ಅತಿಕ್ರಮಣದ ಆರೋಪ ಆಧಾರ ರಹಿತ: ಮೋದಿ ಭೇಟಿಗೆ ಚೀನಾ ಆಕ್ಷೇಪ!

ಅತಿಕ್ರಮಣದ ಆರೋಪ ಆಧಾರ ರಹಿತ: ಚೀನಾ| ಮೋದಿ ಲಡಾಖ್‌ ಭೇಟಿಗೆ ಚೀನಾ ಆಕ್ಷೇಪ| ಆಕ್ರೋಶದ ಬದಲು ತಣ್ಣನೆಯ ಪ್ರತಿಕ್ರಿಯೆ

Groundless To View As Expansionist China Responds To PM Modi Message

ಬೀಜಿಂಗ್(ಜು.04): ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್‌ಗೆ ಅಚ್ಚರಿಯ ಭೇಟಿ ನೀಡಿ ಯೋಧರ ಜತೆ ಸಂವಾದ ನಡೆಸಿದ್ದಕ್ಕೆ ಚೀನಾ ಆಕ್ಷೇಪಿಸಿದೆ. ಅಲ್ಲದೆ ಚೀನಾ ಅತಿಕ್ರಮಣ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಪರೋಕ್ಷ ಆರೋಪವನ್ನು, ಆಧಾರ ರಹಿತ ಎಂದು ಚೀನಾ ವಾದಿಸಿದೆ.

ಚೀನಾಕ್ಕೆ ಪೆಟ್ಟಿನ ಮೇಲೆ ಪೆಟ್ಟು!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ವಕ್ತಾರ ಝಾವೋ ಲಿಜಿಯಾನ್‌, ‘ಭಾರತ ಹಾಗೂ ಚೀನಾ ಗಡಿಯಲ್ಲಿನ ತ್ವೇಷ ಸ್ಥಿತಿ ತಣಿಸಲು ರಾಜತಾಂತ್ರಿಕ ಹಾಗೂ ಸೇನಾ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಯಾವುದೇ ಪಕ್ಷಗಳಾಗಲಿ (ಭಾರತ-ಚೀನಾ) ಈ ಹಂತದಲ್ಲಿ ಪರಿಸ್ಥಿತಿ ತ್ವೇಷಗೊಳಿಸಲು ಯತ್ನಿಸಬಾರದು. ದ್ವಿಪಕ್ಷೀಯ ಬಾಂಧವ್ಯಕ್ಕೆ ಅಡ್ಡಗೋಡೆ ಇಟ್ಟರೆ, ಭಾರತದ ಹಿತಾಸಕಿಗಳಿಗೇ ಹೆಚ್ಚಿನ ಹಿನ್ನಡೆ ಆಗಲಿದೆ. ಉಭಯ ದೇಶಗಳೂ ಚರ್ಚಿಸಿ ಗಡಿಯಲ್ಲಿ ಶಾಂತಿ ಸ್ಥಾಪಿಸಲು ಯತ್ನಿಸಬೇಕು ’ ಎಂದಿದ್ದಾರೆ.

ಚೀನಾ ಕಂಪನಿಗಳಿಗೆ ಭಾರತದಿಂದ ಎಲೆಕ್ಟ್ರಿಕ್‌ ಶಾಕ್‌!

ಮತ್ತೊಂದೆಡೆ ಭಾರತದಲ್ಲಿನ ಚೀನಾ ರಾಯಭಾರಿ ಜಿ ರೋಂಗ್‌ ಪ್ರತಿಕ್ರಿಯೆ ನೀಡಿ ‘ಚೀನಾ ತಾನು 14 ದೇಶಗಳೊಂದಿಗೆ ಹೊಂದಿರುವ ಗಡಿ ಪೈಕಿ 12 ದೇಶಗಳ ಜೊತೆ ಶಾಂತಿಯುತ ಮಾತುಕತೆ ಮೂಲಕ ಗಡಿ ರೇಖೆ ಗುರುತಿಸಿಕೊಂಡಿದೆ. ಹೀಗಾಗಿ ಚೀನಾವನ್ನು ಅತಿಕ್ರಮಣಕಾರಿ ಎನ್ನುವುದು ಆಧಾರರಹಿತ.

Latest Videos
Follow Us:
Download App:
  • android
  • ios