33 ಕೋಟಿ ಗೆದ್ದವನಿಗೆ ಒಂದು ರೂ ಅನುಭವಿಸೋ ಯೋಗ ಇಲ್ಲ: ಲಾಟರಿ ಗೆಲ್ಲುತ್ತಿದ್ದಂತೆ ಎಳೆದೊಯ್ದ ಜವರಾಯ
ಇಲ್ಲೊಬ್ಬ ವ್ಯಕ್ತಿ ಲಾಟರಿ ಹೊಡೆದ ಖುಷಿ ತಡೆಯಲಾಗದೇ ಸತ್ತೇ ಹೋಗಿದ್ದಾರೆ. ಸಿಂಗಾಪುರದ ಬೇ ಸ್ಯಾಂಡ್ ಕಾಸಿನೋದಲ್ಲಿ ಈ ಘಟನೆ ನಡೆದಿದೆ.
ಸಿಂಗಾಪುರ: ಅನಿರೀಕ್ಷಿತವಾಗಿ ಹಣ ಬಂದಾಗ ಖುಷಿಯಾಗುವುದು ಸಹಜ. ಅದರಲ್ಲೂ ಲಾಟರಿ ಮಗುಚಿ ಲಕ್ಷ ಕೋಟಿಗಟ್ಟಲೇ ಹಣ ಬಂದರೆ ಖುಷಿ ತಡೆಯುವುದಾದರೂ ಹೇಗೆ? ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಲಾಟರಿ ಹೊಡೆದ ಖುಷಿ ತಡೆಯಲಾಗದೇ ಸತ್ತೇ ಹೋಗಿದ್ದಾರೆ. ಹೌದು ಲಾಟರಿ ಮಗುಚಿದ ಖುಷಿಯ ವಿಚಾರ ಕೇಳಿದ ವ್ಯಕ್ತಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ. ಸಿಂಗಾಪುರದ ಬೇ ಸ್ಯಾಂಡ್ ಕಾಸಿನೋದಲ್ಲಿ ಈ ಘಟನೆ ನಡೆದಿದೆ. ಲಾಟರಿ ಹೊಡೆದ ವಿಚಾರ ತಿಳಿಯುತ್ತಿದ್ದಂತೆ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ ದೃಶ್ಯ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೋದಲ್ಲಿ ಘಟನೆ ನಡೆದಿದ್ದು, ಇದು ಖುಷಿಯ ಸಮಯವನ್ನು ಕ್ಷಣದಲ್ಲೇ ಶೋಕಕ್ಕೆ ತಿರುಗಿಸಿದೆ. 4 ಮಿಲಿಯನ್ ಡಾಲರ್ ಬಹುಮಾನ (ಭಾರತೀಯ ರೂಪಾಯಿಯಲ್ಲಿ ಸುಮಾರು 33 ಕೋಟಿ) ಮೊತ್ತದ ಲಾಟರಿಯನ್ನು ವ್ಯಕ್ತಿಯೊಬ್ಬರು ಗೆದ್ದಿದ್ದು, ಇದಾಗಿ ಸ್ವಲ್ಪ ಹೊತ್ತಿನಲ್ಲಿ ಉದ್ವೇಗ ತಡೆಯಲಾಗದೇ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಎಲ್ಲರೂ ಖುಷಿಯ ಕ್ಷಣವನ್ನು ಸೆಲೆಬ್ರೇಷನ್ ಮಾಡುತ್ತಿದ್ದರೆ ಈತ ಮಾತ್ರ ಒಮ್ಮೆಗೆ ಬಂದ ಖುಷಿಯನ್ನು ಅರಗಿಸಿಕೊಳ್ಳಲಾಗದೇ ಪ್ರಾಣ ಬಿಟ್ಟಿದ್ದಾರೆ.
ಬೆಂಗಳೂರು: ಸೈಬರ್ ವಂಚನೆಯಲ್ಲಿ ಗಳಿಸಿದ್ದ ಹಣ ಕ್ಯಾಸಿನೋದಲ್ಲಿ ಕಳೆದ..!
ಕುಸಿದು ಬಿದ್ದ ಲಾಟರಿ ವಿನ್ನರ್‌ನ ಸಹಾಯಕ್ಕೆ ಕೂಡಲೇ ಕ್ಯಾಸಿನೋ ಸಿಬ್ಬಂದಿ ಹಾಗೂ ತುರ್ತಾಗಿ ಸ್ಪಂದಿಸುವ ಸಿಬ್ಬಂದಿಯೂ ಕೂಡ ಆಗಮಿಸಿ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಕೂಡ ವ್ಯಕ್ತಿಯನ್ನು ಬದುಕಿಸಲಾಗಲಿಲ್ಲ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಷಾದ ಮೂಡಿಸುತ್ತಿದೆ. ಅಕ್ರಮ ಹಣ ವರ್ಗಾವಣೆ ಸೇರಿದಂತೆ ಸಿಂಗಾಪುರದಲ್ಲಿ ಕ್ಯಾಸಿನೊ ಉದ್ಯಮಕ್ಕೆ ಸಂಬಂಧಿಸಿದ ಸಂಭಾವ್ಯ ಅಪಾಯಗಳ ಬಗ್ಗೆ ಹೆಚ್ಚಿನ ಜಾಗೃತಿಯ ನಡುವೆಯೇ ಈ ಘಟನೆ ಸಂಭವಿಸಿದೆ.
Electoral Bond: ಲಾಟರಿ ಕಿಂಗ್ ಕಂಪನಿಯಿಂದ ಟಿಎಂಸಿಗೆ 542 ಕೋಟಿ, ಬಿಜೆಪಿಗೆ 'ಮೇಘಾ' ಗರಿಷ್ಠ ಡೋನರ್!
ಸಿಂಗಾಪೂರ್‌ದ ಭೂಮಿ ಆಧಾರಿತ ಕ್ಯಾಸಿನೊಗಳು (ಭೂಮಿ ಆಧಾರಿತ ಅಥವಾ ಲ್ಯಾಂಡ್ ಬೇಸ್ಡ್ ಕ್ಯಾಸಿನೋ ಎಂದರೆ ಸಾಂಪ್ರದಾಯಿಕ ಇಟ್ಟಿಗೆ ಗೂಡು ಅಥವಾ ಗಾರೆ ಸ್ಥಳಗಳಲ್ಲಿ ನಡೆಯುವ ಕ್ಯಾಸಿನೋ ಆಟಗಳು) ದೊಡ್ಡ ಮಟ್ಟದ ನಗದು ವಹಿವಾಟುಗಳಿಂದಾಗಿ ಅಕ್ರಮ ಹಣ ವರ್ಗಾವಣೆಯ ಅಪಾಯಗಳನ್ನು ಎದುರಿಸುತ್ತಿವೆ. ಇವು ಅಪರಾಧ ಚಟುವಟಿಕೆಗಳಲ್ಲಿ ನೇರವಾದ ಭಾಗಿಯಾಗುವಿಕೆಯ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಅದೇನೆ ಇರಲಿ ಈಗ ಲಾಟರಿ ಗೆದ್ದ ವ್ಯಕ್ತಿಯ ಹಠಾತ್ ಸಾವು ಕುಟುಂಬಕ್ಕೆ ಅರಗಿಸಿಕೊಳ್ಳದಂತಾಗಿದೆ. ಅಲ್ಲದೇ ಸಾವು ಖುಷಿ ಬೇಸರ ಯಾವುದನ್ನು ನೋಡದೆ ಯಾವಾಗ ಬೇಕಾದರೂ ಬರಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
2,800 ಕೋಟಿ ರೂ ಲಾಟರಿ ಜಾಕ್‌ಪಾಟ್, ಮೊತ್ತ ಸ್ವೀಕರಿಸಲು ಹೋದ ವ್ಯಕ್ತಿಗೆ ಶಾಕ್ ಕೊಟ್ಟ ಕಂಪನಿ!