Asianet Suvarna News Asianet Suvarna News

2,800 ಕೋಟಿ ರೂ ಲಾಟರಿ ಜಾಕ್‌ಪಾಟ್, ಮೊತ್ತ ಸ್ವೀಕರಿಸಲು ಹೋದ ವ್ಯಕ್ತಿಗೆ ಶಾಕ್ ಕೊಟ್ಟ ಕಂಪನಿ!

ಲಾಟರಿ ಟಿಕೆಟ್ ಖರೀದಿಸಿದ ವ್ಯಕ್ತಿಗೆ ಫಲಿತಾಂಶ ನೋಡಿ ಸಂಭ್ರಮವೋ ಸಂಭ್ರಮ. ಕಾರಣ ಜಾಕ್‌ಪಾಟ್ 10-20 ಕೋಟಿಯಲ್ಲ, ಬರೋಬ್ಬರಿ 2,800 ಕೋಟಿ ರೂಪಾಯಿ. ಖುಷಿಯಲ್ಲಿ ಲಾಟರಿ ಕಂಪನಿಗೆ ತೆರಳಿ ತನ್ನ ಬಹುಮಾನ ಮೊತ್ತ ನೀಡುವಂತೆ ಕೇಳಿಕೊಂಡರೆ, ಕಂಪನಿ ಅಯ್ಯೋ ಇದು ನಂಬರ್ ಮಿಸ್ಟೇಕ್ ಆಗಿದೆ ಎಂದು ಕೈತೊಳೆದುಕೊಂಡಿದೆ.
 

Washington Man Wins RS 2800 crore Lottery jackpot company denied and says its not valid ticket ckm
Author
First Published Feb 20, 2024, 4:06 PM IST

ವಾಶಿಂಗ್ಟನ್ ಡಿಸಿ(ಫೆ.20) ಲಾಟರಿ ಟಿಕೆಟ್ ಮೂಲಕ ರಾತ್ರೋರಾತ್ರಿ ಕೆಲವರು ಶ್ರೀಮಂತರಾಗಿದ್ದಾರೆ. ಒಂದು ಕ್ಷಣದಲ್ಲಿ ತಮ್ಮ ಅದೃಷ್ಠದ ರೇಖೆಗಳು ಬದಲಾಗಿದೆ. ಹೀಗಾಗಿ ಹಲವರು ಲಾಟರಿ ಮೂಲಕ ಅದೃಷ್ಠ ಪರೀಕ್ಷೆ ಮಾಡುತ್ತಲೇ ಇರುತ್ತಾರೆ. ಹೀಗೆ ಇಲ್ಲೊಬ್ಬ ಲಾಟರಿಯೊಂದನ್ನು ಖರೀದಿಸಿ ಫಲಿತಾಂಶದ ಲೈವ್ ವೀಕ್ಷಿಸಲು ಮರೆತಿದ್ದಾರೆ. ಕೆಲ ದಿನಗಳ ಬಳಿಕ ಲಾಟರಿ ಫಲಿತಾಂಶ ಏನಾಗಿದೆ ಎಂದು ಕಂಪನಿ ವೆಬ್‌ಸೈಟ್‌ಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ತನ್ನ ನಂಬರ್ ಲಾಟರಿಗೆ ಬರೋಬ್ಬರಿ 2,800 ಕೋಟಿ ರೂಪಾಯಿ ಜಾಕ್‌ಪಾಟ್ ಹೊಡೆದಿರುವುದು ನೋಡಿ ಸಂಭ್ರಮಪಟ್ಟಿದ್ದಾರೆ. ಆದರೆ ಇದೇ ಟಿಕೆಟ್‌ನ್ನು ಕಂಪನಿಗೆ ನೀಡಿ ಲಾಟರಿ ಬಹುಮಾನ ನೀಡುವಂತೆ ಕೋರಿದಾಗ, ಅರೆ ವೆಬ್‌ಸೈಟ್‌ನಲ್ಲಿ ನಂಬರ್ ಮಿಸ್ಟೇಕ್ ಆಗಿದೆ. ನಿಮ್ಮ ಲಾಟರಿಗೆ ಒಂದು ರೂಪಾಯಿ ಬಂದಿಲ್ಲ ಎಂದಿದ್ದಾರೆ. ಆಕ್ರೋಶಗೊಂಡ ಗ್ರಾಹಕ ಇದೀಗ ಕಾನೂನು ಹೋರಾಟ ಆರಂಭಿಸಿದ ಘಟನೆ ಅಮೆರಿಕದ ವಾಶಿಂಗ್ಟನ್ ಡಿಸಿಯಲ್ಲಿ ನಡೆದಿದೆ.

ಜಾನ್ ಚೀಕ್ಸ್ ಒಂದೊಂದು ಬಾರಿ ಲಾಟರಿ ಖರೀದಿಸುವ ಅಭ್ಯಾಸ ಹೊಂದಿದ್ದಾರೆ. ಹೀಗೆ ಜಾನ್ ಚೀಕ್ಸ್ ಜನವರಿ 6, 2024ರಂದು ಪವರ್ ಬಾಲ್ ಕಂಪನಿಯ ಲಾಟರಿ ಖರೀದಿಸಿದ್ದಾರೆ. ಈ ಲಾಟರಿಯ ಮೊದಲ ಬಹುಮಾನ ಮೊತ್ತ $340. ಭಾರತೀಯ ರೂಪಾಯಿಗಳಲ್ಲಿ 2,800 ಕೋಟಿ ರೂಪಾಯಿ. ಫೆಬ್ರವರಿಯಲ್ಲಿ ಪವರ್ ಬಾಲ್ ಲಾಟರಿಯ ಫಲಿತಾಂಶ ಘೋಷಣೆಯಾಗಿದೆ. 

ಮಗನ ಕಾರಣಕ್ಕೆ ಅರೆ ಕ್ಷಣದಲ್ಲಿ ಲಕ್ಷಾಧಿಪತಿಯಾದ ತಂದೆ! ಹಣ ಖರ್ಚು ಮಾಡೋದನ್ನು ಇವನಿಂದ ಕಲಿಬೇಕು

ಫಲಿತಾಂಶ ಘೋಷಣೆಯ ಲೈವ್ ಕಾರ್ಯಕ್ರಮ ವೀಕ್ಷಿಸಲು ಜಾನ್ ಚೀಕ್ಸ್ ಮರೆತಿದ್ದಾರೆ. ಎರಡು ದಿನದ ಬಳಿಕ ತಾನು ಖರೀದಿಸಿದ ಲಾಟರಿ ಟಿಕೆಟ್ ಏನಾಗಿದೆ ಎಂದು ಪರಿಶೀಲಿಸಲು ಜಾನ್ ಚೀಕ್ಸ್ ಮುಂದಾಗಿದ್ದಾರೆ. ಇದಕ್ಕಾಗಿ ಪವರ್ ಬಾಲ್ ಕಂಪನಿಯ ವೆಬ್‌ಸೈಟ್‌ಗೆ ತೆರಳಿ ಲಾಟರಿ ಫಲಿತಾಂಶದ ನಂಬರ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಹುಮಾನದ ಲಿಸ್ಟ್‌ನಲ್ಲಿ ತಾನು ಖರೀದಿಸಿದ ನಂಬರ್ ಇರುವುದು ಗಮನಿಸಿದ್ದಾರೆ.

ಒಂದೆಡೆ ಸಂಭ್ರಮ, ಮತ್ತೊಂದೆಡೆ ಇದು ನಿಜವೋ ಅನ್ನೋ ಅನುಮಾನ. ನಾಲ್ಕು ಬಾರಿ ನಂಬರ್ ಪರಿಶೀಲನೆ ನಡೆಸಿ ಖಚಿತಪಡಿಸಿದ್ದಾರೆ. ಮರುದಿನ ಬೆಳಗ್ಗೆ ಲಾಟರಿ ಎಜೆನ್ಸಿ ಕಂಪನಿಗೆ ತೆರಲಿ ತಮ್ಮ ಲಾಟರಿ ನೀಡಿದ್ದಾರೆ. ಬಳಿಕ ಬಹುಮಾನ ಮೊತ್ತ ನೀಡುವಂತೆ ಸೂಚಿಸಿದ್ದಾರೆ. ಲಾಟರಿ ಪರಿಶೀಲಿಸಿದ ಸಿಬ್ಬಂದಿಗಳು ಈ ಲಾಟರಿ ಕಸದ ಬುಟ್ಟಿಗೆ ಎಸೆಯಿರಿ. ಇದರಲ್ಲಿ ಯಾವುದೇ ಬಹುಮಾನವಿಲ್ಲ ಎಂದಿದ್ದಾರೆ. 

8 ಕೋಟಿ ಲಾಟರಿ ಗೆದ್ದ ಖುಷಿ ತಡೆಯಲಾಗದೇ ಸ್ಟೇಜ್‌ನಲ್ಲೇ ಕುಸಿದು ಬಿದ್ದ ಮಹಿಳೆ

ಆಘಾತಗೊಂಡ ಚಾನ್ ಚೀಕ್ಸ್ ವೆಬ್‌ಸೈಟ್‌ನಲ್ಲಿ ನೀವೇ ಹಾಕಿದ್ದೀರಿ. ಇದೀಗ ಬಹುಮಾನ ನೀಡಿ ಎಂದು ಪಟ್ಟುಹಿಡಿದ್ದಾನೆ. ಆದರ ಕಂಪನಿ ಜಾನ್ ಚೀಕ್ಸ್‌ಗೆ ಲಾಟರಿ ಮೊತ್ತ ನೀಡಲು ನಿರಾಕರಿಸಿದೆ. ವೆಬ್‌ಸೈಟ್‌ನಲ್ಲಿ ವಿಜೇತರ ನಂಬರ್ ಹಾಕುವಾಗ ತಪ್ಪಾಗಿದೆ. ಇದು ಟೈಪ್ ಮಿಸ್ಟೇಕ್ ಎಂದು ಕಂಪನಿ ಹೇಳಿದೆ. ಇದರಿಂದ ಆಕ್ರೋಶಗೊಂಡ ಜಾನ್ ಚೀಕ್ಸ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾವಿರಾರು ಕೋಟಿ ರೂಪಾಯಿ ವಿಜೇತ ನಂಬರ್ ಮಿಸ್ಟೇಕ್ ಆಗಲು ಹೇಗೆ ಸಾಧ್ಯ? ಇದೀಗ ದುಬಾರಿ ಮೊತ್ತ ನೀಡಲು ಕಂಪನಿ ಹಿಂದೇಟು ಹಾಕುತ್ತಿದೆ ಎಂದು ಜಾನ್ ಚೀಕ್ಸ್ ವಾದ ಮಂದಿಟ್ಟಿದ್ದಾರೆ. ಮುಂದಿನ ವಿಚಾರಣೆ ಫೆಬ್ರವರಿ 23ಕ್ಕೆ ನಡೆಯಲಿದೆ.

Follow Us:
Download App:
  • android
  • ios