Asianet Suvarna News Asianet Suvarna News

ನಟಿಯರ ಬಳಸಿ ರಾಜಕಾರಣಿಗಳನ್ನು ಹಳ್ಳಕ್ಕೆ ಇಳಿಸಿದ ಪಾಕ್ ಸೇನೆ: ನಟಿಯರ ಆಕ್ರೋಶ

ಪಾಕಿಸ್ತಾನದ ರಾಜಕಾರಣಿಗಳನ್ನು ಬಲಾಢ್ಯ ಸೇನೆ ಹನಿಟ್ರ್ಯಾಪ್‌ ಬಲೆಗೆ ಕೆಡವಿದೆ, ಈ ಕೃತ್ಯಕ್ಕೆ ಪ್ರಸಿದ್ಧ ಚಿತ್ರನಟಿಯರನ್ನು ಹಾಗೂ ರೂಪದರ್ಶಿಯರನ್ನು ಬಳಸಿಕೊಂಡಿದೆ ಎಂಬ ಸ್ಫೋಟಕ ಸಂಗತಿಯನ್ನು ಪಾಕ್‌ನ ನಿವೃತ್ತ ಸೇನಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದು, ತೀವ್ರ ಸಂಚಲನಕ್ಕೆ ಕಾರಣವಾಗಿದೆ.

Honeytrap of Pakistani politicians by Pakistan army using actresses akb
Author
First Published Jan 4, 2023, 7:27 AM IST

ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಕಾರಣಿಗಳನ್ನು ಬಲಾಢ್ಯ ಸೇನೆ ಹನಿಟ್ರ್ಯಾಪ್‌ ಬಲೆಗೆ ಕೆಡವಿದೆ, ಈ ಕೃತ್ಯಕ್ಕೆ ಪ್ರಸಿದ್ಧ ಚಿತ್ರನಟಿಯರನ್ನು ಹಾಗೂ ರೂಪದರ್ಶಿಯರನ್ನು ಬಳಸಿಕೊಂಡಿದೆ ಎಂಬ ಸ್ಫೋಟಕ ಸಂಗತಿಯನ್ನು ಪಾಕ್‌ನ ನಿವೃತ್ತ ಸೇನಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದು, ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಪಾಕಿಸ್ತಾನ ಸೇನೆಯಲ್ಲಿ ಮೇಜರ್‌ ಆಗಿದ್ದ ಅದಿಲ್‌ ರಾಜಾ ಅವರು ‘ಸೋಲ್ಜರ್‌ ಸ್ಪೀಕ್ಸ್‌’ ಎಂಬ ಯೂಟ್ಯೂಬ್‌ ಚಾನಲ್‌ವೊಂದನ್ನು ನಡೆಸುತ್ತಾರೆ. ಆ ಚಾನಲ್‌ಗೆ 3 ಲಕ್ಷ ಮಂದಿ ಚಂದಾದಾರರಿದ್ದಾರೆ. ‘ನಿವೃತ್ತ ಜನರಲ್‌ ಬಾಜ್ವಾ ಹಾಗೂ ಐಎಸ್‌ಐ ಮಾಜಿ ಮುಖ್ಯಸ್ಥ ಫಯಾಜ್‌ ಹಮೀದ್‌ ಅವರು ರಾಜಕಾರಣಿಗಳನ್ನು ಖೆಡ್ಡಾಕ್ಕೆ ಕೆಡವಲು ಪಾಕಿಸ್ತಾನದ ಕೆಲವು ಚಿತ್ರನಟಿಯರು ಮತ್ತು ರೂಪದರ್ಶಿಗಳ ಜತೆ ಕೆಲಸ ಮಾಡಿದ್ದಾರೆ’ ಎಂದು ಅವರು ಸ್ಫೋಟಕ ವಿಡಿಯೋವೊಂದನ್ನು ಹರಿಯಬಿಟ್ಟಿದ್ದಾರೆ. ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲು ಸಹಕರಿಸಿದ ಚಿತ್ರನಟಿಯರ ಹೆಸರನ್ನು ಬಹಿರಂಗಪಡಿಸಿಲ್ಲವಾದರೂ ಅವರ ಇನಿಶಿಯಲ್‌ಗಳನ್ನು ತಿಳಿಸಿದ್ದಾರೆ.

ಎಂಎಚ್‌, ಎಂಕೆ, ಕೆಕೆ, ಎಸ್‌ಎ ಎಂದಷ್ಟೇ ಅವರು ಹೇಳಿದ್ದಾರೆ. ಆದರೆ ಅದನ್ನೇ ಆಧರಿಸಿ ಜನರು ಅವರು ಯಾವ ಚಿತ್ರನಟಿಯರು ಎಂದು ಅಂದಾಜಿಸಿದ್ದಾರೆ. ಜನರ ಪ್ರಕಾರ, ಮೇಜರ್‌ ಅವರ ಆರೋಪದಂತೆ ಹನಿಟ್ರ್ಯಾಪ್‌ನಲ್ಲಿ (honeytrap) ಭಾಗಿಯಾಗಿರುವ ಚಿತ್ರನಟಿಯರೆಂದರೆ ಮೇಹವಿಶ್‌ ಹಯಾತ್‌(Mehwish Hayat), ಮಹೀರಾ ಖಾನ್‌ (Mahira Khan), ಕುಬ್ರಾ ಖಾನ್‌ (Kubra Khan) ಹಾಗೂ ಸಾಜಲ್‌ ಅಲಿ(Sajal Ali).ಆರಂಭದಲ್ಲಿ ಸುಮ್ಮನಿದ್ದ ಈ ಚಿತ್ರನಟಿಯರು ಮೇಜರ್‌ ಆರೋಪದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮೌನ ಮುರಿದಿದ್ದಾರೆ. ಮೇಜರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನು ಸಮರ (legal action) ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದು, ವಿಡಿಯೋ ಡಿಲೀಟ್‌ ಮಾಡಲು ಆಗ್ರಹಿಸಿದ್ದಾರೆ.

ಕೇರಳದಲ್ಲಿ 68 ವರ್ಷದ ಮುದುಕನಿಗೆ Honeytrap: 23 ಲಕ್ಷ ಸುಲಿಗೆ ಮಾಡಿದ ವ್ಲೋಗರ್..!

ಹೈಕೋರ್ಟ್ ಸಿಬ್ಬಂದಿಯನ್ನೇ ಖೆಡ್ಡಾಗೆ ಕೆಡವಿದ 'ಹನಿಟ್ರ್ಯಾಪ್' ಗ್ಯಾಂಗ್‌: ಪ್ರಮುಖ ಆರೋಪಿ ಸೇರಿ 10 ಜನ ಅರೆಸ್ಟ್‌

 

 

Follow Us:
Download App:
  • android
  • ios