ಹಮಾಸ್ ಉಗ್ರರ ಬೆಂಬಲಿಸಿದ ಸಿರಿಯಾಗೆ ಸಂಕಷ್ಟ, 2 ವಿಮಾನ ನಿಲ್ದಾಣ ಮೇಲೆ ದಾಳಿ ನಡೆಸಿದ ಇಸ್ರೇಲ್!
ಹಮಾಸ್ ಉಗ್ರರ ಮೇಲೆ ಸತತ ದಾಳಿ ಮುಂದುವರಿಸಿರುವ ಇಸ್ರೇಲ್ ಇದೀಗ ಹಮಾಸ್‌ಗೆ ನೆರವು ನೀಡಿದ ಸಿರಿಯಾ ಟಾರ್ಗೆಟ್ ಮಾಡಿದೆ. ಸಿರಿಯಾದ 2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ. ಪರಿಣಾಮ ದಮಾಸ್‌ಕಸ್ ಹಾಗೂ ಆ್ಯಲೆಪೊ ವಿಮಾನ ನಿಲ್ದಾಣ ಸೇವೆ ಸ್ಥಗಿತಗೊಂಡಿದೆ.
ಜೆರುಸಲೇಮ್(ಅ.12) ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಪ್ರತಿದಾಳಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಹಮಾಸ್ ಉಗ್ರರ ಗಾಜಾಪಟ್ಟಿ ಪ್ರದೇಶವನ್ನು ಸ್ಮಶಾನ ಮಾಡಲು ಹೊರಟಿರುವ ಇಸ್ರೇಲ್‌ಗೆ ಸುತ್ತಲಿನ ಅರಬ್ ರಾಷ್ಟ್ರಗಳು ಎಚ್ಚರಿಕ ನೀಡುತ್ತಲೇ ಇದೆ. ಕೆಲ ರಾಷ್ಟ್ರಗಳು ಹಮಾಸ್ ಉಗ್ರರಿಗೆ ರಹಸ್ಯ ನೆರವು ನೀಡುತ್ತಿದೆ. ಹೀಗೆ ನೆರವು ನೀಡಿದ ಸಿರಿಯಾದ ಮೇಲೂ ಇಸ್ರೇಲ್ ದಾಳಿ ನಡೆಸಿದೆ. ಸಿರಿಯಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ದಮಾಸ್‌ಕಸ್ ಹಾಗೂ ಆ್ಯಲೆಪೋ ಮೇಲೆ ಏರ್‌ಸ್ಟ್ರೈಕ್ ಮಾಡಿದೆ ಎಂದು ಸಿರಿಯಾದ ಸ್ಛಳೀಯ ಮಾಧ್ಯಮ ಸನಾ ಹಾಗೂ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದೆ.
ಸಿರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ಬೆನ್ನಲ್ಲೇ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದೆ. ದಮಾಸ್‌ಕಸ್ ಹಾಗೂ ಆ್ಯಲೆಪೊ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ. ಸಿರಿಯಾ ವಿದೇಶಾಂಗ ಸಚಿವರನ್ನು ಹೊತ್ತು ದಮಾಸ್‌ಕಸ್ ವಿಮಾನ ನಿಲ್ದಾಣದತ್ತ ಆಗಮಿಸುತ್ತಿದ್ದ ಏರ್‌ಬಸ್ ಎ340 ವಿಮಾನಕ್ಕೆ ತುರ್ತು ಸಂದೇಶ ಕಳುಹಿಸಿ ಬೇರೆ ನಿಲ್ದಾಣದಲ್ಲಿ ಲ್ಯಾಂಡ್ ಆಗುವಂತೆ ಮಾಡಲಾಗಿದೆ.
ಹಮಾಸ್ ಉಗ್ರರ ಮೇಲೆ ಸೇಡು ತೀರಿಸಿದ ಎಲಾನ್ ಮಸ್ಕ್, ಭಯೋತ್ವಾದಕರ X ಖಾತೆ ಡಿಲೀಟ್!
ಹಮಾಸ್ ಉಗ್ರರ ಮೇಲೆ ಇಸ್ರೇಲ್ ಪ್ರತಿ ದಾಳಿ ಆರಂಭಿಸಿದ ಬಳಿಕ ಸಿರಿಯಾದಿಂದ ಕೆಲ ರಾಕೆಟ್‌ಗಳು ಇಸ್ರೇಲ್‌ನಲ್ಲ ತೂರಿಬಂದಿತ್ತು. ಹಮಾಸ್ ಉಗ್ರರ ಬೆಂಬಲಿಸಿ ಸಿರಿಯಾ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಲೆಬೆನಾನ್ ಕೂಡ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಇಸ್ರೇಲ್ ಹೆಲಿಕಾಪ್ಟರ್ ಹೊಡೆದುರುಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸಿರಿಯಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯನ್ನು ಧ್ವಂಸಗೊಳಿಸಿದೆ.
ಹಮಾಸ್ ಉಗ್ರ ಸಂಘಟನೆ ಹಾಗೂ ಇಸ್ರೇಲ್ ನಡುವಿನ ಕದನದಲ್ಲಿ ಬುಧವಾರ ಹಮಾಸ್ ಮುಖ್ಯಸ್ಥ ಮೊಹಮ್ಮದ್ ದೈಫ್‌ನ ತಂದೆ ಮನೆಗೆ ಇಸ್ರೇಲ್ ದಾಳಿ ನಡೆಸಿದೆ. ದಾಳಿಯಲ್ಲಿ ದೈಫ್ ತಂದೆ, ಮಕ್ಕಳು, ಸೋದರ ಸೇರಿ ಕುಟುಂಬಸ್ಥರು ಬಲಿಯಾಗಿದ್ದಾರೆ ಎನ್ನಲಾಗಿದೆ. ಯುದ್ಧದ ಐದನೇ ದಿನದ ದಾಳಿಯಲ್ಲಿ ಇಸ್ರೇಲ್ ಗಾಜಾ ಪಟ್ಟಿಯ 200 ಕಡೆ ಗುರಿ ಇಟ್ಟು ದಾಳಿ ನಡೆಸಿದೆ. ಹೀಗಾಗಿ ಇಲ್ಲಿನ ಖಾನ್ ಯುನಿಸ್‌ನಲ್ಲಿನ ದೈಫ್ ಮನೆಯವರು ಸಾವಿಗೀಡಾಗಿದ್ದಾರೆ. ಮೊಹಮ್ಮದ್ ದೈಫ್‌ನನ್ನು ಹತ್ಯೆ ಮಾಡಲೆಂದು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಹಲವು ಬಾರಿ ಯತ್ನಿಸಿದ್ದರು. ಕೂದಲೆಳೆಯಲ್ಲಿ ತಪ್ಪಿಸಿಕೊಂಡಿದ್ದ. ಆದರೆ ಈ ಬಾರಿ ಅವರ ಮನೆಯವರು ಬಲಿಯಾಗಿದ್ದಾರೆ.
ಇಸ್ರೇಲ್ ಮೊದಲ ಗುರಿ; ಮುಂದೆ ಸಂಪೂರ್ಣ ಭೂಮಿಯಲ್ಲೇ ನಮ್ಮ ಕಾನೂನು ಇರುತ್ತೆ: ಹಮಾಸ್ ಕಮಾಂಡರ್ ಎಚ್ಚರಿಕೆ!