ಇಸ್ರೇಲ್ - ಗಾಜಾ ಯುದ್ಧದ ನಡುವೆ ಪ್ಯಾಲೆಸ್ತೀನ್ ಅಧ್ಯಕ್ಷನ ಹತ್ಯೆಗೇ ನಡೀತು ಯತ್ನ? ವಿಡಿಯೋ ವೈರಲ್!
ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಭದ್ರತಾ ಸಿಬ್ಬಂದಿಯೊಬ್ಬರಿಗೆ ಗುಂಡೇಟಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಇದು ಮಹಮೂದ್ ಅಬ್ಬಾಸ್ ಅವರ ಹತ್ಯೆಗೆ ನಡೆದ ಯತ್ನ ಎಂದೇ ಶಂಕಿಸಲಾಗ್ತಿದೆ.
ಜೆರುಸಲೇಂ (ನವೆಂಬರ್ 8, 2023): ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾಗಿ ಈಗಾಗಲೇ ಒಂದು ತಿಂಗಳು ಕಳೆದಿದೆ. ಈ ನಡುವೆ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನೇ ಹತ್ಯೆ ಮಾಡಲು ಯತ್ನ ನಡೆದಿದೆ ಎಂದು ಹೇಳಲಾಗ್ತಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಗಾಜಾದಲ್ಲಿ ನಡೆಯುತ್ತಿರುವ ಮಧ್ಯೆಯೇ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಭದ್ರತಾ ಸಿಬ್ಬಂದಿಯೊಬ್ಬರಿಗೆ ಗುಂಡೇಟಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಇದು ಮಹಮೂದ್ ಅಬ್ಬಾಸ್ ಅವರ ಹತ್ಯೆಗೆ ನಡೆದ ಯತ್ನ ಎಂದೇ ಶಂಕಿಸಲಾಗ್ತಿದೆ.
ಇದನ್ನು ಓದಿ: ಗಾಜಾ ಮೇಲೆ ಪರಮಾಣು ಬಾಂಬ್ ಹಾಕೋದೂ ಒಂದು ಆಯ್ಕೆ ಎಂದ ಇಸ್ರೇಲ್ ಸಚಿವ: ಪ್ರಧಾನಿ ನೆತನ್ಯಾಹು ಹೇಳಿದ್ದೀಗೆ..
ಸನ್ಸ್ ಆಫ್ ಅಬು ಜಂದಾಲ್ ಎಂಬ ಗುಂಪು ಪ್ಯಾಲೆಸ್ತೀನ್ ನಾಯಕನಿಗೆ ಇಸ್ರೇಲ್ ವಿರುದ್ಧ ಜಾಗತಿಕ ಯುದ್ಧ ಘೋಷಿಸಲು 24 ಗಂಟೆಗಳ ಕಾಲಾವಕಾಶ ನೀಡಿದ ನಂತರ ಈ ಆಪಾದಿತ ಘಟನೆ ಸಂಭವಿಸಿದೆ. ವೆಸ್ಟ್ ಬ್ಯಾಂಕ್‌ನಲ್ಲಿ ನಡೆದ ಮಹಮೂದ್ ಅಬ್ಬಾಸ್ ಅವರ ಬೆಂಗಾವಲು ಪಡೆ ಮೇಲಿನ ದಾಳಿಯ ಹೊಣೆಯನ್ನು ಸನ್ಸ್ ಆಫ್ ಅಬು ಜಂದಾಲ್ ಹೊತ್ತುಕೊಂಡಿದೆ. ಆದರೆ, ಆಪಾದಿತ ಹತ್ಯೆ ಯತ್ನದ ಕುರಿತು ಪ್ಯಾಲೆಸ್ತೀನ್ ರಾಷ್ಟ್ರೀಯ ಪ್ರಾಧಿಕಾರ (PNA) ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಈ ಘಟನೆ ನಡೆದ ಹಿಂದಿನ ದಿನವಷ್ಟೇ ಆಕ್ರಮಿತ ವೆಸ್ಟ್ ಬ್ಯಾಂಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ಗಾಜಾದ ನಾಗರಿಕ ಜನಸಂಖ್ಯೆಗೆ ಸಹಾಯ ಮಾಡಲು ಜೋ ಬೈಡೆನ್ ಆಡಳಿತವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅಧ್ಯಕ್ಷ ಅಬ್ಬಾಸ್‌ಗೆ ಭರವಸೆ ನೀಡಿದ್ದರು. ಅಲ್ಲದೆ, ಗಾಜಾದ ಸಂಘರ್ಷದ ನಂತರದ ಭವಿಷ್ಯದಲ್ಲಿ ಪ್ಯಾಲೇಸ್ಟಿನಿಯನ್ನರು ಧ್ವನಿಯನ್ನು ಹೊಂದಿರಬೇಕು ಎಂದೂ ಹೇಳಿದ್ದರು. ಈ ಮಧ್ಯೆ, ಆಂಟೋನಿ ಬ್ಲಿಂಕೆನ್ ಭೇಟಿ ನೀಡಿದ ದಿನದಂದೇ ಇಸ್ರೇಲ್ ವಿಮಾನಗಳು ಗಾಜಾದ ಎರಡು ನಿರಾಶ್ರಿತರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದು, ಈ ವೇಳೆ ಕನಿಷ್ಠ 53 ಜನ ಮೃತಪಟ್ಟಿದ್ದಾರೆ.
ಇದನ್ನು ಓದಿ: ಇಸ್ರೇಲ್ ಭಾರಿ ದಾಳಿ ಮಾಡಿದ್ರೂ ಹಮಾಸ್ ಸುರಂಗ ಸೇಫ್: ಪೂರ್ಣ ಪ್ರಮಾಣದ ಭೂದಾಳಿ ಹಿಂದೇಟಿಗೂ ಇದೇ ಕಾರಣ!
ಗಾಜಾ ಪಟ್ಟಿಯನ್ನು ಅರ್ಧದಷ್ಟು ವಿಭಜಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ. ಈ ನಡುವೆ ರಕ್ತ ನಿಮ್ಮ ಕೈಯನ್ನೂ ಮೆತ್ತಿಕೊಂಡಿದೆ ಎಂದು ಇಸ್ರೇಲ್‌ನ ಸಂಘರ್ಷಕ್ಕೆ ಅಮೆರಿಕ ಬೆಂಬಲದ ವಿರುದ್ಧ ಪ್ಯಾಲೆಸ್ತೀನ್ ಜನರು ಆಪಾದಿಸಿದ್ದಾರೆ.
2007 ರಲ್ಲಿ ಗಾಜಾ ಪಟ್ಟಿಯಲ್ಲಿ ಹಮಾಸ್ ಚುನಾವಣೆಯಲ್ಲಿ ಗೆದ್ದ ನಂತರ, ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್ ಅರೆ ಸ್ವಾಯತ್ತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುವ ಪ್ಯಾಲೆಸ್ತೀನ್ ಪ್ರಾಧಿಕಾರವು ಅಲ್ಲಿ ಯಾವುದೇ ಪ್ರಭಾವ ಹೊಂದಿಲ್ಲ. ಆದರೆ, ಪ್ಯಾಲೆಸ್ತೀನ್ ಪ್ರಾಧಿಕಾರವು ವೆಸ್ಟ್ ಬ್ಯಾಂಕ್‌ನಲ್ಲಿ ಸ್ಥಿರತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಲ್ಲಿ ಇದೀಗ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ ಎಂದು ಆಂಟೋನಿ ಬ್ಲಿಂಕನ್ ಬಾಗ್ದಾದ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಗಾಜಾದಲ್ಲಿ ಇಸ್ರೇಲ್ ಸೇನೆಯಿಂದ ಭಾರಿ ಪ್ರಮಾಣದಲ್ಲಿ ಭೂದಾಳಿ, ವಾಯುದಾಳಿ: ಇಂಟರ್ನೆಟ್, ಮೊಬೈಲ್ ಸ್ತಬ್ಧ