ಜೆಫ್‌ ಬೆಜೋಸ್‌ ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ 6 ಮಂದಿ ಪ್ರಯಾಣ, 1 ಟಿಕೆಟ್‌ ಬೆಲೆ ಇಷ್ಟೊಂದಾ!

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬಾಹ್ಯಾಕಾಶ ಕಂಪನಿ ಬ್ಲೂ ಒರಿಜಿನ್ ಗುರುವಾರ ಬಾಹ್ಯಾಕಾಶ ಪ್ರವಾಸೋದ್ಯಮಕ್ಕಾಗಿ ಆರು ಜನರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಕಂಪನಿಯ ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆಯು ಟೆಕ್ಸಾಸ್‌ನ ಲಾಂಚ್ ಸೈಟ್‌ನಿಂದ ನಭಕ್ಕೆ ಉಡಾವಣೆಗೊಂಡಿತು. ಈ ಬಾಹ್ಯಾಕಾಶ ನೌಕೆಯು ಪ್ರಯಾಣಿಕರನ್ನು ಭೂಮಿಯಿಂದ 107 ಕಿಮೀ ಎತ್ತರಕ್ಕೆ ಕೊಂಡೊಯ್ದಿತು. ಆ ನಂತರ ಪ್ರಯಾಣಿಕರು ಪ್ಯಾರಾಚೂಟ್ ಮೂಲಕ ಭೂಮಿಗೆ ಮರಳಿದರು.

6 people traveled in jeff Bezos Blue Origin ship New Shepard spacecraft went up 107 KM One ticket worth 10 crores san

ಟೆಕ್ಸಾಸ್‌ (ಆ.5): ಬಹುನಿರೀಕ್ಷಿತ ಬಾಹ್ಯಾಕಾಶ ಪ್ರವಾಸೋದ್ಯಮ ಇನ್ನಷ್ಟು ಕ್ರೇಜ್‌ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಅಮೆಜಾನ್‌ ಕಂಪನಿಯ ಸಂಸ್ಥಾಪಕ ಜೆಫ್‌ ಬೆಜೋಸ್‌ ಅವರ ಬಾಹ್ಯಾಕಾಶ ಕಂಪನಿ ಬ್ಲ್ಯೂ ಒರಿಜಿನ್‌ ಗುರುವಾರ ಅಧಿಕೃತವಾಗಿ ಬಾಹ್ಯಾಕಾಶ ಪ್ರವಾಸೋದದ್ಯಮ ಆರಂಭ ಮಾಡದ್ದು, 6 ಜನರನ್ನು ತನ್ನ ಕಂಪನಿಯ ನ್ಯೂ ಶೆಪರ್ಡ್‌ ಬಾಹ್ಯಾಕಾಶ ನೌಕೆಯ ಮೂಲಕ ನಭಕ್ಕೆ ಕಳುಹಿಸಿಕೊಟ್ಟಿದೆ. ಟೆಕ್ಸಾಸ್‌ ಲಾಂಚ್‌ ಸೈಟ್‌ ನಿಂದ ಇದು ಉಡಾವಣೆ ಕಂಡಿದೆ. ಪ್ರಯಾಣಿಕರನ್ನು ಹೊತ್ತೊಯ್ದ ಈ ನೌಕೆಯು ಆಕಾಶಕ್ಕೆ ಅಂದಾಜು 107 ಕಿಲೋಮೀಟರ್‌ ದೂರ ಕ್ರಮಿಸಿದೆ. ಬಳಿಕ ಈ ಎಲ್ಲಾ ಪ್ರಯಾಣಿಕರು ಪ್ಯಾರಚೂಟ್‌ ಮೂಲಕ ಭೂಮಿಗೆ ಇಳಿದಿದ್ದಾರೆ ಎಂದು ಕಂಪನಿ ಹೇಳಿದೆ. ಈ ಬಾಹ್ಯಾಕಾಶ ಪ್ರಯಾಣವು ಕೇವಲ 10 ನಿಮಿಷ 20 ಸೆಕೆಂಡುಗಳನ್ನು ತೆಗೆದುಕೊಂಡಿತು. ಈ ಸಮಯದಲ್ಲಿ ಬಾಹ್ಯಾಕಾಶ ನೌಕೆಯ ಗರಿಷ್ಠ ವೇಗವು 2,239 mph ಆಗಿತ್ತು, ಅಂದರೆ ಗಂಟೆಗೆ 3,603 ಕಿಲೋಮೀಟರ್. ಈ ಪ್ರಯಾಣದ ಮೂಲಕ ಬ್ಲೂ ಒರಿಜಿನ್ ಹೊಸ ವಿಶ್ವ ದಾಖಲೆಯನ್ನೂ ನಿರ್ಮಿಸಿದೆ. ಮೊದಲ ಬಾರಿಗೆ, ಈಜಿಪ್ಟ್ ಮತ್ತು ಪೋರ್ಚುಗಲ್‌ನ ಜನರು ಬಾಹ್ಯಾಕಾಶ ಪ್ರವಾಸೋದ್ಯಮದ ಭಾಗವಾದರು. ಇಂಜಿನಿಯರ್ ಸಾರಾ ಸಾಬ್ರಿ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಈಜಿಪ್ಟ್‌ ಪ್ರಜೆ ಎನಿಸಿದರೆ, ಉದ್ಯಮಿ ಮಾರಿಯೋ ಫೆರೇರಾ ಬಾಹ್ಯಾಕಾಶಕ್ಕೆ ಹೋದ ಮೊದಲ ಪೋರ್ಚುಗೀಸ್ ಪ್ರಜೆ ಎನಿಸಿಕೊಂಡಿದ್ದಾರೆ.

ಈ ಬಾಹ್ಯಾಕಾಶ ಪ್ರವಾಸದಲ್ಲಿ ಯೂಟ್ಯೂಬ್ ಚಾನೆಲ್ ಡ್ಯೂಡ್ ಪರ್ಫೆಕ್ಟ್‌ನ ಸಹ-ಸಂಸ್ಥಾಪಕರಾದ ಕೋಬಿ ಕಾಟನ್, ಬ್ರಿಟಿಷ್-ಅಮೆರಿಕನ್ ಪರ್ವತಾರೋಹಿ ವನೆಸ್ಸಾ ಒ'ಬ್ರೇನ್, ತಂತ್ರಜ್ಞಾನ ಕ್ಷೇತ್ರದ ದಿಗ್ಗಜ  ಕ್ಲಿಂಟ್ ಕೆಲ್ಲಿ ಥರ್ಡ್ ಮತ್ತು ದೂರಸಂಪರ್ಕ ಕಾರ್ಯನಿರ್ವಾಹಕ ಸ್ಟೀವ್ ಯಂಗ್ ಕೂಡ ಸೇರಿದ್ದಾರೆ.

ಬಾಹ್ಯಾಕಾಶ ಪ್ರಯಾಣ ಹೀಗಿತ್ತು: ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆಯು ರಾಕೆಟ್ ಮತ್ತು ಕ್ಯಾಪ್ಸುಲ್ ಅನ್ನು ಒಳಗೊಂಡಿದೆ. ಕ್ಯಾಪ್ಸುಲ್ ರಾಕೆಟ್‌ನಿಂದ ಉಡಾವಣೆಯಾಗುತ್ತದೆ.ಇದರ ನಂತರ, ಕ್ಯಾಪ್ಸುಲ್ ಭೂಮಿಯ ಮೇಲೆ ಇಳಿಯಲು ತೆಗೆದುಕೊಳ್ಳುವ ಸಮಯ 10-11 ನಿಮಿಷಗಳು. ಈ ಸಮಯದಲ್ಲಿ ಗಗನಯಾತ್ರಿಗಳು ಸ್ವಲ್ಪ ಸಮಯದವರೆಗೆ ಹಗುರವಾಗಿರುತ್ತಾರೆ. ಕ್ಯಾಪ್ಸುಲ್ ಪ್ಯಾರಾಚೂಟ್ ಮೂಲಕ ಇಳಿಯುವ ಕೆಲವು ನಿಮಿಷಗಳ ಮೊದಲು ರಾಕೆಟ್ ಇಳಿಯುತ್ತದೆ. ವಿಶೇಷವೆಂದರೆ ಇವೆರಡೂ ಮರು ಬಳಕೆಗೆ ಯೋಗ್ಯವಾಗಿವೆ ಅಂದರೆ ಮತ್ತೆ ಬಳಸಬಹುದು. ಈ ರಾಕೆಟ್ ಸ್ಪೇಸ್ ಎಕ್ಸ್ ನ ಫಾಲ್ಕನ್ 9 ಆರ್ಬಿಟಲ್ ರಾಕೆಟ್ ನಂತೆ ಕೆಲಸ ಮಾಡುತ್ತದೆ.

ಮತ್ತೆ ಅಂತರಿಕ್ಷ ಸಾಹಸ: ಜೆಫ್‌ ಬೆಜೋಸ್‌ ಗಗನಯಾನ!

1 ಟಿಕೆಟ್‌ಗೆ 10 ಕೋಟಿ ರೂಪಾಯಿ: ಕ್ವಾರ್ಟ್ಜ್ ವರದಿಯ ಪ್ರಕಾರ, ಬ್ಲೂ ಒರಿಜಿನ್‌ನ ಬಾಹ್ಯಾಕಾಶ ನೌಕೆಯ ಟಿಕೆಟ್‌ಗೆ $1.25 ಮಿಲಿಯನ್ ಅಥವಾ 9,89,73,750 ರೂ. ಅದು ರಿಚರ್ಡ್ ಬ್ರಾನ್ಸನ್ ಅವರ ಕಂಪನಿ ವರ್ಜಿನ್ ಗ್ಯಾಲಕ್ಟಿಕ್‌ನ ಟಿಕೆಟ್ ದರಕ್ಕಿಂತ ಹೆಚ್ಚಾಗಿದೆ.

ಪತಿ ಆಸ್ತಿ 13 ಲಕ್ಷ ಕೋಟಿ; ಡೈವೋ​ರ್ಸ್‌ನಿಂದ ಮಹಿಳೆಯರ ಪಟ್ಟೀಲಿ 2ನೇ ಸ್ಥಾನಕ್ಕೇರಿದ ಪತ್ನಿ

ಕಳೆದ ವರ್ಷ ಆರಂಭವಾಗಿದ್ದ ಯೋಜನೆ: ಬ್ಲ್ಯೂ ಆರಿಜಿನ್‌ ಇಲ್ಲಿಯವರೆಗೆ ಜನರನ್ನು 6 ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣಿಸುವಂತೆ ಮಾಡಿದೆ. ಈ ಮೂಲಕ ಸಂಸ್ಥೆಯು ಇದುವರೆಗೆ 31 ಮಂದಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಬ್ಲೂ ಒರಿಜಿನ್ ಕಳೆದ ವರ್ಷ ಜುಲೈನಲ್ಲಿ ಬೆಜೋಸ್ ಸೇರಿದಂತೆ ಮೂವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಳೆದ ವರ್ಷ ಮಾನವ ಸಹಿತ ಹಾರಾಟವನ್ನು ಪ್ರಾರಂಭಿಸಿದ ಕಂಪನಿಗೆ ಇದು ಆರನೇ ಮಾನವ ಸಹಿತ ಉಡಾವಣೆಯಾಗಿದೆ, ಕಳೆದ ವರ್ಷ ಬ್ಲ್ಯೂ ಒರಿಜಿನ್‌ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಅವರ ಸಹೋದರ ಮಾರ್ಕ್ ಅನ್ನು ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದು. ಇದು ವರ್ಷದ ಮೂರನೇ ಹಾರಾಟವಾಗಿದ್ದರೂ, ಎರಡು ದಶಕಗಳಲ್ಲಿ ವ್ಯಾಪಿಸಿರುವ ಬಾಹ್ಯಾಕಾಶ ನೌಕೆಯ ಒಟ್ಟಾರೆ ಅಭಿವೃದ್ಧಿಯಲ್ಲಿ 22 ನೇ ಹಾರಾಟವಾಗಿದೆ.

Latest Videos
Follow Us:
Download App:
  • android
  • ios