ಗೂಗಲ್ ತನ್ನ 'ಡೀಬಗ್' ಯೋಜನೆಯಡಿ 3.2 ಕೋಟಿ ಗಂಡು ಸೊಳ್ಳೆಗಳನ್ನು ಸೃಷ್ಟಿಸಿದೆ. ವೋಲ್ಬಾಚಿಯಾ ಬ್ಯಾಕ್ಟೀರಿಯಾ ಹೊಂದಿರುವ ಈ ಸೊಳ್ಳೆಗಳು, ರೋಗಕಾರಕ ಹೆಣ್ಣು ಸೊಳ್ಳೆಗಳ ಮೊಟ್ಟೆಗಳನ್ನು ನಾಶಪಡಿಸುವ ಮೂಲಕ ಸೊಳ್ಳೆಗಳ ಸಂತತಿಯನ್ನು ನಿರ್ನಾಮ ಮಾಡುವ ಗುರಿ ಹೊಂದಿವೆ.

  • ಗೂಗಲ್‌ನಿಂದ 3.2 ಕೋಟಿ ಗಂಡು ಸೊಳ್ಳೆಗಳ ಸೃಷ್ಟಿ!
  • ಬಿಡುಗಡೆಗೆ ಸರ್ಕಾರದ ಬಳಿ ಮನವಿ
  • ಜಗತ್ತನ್ನು ಸೊಳ್ಳೆ ಮುಕ್ತ ಮಾಡುವ ಗುರಿ

ವಾಷಿಂಗ್ಟನ್‌ (ಜೂ.2): ಸೊಳ್ಳೆಗಳಿಂದ ಮುಕ್ತಿಗೆ ಜಗತ್ತೇ ಯತ್ನಿಸುತ್ತಿರುವ ನಡುವೆ ಗೂಗಲ್‌ ಕಂಪನಿಯು 3.2 ಕೋಟಿ ಸೊಳ್ಳೆಗಳನ್ನು ಸೃಷ್ಟಿಸಿ ಬಿಡುಗಡೆ ಮಾಡಲು ಮುಂದಾಗಿದೆ. ವಿಚಿತ್ರವೆನಿಸುವ ಈ ಯೋಜನೆಯ ಉದ್ದೇಶ ಸೊಳ್ಳೆಗಳ ಸಂತತಿಯನ್ನು ನಿರ್ನಾಮ ಮಾಡುವುದೇ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಂಪನಿಯು ರೋಗಕಾರಕ ಸೊಳ್ಳೆಗಳಿಂದ ಮುಕ್ತಿಗಾಗಿ ದಶಕದ ಹಿಂದೆ ‘ಡೀಬಗ್‌’ ಎಂಬ ಯೋಜನೆ ಆರಂಭಿಸಿದ್ದು, ಇದರ ಭಾಗವಾಗಿ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಕಳೆದ 2 ವರ್ಷಗಳಲ್ಲಿ 3.2 ಕೋಟಿ ಸೊಳ್ಳೆಗಳನ್ನು ಸೃಷ್ಟಿಸಿತ್ತು. ಈಗ ಅವುಗಳನ್ನು 2 ಹಂತದಲ್ಲಿ ಬಿಡುಗಡೆಗೆ ಅನುಮತಿಗಾಗಿ ಅಮೆರಿಕದ ಪರಿಸರ ಸಂರಕ್ಷಣಾ ಇಲಾಖೆಗೆ ಮನವಿ ಮಾಡಿದೆ.

ಈ ತಂತ್ರವನ್ನು ಈಗಾಗಲೇ ಸ್ಕ್ರೂವರ್ಮ ಎಂಬ ನೊಣದ ರೀತಿಯ ಜೀವಿಯ ಮೇಲೆ ಪ್ರಯೋಗ ಮಾಡಲಾಗಿದೆ.

ಸೊಳ್ಳೆಗಳೇನು ಮಾಡ್ತವೆ?:

ಗೂಗಲ್‌ನ ಸೊಳ್ಳೆಗಳಲ್ಲಿ ವೋಲ್ಬಾಚಿಯಾ ಪೈಪಿಯೆಂಟಿಸ್ ಬ್ಯಾಕ್ಟೀರಿಯಾ ಇರುತ್ತದೆ. ಇವುಗಳ ಜತೆಗಿನ ಸಂಭೋಗದಿಂದ ಹೆಣ್ಣುಸೊಳ್ಳೆಗಳಿಡುವ ಮೊಟ್ಟೆಗಳು ಒಡೆಯುವುದೇ ಇಲ್ಲ. ಹೀಗೆ ಕ್ರಮೇಣ ಸೊಳ್ಳೆಗಳ ಜನನವೇ ನಿಂತು ಅವು ನಿರ್ನಾಮವಾಗುತ್ತವೆ ಎಂಬುದು ಈ ಯೋಜನೆಯ ಲೆಕ್ಕಾಚಾರ.

ಇದಕ್ಕೆಂದು ಬಿಡುಗಡೆ ಮಾಡಲಾಗುವ 3.2 ಕೋಟಿ ಗಂಡು ಸೊಳ್ಳೆಗಳಿಂದ ಮನುಷ್ಯರಿಗೆ ಯಾವುದೇ ಅಪಾಯವಾಗದು. ಕಾರಣ ಕಚ್ಚುವುದು ಹೆಣ್ಣುಸೊಳ್ಳೆಗಳು ಮಾತ್ರ.