ಆಹಾರ ಬೇಡುತ್ತಾ ಬಂದ ಬೆಕ್ಕಿಗೆ ಹಿಂಸೆ ಆಹಾರದ ಆಮಿಷ ನೀಡಿ ಸಮುದ್ರಕ್ಕೆ ತಳ್ಳಿದ ಯುವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  

ಆಹಾರ ಕೇಳುತ್ತಾ ತನ್ನ ಬಳಿ ಬಂದ ಬೆಕ್ಕೊಂದನ್ನು ಯುವಕನೋರ್ವ ಆಹಾರ ನೀಡುವ ಆಸೆ ನೀಡಿ ಹತ್ತಿರ ಕರೆದು ನಂತರ ಒದ್ದು ಸಮುದ್ರಕ್ಕೆ ಹಾಕಿದ ಘಟನೆ ಗ್ರೀಸ್‌ನಲ್ಲಿ ನಡೆದಿದೆ. ಈತ ಬೆಕ್ಕನ್ನು ಸಮುದ್ರಕ್ಕೆ ತಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬ ಸಮುದ್ರದಲ್ಲೇ ಇರುವ ಬೋಟ್‌ ಹೌಸ್‌ನಲ್ಲಿರುವ ಹೊಟೇಲೊಂದರಲ್ಲಿ ಆಹಾರ ಸೇವನೆ ಮಾಡುತ್ತಿರುತ್ತಾನೆ. ಈ ವೇಳೆ ಎರಡು ಬೆಕ್ಕು ಆತನ ಕಾಲ ಬುಡದಲ್ಲಿ ಬಂದು ಆಹಾರಕ್ಕಾಗಿ ಅತಿತ್ತ ಓಡಾಡುತ್ತವೆ. ಇದನ್ನು ನೋಡಿದ ಆತ ಆಹಾರದ ಆಮಿಷ ನೀಡಿ ಬೆಕ್ಕನ್ನು ಸಮೀಪಕ್ಕೆ ಕರೆಯುತ್ತಾನೆ. ಬೆಕ್ಕು ಸಮುದ್ರದಂಚಿನಲ್ಲಿ ನಿಲ್ಲುತ್ತಿದ್ದಂತೆ ಆತ ಕಾಲಿನಲ್ಲಿ ಒದ್ದು ಬೆಕ್ಕನ್ನು ಸಮುದ್ರಕ್ಕೆ ತಳ್ಳುತ್ತಾನೆ. ಅಲ್ಲದೇ ಇನ್ನೊಂದು ಬೆಕ್ಕಿಗೂ ಅದೇ ರೀತಿ ಮಾಡಲು ಆತ ಯತ್ನಿಸುತ್ತಿದ್ದು ಇದನ್ನು ನೋಡಿ ಆತನ ಗೆಳೆಯರು ನಗುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳುತ್ತಿದೆ. 

ಗ್ರೀಕ್ ವರದಿಗಾರನ ಪ್ರಕಾರ, ಈ ವೀಡಿಯೊವನ್ನು ಗ್ರೀಸ್‌ನ (Greece) ಎವಿಯಾ ದ್ವೀಪದಲ್ಲಿರುವ (Evia island) ರೆಸ್ಟೋರೆಂಟ್‌ನಲ್ಲಿ (restaurant) ಸೆರೆ ಹಿಡಿಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈತನ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಜನ ಆಗ್ರಹಿಸಿದ್ದಾರೆ. ಪ್ರಾಣಿಗಳನ್ನು ನಿಂದಿಸುವ ಜನರಿಗೆ ಭಾರಿ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸುವ ಮೂಲಕ ಇತರರಿಗೆ ಇದು ಎಚ್ಚರಿಕೆ ಆಗಬೇಕು ಆಗ ಮಾತ್ರ ಜನ ಪಾಠ ಕಲಿಯುತ್ತಾರೆ ಎಂದು ವಿಡಿಯೋ ನೋಡಿದ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಗ್ರೀಕ್ ರಿಪೋರ್ಟರ್ ಪ್ರಕಾರ, ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿಗಳ ವಿರುದ್ಧ ಕ್ರೌರ್ಯ ತೋರಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಜನ ಆಗ್ರಹಿಸಿದ್ದು, ಇದಾದ ಬಳಿಕ ಈ ದುಷ್ಟನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಗೆ ಒಂದು ದಶಕದ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಆದಾಗ್ಯೂ, ಆತ ವಿಡಿಯೋವನ್ನು ಕೇವಲ ತಮಾಷೆ ಎಂದು ಹೇಳಿದ್ದಾನೆ. ಬೆಕ್ಕಿನ ಮರಿಯನ್ನು ಕೆಳಗೆ ಒದೆಯಲಾಯಿತು ಮತ್ತು ಅದು ಬಿದ್ದ ಜಾಗದಲ್ಲಿ ಬೆಣಚು ಕಲ್ಲುಗಳಿತ್ತು ನೀರಿರಲಿಲ್ಲ ಎಂದು ಆತ ಹೇಳಿದ್ದಾನೆ. ಅಲ್ಲದೇ ಈತ ಪ್ರಾಣಿಗಳನ್ನು ಪ್ರೀತಿಸುವುದಾಗಿ ಹೇಳಿಕೊಂಡಿದ್ದು, ಹಲವು ಬೀದಿ ಪ್ರಾಣಿಗಳನ್ನು ನೋಡಿಕೊಳ್ಳುತ್ತಿರುವುದಾಗಿಯೂ ಆತ ಹೇಳಿಕೊಂಡಿದ್ದಾನೆ.

ಪ್ರಾಣಿ ಹಿಂಸೆ ಮಾಡಿದರೆ 5 ವರ್ಷ ಜೈಲು: ಈವರೆಗೆ ಕೇವಲ 50 ರು. ದಂಡ ಇತ್ತು!

ಘಟನೆಯ ಬಳಿಕ ಆರೋಪಿಯ ಬಂಧನವಾಗಿದೆ ಎಂದು ನಾಗರಿಕರ ರಕ್ಷಣಾ ಸಚಿವ ಟಾಕಿಸ್ ಥಿಯೋಡೋರಿಕಾಕೋಸ್ (Takis Theodorikakos) ಅವರು ಫೇಸ್‌ಬುಕ್‌ನಲ್ಲಿ (Facebook) ಮಾಹಿತಿ ನೀಡಿದ್ದಾರೆ. ಪ್ರಾಣಿಗಳ ಮೇಲಿನ ಹಿಂಸೆ ಸ್ವೀಕಾರಾರ್ಹವಲ್ಲ ಎಂದು ಥಿಯೋಡೋರಿಕಾಕೋಸ್ ಹೇಳಿದ್ದಾರೆ. 

ಸರ್ಕಾರವು ಪ್ರಾಣಿಗಳನ್ನು ನಿಂದನೆ ಹಾಗೂ ತೊಂದರೆಯಿಂದ ರಕ್ಷಿಸಲು ಕಟ್ಟುನಿಟ್ಟಾದ ಕಾನೂನನ್ನು ಜಾರಿಗೊಳಿಸಿದೆ. ಇದು ಮಾನವೀಯತೆ ಹಾಗೂ ಸಂಸ್ಕೃತಿಯ ವಿಚಾರ. ಪ್ರಾಣಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವವರು ಮತ್ತು ಅದನ್ನು ಸಹಿಸಿಕೊಳ್ಳುವವರಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಸಮಸ್ಯೆಯನ್ನು ಎತ್ತಿದವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಪ್ರಕರಣವು ಈಗ ಗ್ರೀಕ್ ನ್ಯಾಯಾಲದಲ್ಲಿದೆ (Greek justice) ಎಂದು ಅವರು ಹೇಳಿದ್ದಾರೆ. 

ಹಾಲುಗಲ್ಲದ ಕೂಸಿಗೆ ಮಸಾಜ್ ಮಾಡುವ ಬೆಕ್ಕು: ವಿಡಿಯೋ ವೈರಲ್

ನ್ಯೂಸ್‌ವೀಕ್‌ನ ಪ್ರಕಾರ, 2020 ರಲ್ಲಿ ಗ್ರೀಕ್ ಸರ್ಕಾರವು ಪ್ರಾಣಿಗಳ ಕ್ರೌರ್ಯವನ್ನು ಹತ್ತು ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗುವ ಅಪರಾಧವನ್ನಾಗಿ ಮಾಡುವ ಯೋಜನೆಗಳನ್ನು ಅನುಮೋದಿಸಿತ್ತು. ಪ್ರಾಣಿಗಳ ನಿಂದನೆಯ ಕೃತ್ಯಗಳನ್ನು ನಡೆಸುವ ಜನರಿಗೆ $5,273 ರಿಂದ $15,820 ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಏತನ್ಮಧ್ಯೆ, ಬೆಕ್ಕು ಘಟನೆಯಲ್ಲಿ ಬದುಕುಳಿದಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿದ ಸ್ಥಳೀಯ ಪ್ರಾಣಿ ಸಮಾಜದ ಸದಸ್ಯರೊಬ್ಬರು, ಬೆಕ್ಕು ರೆಸ್ಟೋರೆಂಟ್‌ನ ಮಾಲೀಕರಿಗೆ ಸೇರಿದ್ದು, ಎರಡೂ ಬೆಕ್ಕುಗಳು ಚೆನ್ನಾಗಿವೆ ಎಂದು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.