ನವದೆಹಲಿ(ಜು.04): ಗಲ್ವಾನ್‌ನಲ್ಲಿ ಸಂಘರ್ಷ ನಡೆಸಿದ ಬಳಿಕ ಚೀನಾಕ್ಕೆ ಭಾರತ ಸರಣಿ ಪೆಟ್ಟುಗಳನ್ನು ನೀಡುತ್ತಲೇ ಬಂದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ಗಡಿಗೆ ಭೇಟಿ ನೀಡುವುದರೊಂದಿಗೆ ಭಾರತ ಯಾವ ಬೆದರಿಕೆಗೂ ಮಣಿಯುವುದಿಲ್ಲ ಎಂಬ ಸ್ಪಷ್ಟಸಂದೇಶ ರವಾನಿಸಿದ್ದಾರೆ. ಗಲ್ವಾನ್‌ನಲ್ಲಿ ಕಾಲು ಕೆರೆದು ಜಗಳಕ್ಕೆ ಬಂದ ಚೀನಾ ಅನುಭವಿಸಿದ ಪ್ರಮುಖ ಮುಖಭಂಗ, ನಷ್ಟಗಳ ಪಟ್ಟಿಇಲ್ಲಿದೆ.

ಚೀನಾ ಕಂಪನಿಗಳಿಗೆ ಭಾರತದಿಂದ ಎಲೆಕ್ಟ್ರಿಕ್‌ ಶಾಕ್‌!

ರಾಜತಾಂತ್ರಿಕ ಪೆಟ್ಟು

1. ರಷ್ಯಾ ಪ್ರವಾಸ ವೇಳೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಚೀನಾ ರಕ್ಷಣಾ ಸಚಿವರನ್ನು ಭೇಟಿಯಾಗದೆ ಆ ದೇಶಕ್ಕೆ ಮುಖಭಂಗ ಮಾಡಿದ್ದರು

2. ಹಾಂಕಾಂಗ್‌ನಲ್ಲಿ ಚೀನಾ ದಬ್ಬಾಳಿಕೆ ಕುರಿತು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸುವ ಮೂಲಕ ರಾಜತಾಂತ್ರಿಕ ದಾಳಿ

3. ಚೀನಾ ಆ್ಯಪ್‌ ವೀಬೋದಿಂದ ಪ್ರಧಾನಿ ನರೇಂದ್ರ ಮೋದಿ ನಿರ್ಗಮಿಸಿದರು

11 ಸಾವಿರ ಅಡಿ ಎತ್ತರದಲ್ಲಿರುವ ನೀಮು: ಕಾರ್ಗಿಲ್‌ ಯುದ್ಧ ವೇಳೆ ಪ್ರಮುಖ ಪಾತ್ರ ವಹಿಸಿದ್ದ ತಾಣ!

ಆರ್ಥಿಕ ಪೆಟ್ಟು

1. ಟಿಕ್‌ಟಾಕ್‌, ಶೇರ್‌ಇಟ್‌ ಸೇರಿ ಚೀನಾ ಮೂಲದ 59 ಮೊಬೈಲ್‌ ಆ್ಯಪ್‌ಗಳಿಗೆ ನಿಷೇಧ

2. ಮಹಾರಾಷ್ಟ್ರ ಸರ್ಕಾರ 5000 ಕೋಟಿ ರು. ವೆಚ್ಚದ ಹೂಡಿಕೆ ಪ್ರಸ್ತಾಪಗಳಿಗೇ ತಡೆಯೊಡ್ಡಿತು

3. ಬಿಎಸ್‌ಎನ್‌ಎಲ್‌, ರೈಲ್ವೆ, ಹೆದ್ದಾರಿ, ಕೈಗಾರಿಕಾ ಇಲಾಖೆಗಳಿಂದ ಬಾಯ್ಕಾಟ್‌ ಚೀನಾ ನೀತಿ

4. ದೇಶದಲ್ಲಿ ಚೀನಾ ವಸ್ತುಗಳ ವಿರುದ್ಧ ಬೃಹತ್‌ ಅಭಿಯಾನವೇ ನಡೆದು, ವ್ಯಾಪಾರಿಗಳು ಚೀನಿ ಉತ್ಪನ್ನ ಬಹಿಷ್ಕರಿಸುವ ನಿರ್ಧಾರ ಕೈಗೊಂಡರು

ಮೋದಿ ರಹಸ್ಯ ಭೇಟಿ ಸೂತ್ರದಾರ ದೋವಲ್‌!

ರಕ್ಷಣಾ ಪೆಟ್ಟು

1. ಲಡಾಖ್‌ನ ವಿವಾದಿತ ಪ್ರದೇಶಗಳಿಗೆ ಚೀನಾಗೆ ಸಮನಾಗಿ ಸೇನೆ ನಿಯೋಜನೆ

2. ಮುಂಚೂಣಿ ನೆಲೆಗೆ ಸ್ವತಃ ಪ್ರಧಾನಿ ಮೋದಿ ಭೇಟಿ ಮೂಲಕ ಚೀನಾಕ್ಕೆ ಸಂದೇಶ