2022-23ನೇ ಸಾಲಿನ ಬಜೆಟ್‌ ಅಂದಾಜಿನ ಮಿತಿಗಿಂತ 2 ಲಕ್ಷ ಕೋಟಿ ರು.ಗಳನ್ನು ಪಾಕ್‌ ಅಧಿಕವಾಗಿ ಖರ್ಚು ಮಾಡಿ ಬಜೆಟ್‌ ಅಂದಾಜು ಉಲ್ಲಂಘನೆ ಮಾಡಿರುವುದನ್ನು ಐಎಂಎಫ್‌ ಪತ್ತೆ ಮಾಡಿದೆ.

ಇಸ್ಲಾಮಾಬಾದ್‌: ಕಂಡುಕೇಳರಿಯದ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಪಾಕಿಸ್ತಾನ ಹಣಕಾಸು ಸಹಾಯಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯತ್ತ ಎದುರು ನೋಡುತ್ತಿರುವಾಗಲೇ, 2022-23ನೇ ಸಾಲಿನ ಬಜೆಟ್‌ ಅಂದಾಜಿನ ಮಿತಿಗಿಂತ 2 ಲಕ್ಷ ಕೋಟಿ ರು.ಗಳನ್ನು ಪಾಕ್‌ ಅಧಿಕವಾಗಿ ಖರ್ಚು ಮಾಡಿ ಬಜೆಟ್‌ ಅಂದಾಜು ಉಲ್ಲಂಘನೆ ಮಾಡಿರುವುದನ್ನು ಐಎಂಎಫ್‌ ಪತ್ತೆ ಮಾಡಿದೆ. ಇದರಿಂದಾಗಿ ಪಾಕಿಸ್ತಾನದ ವಿತ್ತೀಯ ಕೊರತೆ ಹಾಗೂ ಸಾಲದ ಕೊರತೆ ನಿಗದಿತ ಮಿತಿಗಿಂತ ಅಗಾಧ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಐಎಂಎಫ್‌ನಿಂದ (IMF) ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿರುವ ಪಾಕಿಸ್ತಾನ (Pakistan) ಮಂಗಳವಾರದಿಂದ ಆ ಸಂಸ್ಥೆಯ ಜತೆ ಮಾತುಕತೆ ನಡೆಸಲಿದೆ. ಇದು ಯಶಸ್ವಿಯಾದರೆ ಸೆಪ್ಟೆಂಬರ್‌ನಿಂದ ಬಾಕಿ ಇರುವ ಹಣ ದೊರೆಯಲಿದೆ. ಆದರೆ ಬಜೆಟ್‌ ಅಂದಾಜು ಮೀರಿರುವ ಹಿನ್ನೆಲೆಯಲ್ಲಿ ತೆರಿಗೆ ವಿಧಿಸುವ ಕ್ರಮಗಳನ್ನೊಳಗೊಂಡ ಮಿನಿ ಬಜೆಟ್‌ ಪ್ರಕಟಿಸಿ 60 ಸಾವಿರ ಕೋಟಿ ರು. ವಿಧಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಐಎಂಎಫ್‌ ತಾಕೀತು ಮಾಡುತ್ತಿದೆ. ಆದರೆ ಇದಕ್ಕೆ ಪಾಕಿಸ್ತಾನ ಒಪ್ಪುತ್ತಿಲ್ಲ. ಪ್ರಾಥಮಿಕ ಕೊರತೆ (ಬಡ್ಡಿ ಪಾವತಿ ಹೊರತುಪಡಿಸಿ ಇತರೆ ವೆಚ್ಚಕ್ಕೆ ಸರ್ಕಾರ ಪಡೆಯುವ ಸಾಲ) ಏರಿಕೆಯಾಗುವುದಿಲ್ಲ ಎಂದು ವಾದಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

2019ರಲ್ಲಿ ಭಾರತ - ಪಾಕ್‌ ಪರಮಾಣು ಯುದ್ಧ ಮಾಡುವುದರಲ್ಲಿತ್ತು, ಅಮೆರಿಕ ಅದನ್ನು ತಡೆದಿದೆ: ಮೈಕ್‌ ಪಾಂಪಿಯೊ

ಪಾಕ್‌ನಾದ್ಯಂತ ಭಾರಿ ವಿದ್ಯುತ್‌ ವ್ಯತ್ಯಯ: ತನಿಖೆಗೆ ಆದೇಶಿಸಿದ ಪ್ರಧಾನಿ ಶೆಹಬಾಜ್‌ ಷರೀಫ್‌