ್‌ ಬೆಜೋಸ್‌ ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ 6 ಮಂದಿ ಪ್ರಯಾಣ, 1 ಟಿಕೆಟ್‌ ಬೆಲೆ ಇಷ್ಟೊಂದಾ!

ಪ್ರತಿದಿನವೂ ಈ ಸಾಧನದಲ್ಲಿ ನಾವು ಹಲವು ರೀತಿಯ ವ್ಯಾಯಾಮಗಳನ್ನು ಮಾಡುತ್ತೇವೆ. ಬಲಿಷ್ಠವಾದ ಸ್ನಾಯುಗಳು ಹಾಗೂ ಎಲುಬುಗಳಿಗಾಗಿ ನಾನು ಭಾರ ಎತ್ತುವ ವ್ಯಾಯಾಮವನ್ನು ಮಾಡುವ ಗುರಿ ಹೊಂದಿದ್ದೇನೆ. ಈ ವಿಡಿಯೋವನ್ನು  32,000ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಸಾವಿರಕ್ಕೂ ಹೆಚ್ಚು ಟ್ವಿಟ್ಟರ್ ಬಳಕೆದಾರರು ಲೈಕ್ ಮಾಡಿದ್ದಾರೆ. ಅಲ್ಲದೇ ಈ ಬಾಹ್ಯಾಕಾಶ ಮಿಷನ್‌ನಲ್ಲಿರುವವರಿಗೆ ನೆಟ್ಟಿಗರು ಶುಭ ಹಾರೈಸಿದ್ದಾರೆ.

ಬಾಹ್ಯಾಕಾಶ ಕೇಂದ್ರ ನಿರ್ಮಾಣ ಪೂರ್ಣಕ್ಕೆ 3 ಯಾತ್ರಿಗಳ ಕಳಿಸಿದ ಚೀನಾ

ನಿಮಗೆ ಇನ್ನೊಮ್ಮೆ ಹೆಲೋ ಹೇಳಲು ಅವಕಾಶ ಸಿಕ್ಕಿದೆ. ನೀವು ಈ ಬಾಹ್ಯಾಕಾಶ ಮಿಷನ್‌ನಲ್ಲಿ ಇರುವಾಗಲೇ ನಿಮ್ಮ ಬ್ಲಾಗ್‌ಗೆ ಇನ್ನಷ್ಟು ಮಾಡಿ ಇದು ವಿಶಿಷ್ಠ ಅಪರೂಪದ ಮಾಹಿತಿಯಿಂದ ವಿಶಿಷ್ಟವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. 

Follow Us:
Download App:
  • android
  • ios