Asianet Suvarna News Asianet Suvarna News

ದೇವರ ಕೋಣೆಗೆ ಬಂದ ವಿಷಕಾರಿ ಉಗುಳುವ ಹಾವು ಸೆರೆ

  • ಗೋಡೆಯ ಸೆರೆಯಲ್ಲಿ ಅಡಗಿದ್ದ ಹಾವು
  • ಶ್ರಮ ಪಟ್ಟು ಹಾವು ಹಿಡಿದ ಉರಗ ರಕ್ಷಕ
  • ಇದು ದಕ್ಷಿಣ ಆಫ್ರಿಕಾದ ಅತ್ಯಂತ ವಿಷಕಾರಿ ಹಾವು
     
Highly Venomous Mozambique Spitting Cobra Found In South Africa akb
Author
Bangalore, First Published May 17, 2022, 4:43 PM IST

ದಕ್ಷಿಣ ಆಫ್ರಿಕಾದಲ್ಲಿ ಮನೆಯೊಂದರ ಪ್ರಾರ್ಥನಾ ಕೋಣೆಗೆ ಅತ್ಯಂತ ವಿಷಕಾರಿ ಮೊಜಾಂಬಿಕ್ ಉಗುಳುವ ಹಾವೊಂದು ಬಂದಿದ್ದು ಅಲ್ಲಿನ ಉರಗ ರಕ್ಷಕ ನಿಕ್ ಇವಾನ್ಸ್ (Nick Evans) ಈ ವಿಷಪೂರಿತ ಹಾವನ್ನು ಮನೆಯಿಂದ ಹಿಡಿದು ಬೇರೆಡೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾವು ಹಿಡಿಯುವ ಕ್ಷಣದ ಭಯಾನಕ ಅನುಭವಗಳನ್ನು ಅವರು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಮೊಜಾಂಬಿಕ್‌ನ ರಿಸರ್ವಾಯರ್ ಹಿಲ್ಸ್‌ನಲ್ಲಿ ಇರುವ ಮನೆಯೊಂದರಿಂದ, ನಿಕ್ ಇವಾನ್ಸ್ ಅವರಿಗೆ ಮನೆಯಲ್ಲಿ ಹಾವು ಇರುವ ಬಗ್ಗೆ ಕರೆ ಬಂದ ನಂತರ ನಂತರ ಅಲ್ಲಿಗೆ ತೆರಳಿದ ಅವರು ಆ ಹಾವನ್ನು ಹೇಗೆ ರಕ್ಷಣೆ ಮಾಡಿದೆ ಎಂಬುದನ್ನು ತಿಳಿಸಿದ್ದಾರೆ. ಇದು ಆಫ್ರಿಕಾದ ಅತ್ಯಂತ ವಿಷಪೂರಿತ ಹಾವಾಗಿದ್ದು, ಮನೆಯೊಂದರ ಪ್ರಾರ್ಥನಾ ಗೋಡೆಯಲ್ಲಿದ್ದ ರಂಧ್ರವೊಂದರಲ್ಲಿ ಪತ್ತೆಯಾಗಿತ್ತು. ನಿಕ್ ಇವಾನ್ಸ್ ಅವರು ಹಾವಿದ್ದ ಮನೆಗೆ ಬಂದಾಗ ಈ ಹಾವು ಯಾವ ಜಾತಿಯದ್ದು ಎಂಬುದು ಗುರುತಿಸುವುದು ಕಷ್ಟವಾಗಿದೆ. 

 

ನಾನು ಬಂದಾಗ, ಹಾವನ್ನು ಗುರುತಿಸುವ ಆಶಯದೊಂದಿಗೆ ನಾನು ನನ್ನ ಫೋನ್ ಅನ್ನು ಗೋಡೆಯ ರಂಧ್ರದಲ್ಲಿ ವೀಡಿಯೊ ಮೋಡ್‌ನಲ್ಲಿ ಅಂಟಿಸಿದೆ ಎಂದು ಅವರು ಹೇಳಿದರು. ಈ ವೇಳೆ ಏನೋ ಸದ್ದು ಕೇಳಿದಂತೆ ಅನಿಸಿತು. ಹಾವುಗಳು ಕಿರಿಕಿರಿಗೊಂಡಾಗ, ಅವು ಒಂದು ವಿಶಿಷ್ಟವಾದ, ಸಣ್ಣ ಹಿಸ್ ಎಂಬ ಸದ್ದನ್ನು ಹೊರ ಸೂಸುತ್ತವೆ. ಆದರೆ, ನಾನು ಅದನ್ನು ಕ್ಯಾಮರಾದಲ್ಲಿ ನೋಡಲು ಸಾಧ್ಯವಾಗಲಿಲ್ಲ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಹಾವಿನೊಂದಿಗೆ ಹೂವಿನಂತೆ ಹುಡುಗಿಯ ಆಟ: ವಿಡಿಯೋ ವೈರಲ್‌

ಹಾವು ಗೋಡೆಯ ಸೆರೆಯಲ್ಲಿ ಎಲ್ಲಿದೆ ಎಂದು ಪತ್ತೆಹಚ್ಚಲು ನಾನು ಹೆಣಗಾಡಿದೆ. ನಂತರ ಮನೆಯ ಬಿರುಕು ಬಿಟ್ಟ ಗೋಡೆಯ ಭಾಗದಲ್ಲಿ ಹಾವು ಹೊರಟು ಹೋಗಿರಬಹುದು ಎಂದು ಭಾವಿಸಿದೆ. ಆದರೆ ಮನೆ ಮಾಲೀಕರು ಹಾವನ್ನು ಹೊರಗೆ ತರಲೇಬೇಕು ಎಂದು ಹಠ ಹಿಡಿದರು. ಹೀಗಾಗಿ ಆ ಮನೆಯ ಕೋಣೆಯ ಒಂದು ಭಾಗವನ್ನು ಒಡೆಯಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ಗ್ಲಾಸ್‌ನಿಂದ ನೀರು ಕುಡಿಯುತ್ತಿರುವ ಕರಿನಾಗರ: ಭಯಾನಕ ವಿಡಿಯೋ
 

ಮನೆಯ ಮಾಲೀಕನ ಸಹಾಯದಿಂದ ಸ್ವಲ್ಪ ಗೋಡೆಯನ್ನು ಒಡೆದ ನಂತರ ಹಾವು ನಿರೀಕ್ಷಿಸಿದ ಸ್ಥಳದಲ್ಲಿ ಇರುವುದು ನಿಖರವಾಗಿ ಕಂಡು ಬಂತು. ಆದರೆ ಅದು ಶಾಂತ ಸ್ಥಿತಿಯಲ್ಲಿ ಇರಲಿಲ್ಲ. ಆದಾಗ್ಯೂ ಇವಾನ್ಸ್ ಅವರು ಹೇಗಾದರೂ ಮುಂದೆ ಹೋಗಿ ಇಕ್ಕಳದ ಸಹಾಯದಿಂದ ಹಾವನ್ನು ಹೊರತೆಗೆದರು ಎಂದು ವಿವರಿಸಿದ್ದಾರೆ. ಈ ವೇಳೆ ಅದು ನನ್ನ ಇಕ್ಕುಳಗಳ ಮೇಲೆ ಹಾಗೂ ನಂತರ ನನ್ನ ಮೇಲೆ ಉಗ್ರವಾಗಿ ಉಗುಳಿತು ಎಂದು ಅವರು ಹೇಳಿದರು.ಅಂತಿಮವಾಗಿ ಅವರು ವಿಷಕಾರಿ ಹಾವನ್ನು ಶ್ರಮಪಟ್ಟು ಹಿಡಿದಿದ್ದಾಗಿ ವಿವರಿಸಿದ್ದಾರೆ. ಹಾವನ್ನು ಹೊರ ತೆಗೆದ ನಂತರ ಕುಟುಂಬದವರು ಖುಷಿ ಪಟ್ಟರು ಎಂದು ಇವಾನ್ಸ್ ವಿವರಿಸಿದರು.

ಮೊಜಾಂಬಿಕ್ ದಕ್ಷಿಣ ಆಫ್ರಿಕಾದ ರಾಷ್ಟ್ರವಾಗಿದ್ದು, ಉದ್ದವಾದ ಹಿಂದೂ ಮಹಾಸಾಗರ ಕರಾವಳಿಯ ಹಾಗೂ ಟೋಫೊದಂತಹ ಜನಪ್ರಿಯ ಕಡಲತೀರಗಳಿಂದ ಕೂಡಿದೆ. ವಾರದ ಹಿಂದೆ ಭಾರೀ ಗಾತ್ರದ ವಿಷಕಾರಿ ನಾಗರಹಾವೊಂದನ್ನು ಉರಗಪ್ರೇಮಿಯೊಬ್ಬರು ರಕ್ಷಿಸಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ವಂಟ್ಲಮಾಮಿಡಿ ಅರಣ್ಯ ಪ್ರದೇಶದಲ್ಲಿ ನಡೆದಿತ್ತು. ರಕ್ಷಿಸಲ್ಪಟ್ಟ ನಾಗರಹಾವು ಬರೋಬರಿ 13 ಅಡಿ ಉದ್ದವಿತ್ತು ಎಂದು ಆಂಧ್ರಪ್ರದೇಶ ಡಿಡಿ ನ್ಯೂಸ್ ವರದಿ ಮಾಡಿದೆ. ಮೇ 8 ರಂದು ರೈತರೊಬ್ಬರ ತಾಳೆ ಎಣ್ಣೆ ಗಿಡದ ತೋಟದಲ್ಲಿ ಹಾವು ಕಂಡುಬಂದಿತ್ತು. ಘಾಟ್‌ ರಸ್ತೆ ಸಮೀಪದ ಸೈದ್ದರಾವ್‌ (Saidarao) ಎಂಬ ರೈತರ ತೋಟದಲ್ಲಿ ಈ ಭಾರಿ ಗಾತ್ರದ ಹಾವು ಪತ್ತೆಯಾಗಿತ್ತು. ಕೂಡಲೇ ರೈತ ಸೈದರಾವ್ ಅವರು ಪೂರ್ವ ಘಟ್ಟಗಳ ವೈಲ್ಡ್‌ಲೈಫ್ ಸೊಸೈಟಿಯ (Wildlife Society) ಸದಸ್ಯ ಹಾವು ಹಿಡಿಯುವ ವೆಂಕಟೇಶ್‌ (Venkatesh) ಅವರಿಗೆ ದೂರವಾಣಿ ಮೂಲಕ ಹಾವು ಇರುವ ಬಗ್ಗೆ ಮಾಹಿತಿ ನೀಡಿದರು. ಅವರು ಬಂದು ಈ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

Follow Us:
Download App:
  • android
  • ios