ಯುಎಸ್ ಸೆಕ್ರಟರಿಗೆ ಮಕ್ಕಳ ಮೃತದೇಹ ಫೋಟೋ ಹಂಚಿದ ಇಸ್ರೇಲ್, ಹಮಾಸ್ ಭೀಕರತೆಯ ಸಾಕ್ಷಿ!
ಹಮಾಸ್ ಉಗ್ರರ ಭೀಕರ ದಾಳಿಯಿಂದ ನಲುಗಿರುವ ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡಿದೆ. ಅಮೆರಿಕ ಕಾರ್ಯದರ್ಶಿ ಇಸ್ರೇಲ್‌ಗೆ ಆಗಮಿಸಿದ್ದಾರೆ. ಈ ವೇಳೆ ಇಸ್ರೇಲ್ ಪ್ರಧಾನಿ ಹಮಾಸ್ ಉಗ್ರರು ನಡಸಿದ ಭೀಕರತೆ ಫೋಟೋವನ್ನು ಕಾರ್ಯದರ್ಶಿ ಜೊತೆ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದರೆ ಎಂತವರ ರಕ್ತ ಕುದಿಯುತ್ತೆ.
ಜೆರುಸಲೇಮ್(ಅ.12) ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ದಾಳಿ ನಡೆಯುತ್ತಿದೆ. ಹಮಾಸ್ ಉಗ್ರರ ಸಂಪೂರ್ಣ ನಾಶ ಮಾಡಲು ಪಣತೊಟ್ಟಿದೆ. ಇಸ್ರೇಲ್ ದಾಳಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಇಸ್ರೇಲ್ ಈ ಮಟ್ಟಿಗೆ ದಾಳಿ ನಡೆಸಲು ಹಲವು ಕಾರಣಗಳಿವೆ. ಇಸ್ರೇಲ್ ಬೆಂಬಲ ನೀಡಿದ ಅಮೆರಿಕ ಇಂದು ತನ್ನ ಕಾರ್ಯದರ್ಶಿ ಆ್ಯಂಟಿನಿ ಬ್ಲಿಂಕೆನ್‌ನ್ನು ಇಸ್ರೇಲ್‌ಗೆ ಕಳುಹಿಸಿಕೊಟ್ಟಿದೆ. ಇಸ್ರೇಲ್‌ಗೆ ಆಗಮಿಸಿದ ಆ್ಯಂಟಿನಿಗೆ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಕೆಲ ಫೋಟೋಗಳನ್ನು ಹಂಚಿದ್ದಾರೆ. ಈ ಫೋಟೋಗಳು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭೀಕರತೆಗೆ ಸಾಕ್ಷಿಯಾಗಿದೆ.
ಹಮಾಸ್ ಉಗ್ರರು ಭೀಕರ ದಾಳಿ ಕುರಿತ ಹಲವು ವಿಡಿಯೋಗಳು, ಫೋಟೋಗಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. 40 ಮಕ್ಕಳ ಶಿರಚ್ಚೇಧ, ಜೀವಂತ ಸುಟ್ಟ ಹಲವು ಘಟನೆಗಳು ವರದಿಯಾಗಿದೆ. ಈ ಭೀಕರತೆಯನ್ನು ಹೇಳುವ ಫೋಟೋಗಳನ್ನು ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅಮೆರಿಕ ಕಾರ್ಯದರ್ಸಿ ಆ್ಯಂಟೋನಿ ಜೊತೆ ಹಂಚಿಕೊಂಡಿದ್ದಾರೆ.
ಹಮಾಸ್ ಉಗ್ರರ ಬೆಂಬಲಿಸಿದ ಸಿರಿಯಾಗೆ ಸಂಕಷ್ಟ, 2 ವಿಮಾನ ನಿಲ್ದಾಣ ಮೇಲೆ ದಾಳಿ ನಡೆಸಿದ ಇಸ್ರೇಲ್!
ಜೀವಂತ ಸುಟ್ಟು ಕರಕಲಾಗಿರುವ ಪುಟ್ಟ ಕಂದಮ್ಮಗಳ ಫೋಟೋ, ಮಲಗಿರುವಲ್ಲೇ ರುಂಡ ಕತ್ತರಿಸಿದ ಹಾಲುಗೆನ್ನೇಯ ಕಂದಮ್ಮಗಳ ಫೋಟೋಗಳು ಇದಾಗಿದೆ. ಹಮಾಸ್ ಉಗ್ರರು ನಡೆಸಿದ ಭೀಕರತೆಗೆ ಈ ಫೋಟೋಗಳೇ ಸಾಕ್ಷಿ ಹೇಳುತ್ತಿದೆ. ನಾಲ್ಕು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ರೀತಿಯ ಸಾವಿರ ಕುಟುಂಬದ ಫೋಟೋಗಳಿವೆ. ನೂರಾರು ಮಕ್ಕಳ ಹೃದವಿದ್ರಾವಕ ಘಟನೆಗಳಿವೆ.
ಇದೇ ಕಾರಣಕ್ಕೆ ಹಮಾಸ್ ಉಗ್ರರನ್ನು ಸಂಪೂರ್ಣ ನಾಶ ಮಾಡಲು ಇಸ್ರೇಲ್ ನಿರ್ಧರಿಸಿದೆ. ಹಲವು ರಾಷ್ಟ್ರಗಳ ವಿರೋಧದ ನಡುವೆಯೂ ಇಸ್ರೇಲ್ ತನ್ನ ಯುದ್ಧ ಮುಂದುವರಿಸಿದೆ. ಈ ಫೋಟೋಗಳು ನೋಡಿದರೆ ಕರುಳು ಹಿಂಡುವ ಅನುಭವವಾಗದೇ ಇರದು. ಈ ಫೋಟೋಗಳ ಭೀಕರತೆಯಿಂದ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಚಿತ್ರಗಳನ್ನು ಪ್ರಕಟಿಸುತ್ತಿಲ್ಲ.
'ಇಸ್ರೇಲ್‌ನ ಹಿಂದೆ ನಿಂತಿರೋದು ಅಮೆರಿಕ' ಇಸ್ರೇಲ್ ಮೇಲೆ ದಾಳಿ ಮಾಡುವ ರಾಷ್ಟ್ರಗಳಿಗೆ ಯುಎಸ್ ಎಚ್ಚರಿಕೆ!
ಇಸ್ರೇಲ್‌ನ ಕ್ಷಿಪಣಿಗಳು ಗಾಜಾಪಟ್ಟಿಯಲ್ಲಿರುವ ಇಸ್ಲಾಮಿಕ್ ವಿವಿ ಮೇಲೆ ದಾಳಿ ನಡೆಸಿ ನೆಲಸಮಗೊಳಿಸಿವೆ. ಈ ವಿಶ್ವವಿದ್ಯಾಲಯವು ಹಮಾಸ್ ಉಗ್ರರಿಗೆ ತರಬೇತಿ ಕ್ಯಾಂಪ್ ರೀತಿ ಬಳಕೆಯಾಗುತ್ತಿತ್ತು. ಜೊತೆಗೆ ಅಲ್ಲಿ ಶಸ್ತ್ರಾಸ್ತ್ರಗಳನ್ನು ಕೂಡ ತಯಾರಿಸಲಾಗುತ್ತಿತ್ತು. ಭಯೋತ್ಪಾದನೆಗೆ ಹಣ ಸಂಗ್ರಹಿಸಲು ಅಲ್ಲಿ ಹಮಾಸ್ ಉಗ್ರರು ವಿಚಾರ ಸಂಕಿರಣಗಳನ್ನು ನಡೆಸುತ್ತಿದ್ದರು. ಅದನ್ನು ನಾಶಪಡಿಸುವ ಮೂಲಕ ಹಮಾಸ್‌ಗೆ ಇಸ್ರೇಲ್ ದೊಡ್ಡ ಆಘಾತ ನೀಡಿದೆ.