Asianet Suvarna News Asianet Suvarna News

ಗ್ಲಾಸ್‌ನಿಂದ ನೀರು ಕುಡಿಯುತ್ತಿರುವ ಕರಿನಾಗರ: ಭಯಾನಕ ವಿಡಿಯೋ

  • ಹಾವಿಗೆ ನೀರು ಕುಡಿಸುತ್ತಿರುವ ಯುವಕ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Man offer water to black cobra video goes viral akb
Author
Bangalore, First Published May 13, 2022, 10:38 AM IST

ಹಾವು ಎಂದರೆ ಭಯಗೊಂಡು ನಾವೆಲ್ಲರೂ ಮಾರು ದೂರು ಓಡುವುದೇ ಹೆಚ್ಚು ಆದರೆ ಇಲ್ಲೊಬ್ಬ ವ್ಯಕ್ತಿ ಕೈಯಲ್ಲಿ ಗ್ಲಾಸ್‌ ಹಿಡಿದುಕೊಂಡು ಭಾರಿ ಗಾತ್ರದ ಕರಿ ನಾಗರವೊಂದಕ್ಕೆ ನೀರು ಕುಡಿಸುತ್ತಿದ್ದಾನೆ. ಇದರ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಯ ಮೂಡಿಸುತ್ತಿದೆ.  ನಾಗರಹಾವು ಅತ್ಯಂತ ವಿಷ ಪೂರಿತ ಹಾವಾಗಿದೆ. ಈ ಕರಿ ನಾಗರ (Black Cobra) ಹಾವು ಆಫ್ರಿಕಾ (Africa) ಮೂಲದ ಹಾವಾಗಿದ್ದು, ಉಷ್ಣ ಅಥವಾ ಬೆಚ್ಚಗಿನ ಪ್ರದೇಶದಲ್ಲಿ ವಾಸಿಸುತ್ತವೆ. ಇದೇ ಕಾರಣಕ್ಕೆ ಹಾವುಗಳು ತಿಂಗಳ ಕಾಲ ಬಾಯಾರಿಕೆಯ ಹಾಗೂ ನಿರ್ಜಲೀಕರಣದ ಸ್ಥಿತಿಯಲ್ಲಿಯೂ ಜೀವಂತವಾಗಿರುತ್ತವೆ. ಭಾರತೀಯ ನಾಗರಹಾವುಗಳು (Indian Cobra) ಜನರಿಂದ ನೀರನ್ನು ಸ್ವೀಕರಿಸುವ ದೃಶ್ಯಗಳನ್ನು ನೀವು ನೋಡಿರಬಹುದು. 

ಈ ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬ ಯಾವುದೇ ಭಯವಿಲ್ಲದೇ ಕೈಯಲ್ಲಿ ನೀರು ತುಂಬಿದ ಗ್ಲಾಸ್ ಹಿಡಿದುಕೊಂಡು ಹುಲ್ಲಿನ ಮೇಲೆ ಕುಳಿತುಕೊಂಡು ಹಾವಿಗೆ ನೀರು ಕುಡಿಸುತ್ತಿದ್ದಾನೆ. ಹಾವು ಕೂಡ ಯಾವುದೇ ಭಯವಿಲ್ಲದೇ ಈತನಿಂದ ನೀರು ಸ್ವೀಕರಿಸುತ್ತದೆ. ಈ ವಿಡಿಯೋವನ್ನು ಎನ್‌ ಸಿ ಸುಕುಮಾರ್ (NC sukumar) ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

 

ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ (Susanta Nanda) ಅವರು ಈ ಬಾತುಕೋಳಿ ಮರಿಗಳು ಹಾಗೂ ಮಂಗದ ಮರಿಯೊಂದು ಜೊತೆಯಾಗಿ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸುಕುಮಾರ್ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಕೋತಿ ಮರಿಯೊಂದಿಗೆ ಬಾತುಕೋಳಿ ಮರಿಗಳು ಕಲ್ಲಂಗಡಿ ಹಣ್ಣು ತಿನ್ನುತ್ತಿರುವ ವಿಡಿಯೋವನ್ನು 23,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಮನೆಯೊಳಗಿದ್ದ ಮಣ್ಣಿನ ಮಡಕೆಯಲ್ಲಿ ನೂರಾರು ಹಾವುಗಳು, ದೃಶ್ಯ ಕಂಡು ಬೆಚ್ಚಿ ಬಿದ್ದ ಗ್ರಾಮಸ್ಥರು
 

ಜೀವಂತ ಹಾವೊಂದನ್ನು ಮತ್ತೊಂದು ಹಾವು ನುಂಗಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral) ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ. ಹಾವುಗಳು ಅವಕಾಶವಾದಿ ಪರಭಕ್ಷಕಗಳಾಗಿವೆ (opportunistic predators) ಮತ್ತು ತಮ್ಮ ಯಾವುದೇ ಬೇಟೆಯನ್ನು ಬೇಟೆಯಾಡುತ್ತವೆ. ಹೆಚ್ಚಿನ ಹಾವುಗಳು ದಂಶಕಗಳು ಅಥವಾ ಪಕ್ಷಿಗಳಂತಹ ಸಣ್ಣ ಪ್ರಾಣಿಗಳನ್ನು ತಿನ್ನುತ್ತವೆ ಅಥವಾ ಅವುಗಳನ್ನು ತಮ್ಮ ವಿಷಕಾರಿ ವಿಷದಿಂದ ಕೊಲ್ಲುತ್ತವೆ, ದೊಡ್ಡ ಹಾವುಗಳು ಸಾಮಾನ್ಯವಾಗಿ ಜಿಂಕೆಗಳು, ಹಂದಿಗಳು, ಕೋತಿಗಳು ಮತ್ತು ಇತರ ದೊಡ್ಡ ಬೇಟೆಯನ್ನು ತಿನ್ನುತ್ತವೆ. ಆದರೆ  ರಾಜಸರ್ಪ(kingsnake) ಎಂದು ಕರೆಯಲ್ಪಡುವ ಹಾವು ರಾಟಲ್‌ಸ್ನೇಕ್‌ನಂತಹ (rattlesnake) ವಿಷಕಾರಿ ಹಾವುಗಳು ಸೇರಿದಂತೆ ಇತರ ಹಾವುಗಳನ್ನು ತಿನ್ನುತ್ತದೆ. 

ಎಂಥಾ ಧೈರ್ಯ... ಅಂಗೈ ಮೇಲೆ ಹಾವಿಗೆ ನೀರು ಕುಡಿಸಿದ ವ್ಯಕ್ತಿ

ವಿಡಿಯೋದಲ್ಲಿ ಕಾಣಿಸುವಂತೆ ಬೆಳೆ ಕಟಾವು ಮಾಡಿರುವ ಗದ್ದೆಯೊಂದರಲ್ಲಿರು ಸಣ್ಣ ಮಾಟೆಗೆ ತಲೆ ಹಾಕುವ ಹಾವು ಮತ್ತೊಂದು ಹಾವನ್ನು ಹೊರ ತೆಗೆದು ನುಂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನುಂಗಲ್ಪಟ್ಟ ಹಾವಿನ ಇನರ್ಧ ದೇಹ ಆ ಹೊಂಡದಲ್ಲಿ ತಿರುಚುತ್ತಿರುವುದನ್ನು ನೋಡಬಹುದು, ಏಕೆಂದರೆ ದೊಡ್ಡ ಹಾವು ಅದನ್ನು ಜೀವಂತವಾಗಿ ತಿನ್ನುತ್ತಿದೆ. ದೊಡ್ಡ ಹಾವು ತನ್ನ ಬಾಯಿಯನ್ನು ಅಗಲವಾಗಿ ತೆರೆದು ಹಾವನ್ನು ನುಂಗುವುದನ್ನು ನೋಡಬಹುದು. ಕೊನೆಯಲ್ಲಿ, ಹಾವಿನ ಬಾಲವು ಮತ್ತೊಂದು ಹಾವಿನ ಬಾಯಿಯೊಳಗೆ ಹೋಗುವುದನ್ನು ನೋಡಬಹುದು. ಹಾವು ತನ್ನದೇ ಪ್ರಬೇಧಕ್ಕೆ ಸೇರಿದ ಮತ್ತೊಂದು ಹಾವನ್ನು ಕಬಳಿಸಿದ್ದು ಸೆರೆಯಾಗಿರುವ ಈ ವಿಡಿಯೋಗೆ ನೆಟ್ಟಿಗರು ಅಸಹ್ಯ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios