ಇಸ್ರೇಲ್‌ಗೆ ಈಗಿರುವ ಆಪತ್ತನ್ನು ಬಂಡವಾಳವನ್ನಾಗಿ ಮಾಡಿಕೊಂಡು ಈ ರಾಷ್ಟ್ರದ ಮೇಲೆ ದಾಳಿ ಮಾಡುವ ಕುರಿತು ಯಾರಾದ್ರೂ ಯೋಚನೆ ಮಾಡಿದ್ರೆ ಅದನ್ನೀಗಲೇ ಬಿಟ್ಟುಬಿಡಿ. ಯಾಕೆಂದರೆ ಇಸ್ರೇಲ್‌ನ ಹಿಂದೆ ನಿಂತಿರೋದು ಅಮೆರಿಕ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್‌ ಹೇಳಿದ್ದಾರೆ.

ನವದೆಹಲಿ (ಅ.12): ಯುದ್ಧದ ನಡುವೆ ಇರುವ ಇಸ್ರೇಲ್‌ಗೆ ಅಮೆರಿಕ ದೊಡ್ಡ ಮಟ್ಟದ ಬೆಂಬಲ ನೀಡಿದೆ. ಗುರುವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್‌ ಇಸ್ರೇಲ್‌ಗೆ ಭೇಟಿ ನೀಡಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದರು. ಇಸ್ರೇಲ್‌ಗೆ ಆಗಿರುವ ಹಾನಿ ಹಾಗೂ ದೇಶದ ಪರಿಸ್ಥಿತಿ, ಮುಂದಾಗಬೇಕಾದ ಕೆಲಸಗಳ ಬಗ್ಗೆ ಪರಾಮರ್ಶೆ ನಡೆಸಿದರು. ಯುದ್ಧದ ನಡುವೆ ಇಸ್ರೇಲ್‌ ಇದೆ. ಈ ಹಂತದಲ್ಲಿ ಇಸ್ರೇಲ್‌ ಮೇಲೆ ದಾಳಿ ಮಾಡುವ ಹುನ್ನಾರದಲ್ಲಿರುವ ಅಕ್ಕಪಕ್ಕದ ಮುಸ್ಲಿಂ ರಾಷ್ಟ್ರಗಳಿಗೆ ಅಂಟೋನಿ ಬ್ಲಿಂಕೆನ್‌ ನೇರವಾದ ಎಚ್ಚರಿಕೆ ನೀಡಿದ್ದಾರೆ. ಹಾಗೇನಾದರೂ ಇಸ್ರೇಲ್‌ ಮೇಲೆ ದಾಳಿ ಮಾಡುವ ಯೋಚನೆ ಇದ್ದಲ್ಲಿ ಅದನ್ನು ತಕ್ಷಣವೇ ಬಿಟ್ಟುಬಿಡಿ. ಯಾಕೆಂದರೆ, ಇಸ್ರೇಲ್‌ನ ಹಿಂದೆ ಇರೋದು ಅಮೆರಿಕ ಎಂದು ಹೇಳುವ ಮೂಲಕ ಅಕ್ಕಪಕ್ಕದ ರಾಷ್ಟ್ರಗಳಾದ ಲೆಬನಾನ್‌, ಜೋರ್ಡನ್‌, ಸಿರಿಯಾ ಹಾಗೂ ಇರಾನ್‌ಗೆ ಸ್ಪಷ್ಟ ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ. ಮಾತುಕತೆ ನಡೆಸಿದ ಬಳಿಕ, ಬ್ಲಿಂಕೆನ್‌ ಹಾಗೂ ನೆತನ್ಯಾಹು ಇಬ್ಬರೂ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ನಾವು ಇಸ್ರೇಲ್‌ಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದೇವೆ. ಅವರಿಗೆ ಮದ್ದುಗುಂಡುಗಳನ್ನು ಪೂರೈಸಲಿದ್ದೇವೆ. ಇಸ್ರೇಲ್‌ನ ಐರನ್‌ಡೋಮ್‌ಅನ್ನು ಮರುಪೂರ್ಣಗೊಳಿಸುವ ಸಲುವಾಗಿ ಇಂಟರ್‌ಸೆಪ್ಟರ್‌ಗಳು ಹಾಗೂ ಇತರ ರಕ್ಷಣಾ ಸಾಮಗ್ರಿಗಳನ್ನು ನೀಡಲಿದ್ದೇವೆ. ಈಗಾಗಲೇ ಅಮರಿಕ ಸೇನೆಯ ಬೆಂಬಲದ ಮೊದಲ ಯುದ್ಧಸಾಮಗ್ರಿಗಳು ಈಗಾಗಲೇ ಇಸ್ರೇಲ್‌ಗೆ ತಲುಪಿವೆ. ಇನ್ನೂ ಕೆಲವು ಈಗಾಗಲೇ ಮಾರ್ಗದಲ್ಲಿದೆ. ಇಸ್ರೇಲ್‌ನ ರಕ್ಷಣಾ ಅಗತ್ಯಗಳು ಹೆಚ್ಚಾಗುತ್ತವೆ. ಈ ಬಗ್ಗೆ ಯುಎಸ್‌ ಕಾಂಗ್ರೆಸ್‌ನ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತದೆ. ಅಧ್ಯಕ್ಷ ಜೋ ಬೈಡೆನ್‌ ಬುಧವಾರ ನೀಡಿದ ಅತ್ಯಂತ ಸ್ಪಷ್ಟ ಎಚ್ಚರಿಕೆಯನ್ನುಇಲ್ಲಿ ಮತ್ತೆ ಹೇಳಲು ಬಯಸುತ್ತೇನೆ. ಇಸ್ರೇಲ್‌ನ ಈ ಸದ್ಯದ ಪರಿಸ್ಥಿತಿಯನ್ನು ನೋಡಿಕೊಂಡು ಇಸ್ರೇಲ್‌ ಮೇಲೆ ದಾಳಿ ಮಾಡುವಂಥ ಪ್ರಯತ್ನವನ್ನು ಯಾರಾದರೂ ಮಾಡುವ ಯೋಚನೆಯಲ್ಲಿದ್ದರೆ, ಅದನ್ನು ಮಾಡಬೇಡಿ. ಏಕೆಂದರೆ, ಇಸ್ರೇಲ್‌ನ ಹಿಂದೆ ಇರೋದು ಅಮೆರಿಕ ಎಂದು ತಿಳಿಸಿದ್ದಾರೆ.



ಅಮೆರಿಕದಿಂದ ಇಲ್ಲಿಗೆ ಬಂದು ನಾನು ಇಸ್ರೇಲ್‌ಗೆ ನೀಡಲಿರುವ ಸಂದೇಶ ಒಂದೇ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಮರ್ಥರಾಗಿರಬಹುದು. ಆದರೆ, ಎಲ್ಲಿಯವರೆಗೆ ಅಮೆರಿಕ ಇರುತ್ತದೆಯೋ ಅಲ್ಲಿಯ ತನಕ ನೀವು ಆ ಬಗ್ಗೆ ಚಿಂತೆ ಪಡಬೇಕಂತಿಲ್ಲ. ನಿಮ್ಮ ಜೊತೆ ಇರಲು ನಾವು ಸದಾ ಸಿದ್ದ ಎಂದು ಬ್ಲಿಂಕೆನ್‌ ಹೇಳಿದ್ದಾರೆ.ಹಮಾಸ್ ಪ್ಯಾಲೇಸ್ಟಿನಿಯನ್ ಜನರನ್ನು ಅಥವಾ ಅವರ ಕಾನೂನುಬದ್ಧ ಆಕಾಂಕ್ಷೆಗಳನ್ನು ಪ್ರತಿನಿಧಿಸುವುದಿಲ್ಲ ಎಂದು ನಮಗೆ ತಿಳಿದಿದೆ. ನಾಗರಿಕರ ಯೋಗಕ್ಷೇಮವನ್ನು ಉತ್ತೇಜಿಸುವ ಬದಲು ಹಮಾಸ್ ಅಮಾಯಕರ ಹತ್ಯೆ ಮಾಡುವುದರಲ್ಲಿ ನಿರತವಾಗಿದೆ ಎಂದು ಹೇಳಿದ್ದಾರೆ.

ಹಮಾಸ್ ನಾಗರಿಕತೆಯ ಶತ್ರು ಎಂದು ತೋರಿಸಿದೆ. ಸಂಗೀತೋತ್ಸವದಲ್ಲಿ ಅಮಾಯಕರ ಕಗ್ಗೊಲೆ, ಸಂಪೂರ್ಣ ಕುಟುಂಬವನ್ನೇ ದಯನೀಯವಾಗಿ ಹತ್ಯೆ ಮಾಡಿರುವುದು, ಮಕ್ಕಳ ಮುಂದೆಯೇ ಅವರ ಪೋಷಕರ ಹತ್ಯೆ, ಪೋಷಕರ ಮುಂದೆ ಮಕ್ಕಳ ಹತ್ಯೆ, ಜನರನ್ನು ಜೀವಂತವಾಗಿ ಸುಡುವುದು, ಶಿಶಿಗಳ ಶಿರಚ್ಛೇದ, ಅಪಹರಣ, ಇಂಥ ಭೀಬತ್ಸ ಘಟನೆಯ ವೈಭವೀಕರಣ ಮಾಡಿದ್ದಾರೆ. ಅಮೆರಿದಕ ಅಧ್ಯಕ್ಷ ಜೋ ಬೈಡೆನ್‌ ಇದನ್ನು ಸಂಪೂರ್ಣವಾಗಿ ದುಷ್ಟ ಕೃತ್ಯ ಎಂದು ಕರೆದಿದ್ದು ಸರಿಯಾಗಿದೆ ಎಂದು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Watch: ಹಮಾಸ್‌ನಿಂದ ಶಿಶುಗಳ ಶಿರಚ್ಛೇದ ನಿಜ, ಇಸ್ರೇಲ್‌ ಸೇನೆಯ ವಕ್ತಾರನ ಅಧಿಕೃತ ಹೇಳಿಕೆ!

ಹಮಾಸ್‌ ಎನ್ನುವುದು ಐಸಿಸ್‌, ಐಸಿಸ್‌ಅನ್ನು ಧ್ವಂಸ ಮಾಡಿದಂತೆ ಹಮಾಸ್‌ಅನ್ನೂ ಪುಡಿಮಾಡಲಾಗುತ್ತದೆ. ನನ್ನ ಜನರನ್ನು ಹಮಾಸ್‌ ಹೇಗೆ ನಡೆಸಿಕೊಂಡಿದೆಯೋ ಅದೇ ರೀತಿಯಲ್ಲಿ ನಾವು ಹಮಾಸ್‌ನ ಉಗ್ರರರನ್ನು ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

'ಒತ್ತೆಯಾಳಾಗಿ ನರಳೋದಕ್ಕಿಂತ ಸತ್ತಿದ್ದೆ ಒಳ್ಳೆಯದಾಯ್ತ..' 8 ವರ್ಷದ ಮಗಳ ಸಾವನ್ನು ಸ್ವಾಗತಿಸಿದ ಇಸ್ರೇಲ್‌ ಪ್ರಜೆ!

Scroll to load tweet…