ಹಿಂದಿ ಕಾದಂಬರಿಕಾರ್ತಿ ಗೀತಾಂಜಲಿ ಶ್ರೀ ಅವರು ಹಿಂದಿಯಲ್ಲಿ ಬರೆದ ರೆಟ್ ಸಮಾಧಿ ಕಾದಂಬರಿಯ ಅನುವಾದ ಟಾಂಬ್ ಆಫ್ ಸ್ಯಾಂಡ್‌ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಬಂದಿದೆ.
ಲಂಡನ್: ಲೇಖಕಿ ಗೀತಾಂಜಲಿ ಶ್ರೀ ಅವರ ಹಿಂದಿ ಕಾದಂಬರಿ 'ಟಾಂಬ್ ಆಫ್ ಸ್ಯಾಂಡ್' ಗೆ ಬೂಕರ್ ಪ್ರಶಸ್ತಿ ಒಲಿದು ಬಂದಿದ್ದು, ಈ ಮೂಲಕ ಇದೇ ಮೊದಲ ಬಾರಿಗೆ ಯಾವುದೇ ಭಾರತೀಯ ಭಾಷೆಯಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುರುವಾರ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ, ನವದೆಹಲಿ ಮೂಲದ ಲೇಖಕಿ ಗೀತಾಂಜಲಿ ಶ್ರೀ ಅವರು ಇವರ ಪುಸ್ತಕದ ಇಂಗ್ಲಿಷ್ ಅನುವಾದಕಿ ಡೈಸಿ ರಾಕ್‌ವೆಲ್ ಅವರೊಂದಿಗೆ 50,000 ಮೌಲ್ಯದ ಬಹುಮಾನವನ್ನು ಸ್ವೀಕರಿಸಿದರು. ಅಲ್ಲದೇ ಪ್ರಶಸ್ತಿಯಿಂದ ತಮ್ಮ ಹೃದಯ ತುಂಬಿ ಬಂದಿರುವುದಾಗಿ ಅವರು ಹೇಳಿದರು.
'ಟೋಂಬ್ ಆಫ್ ಸ್ಯಾಂಡ್' ಕಾದಂಬರಿಯೂ ಮೂಲತಃ ಹಿಂದಿಯಲ್ಲಿ'ರೆಟ್ ಸಮಾಧಿ' ಎಂದು ಇದೆ. ಉತ್ತರ ಭಾರತ ಮೂಲದ 80 ವರ್ಷದ ಮಹಿಳೆಯನ್ನು ಆಧರಿಸಿದ ಕತೆ ಇದಾಗಿದೆ. ಬುಕರ್ ತೀರ್ಪುಗಾರರು ಈ ಕಾದಂಬರಿಯನ್ನು ಸಂತೋಷದ ಕಾಕೋಫೋನಿ(oyous cacophony) ಮತ್ತು ಆಕರ್ಷಣೀಯ ಕಾದಂಬರಿ (irresistible novel) ಎಂದು ಕರೆದಿದ್ದಾರೆ. 80ರ ಪ್ರಾಯದಲ್ಲಿ ಗಂಡನನ್ನು ಕಳೆದುಕೊಂಡು ಖಿನ್ನತೆಗೆ ಜಾರುವ ವೃದ್ಧೆಯ ಕತೆ ಇದಾಗಿದೆ.
ನಾನು ಬೂಕರ್‌ನ ಬಗ್ಗೆ ಕನಸು ಕಂಡಿರಲಿಲ್ಲ, ನಾನು ಅದನ್ನು ಮಾಡಬಹುದೆಂದು ನಾನು ಎಂದಿಗೂ ಯೋಚಿಸಲಿಲ್ಲ. ಎಂತಹ ದೊಡ್ಡ ಗುರುತಿಸುವಿಕೆ, ನಾನು ಆಶ್ಚರ್ಯಚಕಿತಳಾಗಿದ್ದೇನೆ, ಸಂತೋಷಪಡುತ್ತೇನೆ, ಈ ಗೌರವಕ್ಕೆ ವಿನಮ್ರಳಾಗಿದ್ದೇನೆ ಎಂದು ಲೇಖಕಿ ಗೀತಾಂಜಲಿ ಶ್ರೀ ಪ್ರಶಸ್ತಿ ಸ್ವೀಕರಿಸಿ ಹೇಳಿದ್ದಾರೆ.
ರೆಟ್ ಸಮಾಧಿ ಅಥವಾ ಮರಳಿನ ಸಮಾಧಿ (Tomb of Sand) ಕಾದಂಬರಿಯಲ್ಲಿ ನಾವು ವಾಸಿಸುವ ಜಗತ್ತಿಗೆ ಒಂದು ಸೊಗಸು, ಸನ್ನಿಹಿತವಾದ ವಿನಾಶದ ಮಧ್ಯೆಯೂ ಭರವಸೆಯನ್ನು ಉಳಿಸಿಕೊಳ್ಳುವ ಶಾಶ್ವತ ಶಕ್ತಿ ಇದೆ. ಬೂಕರ್ ಪ್ರಶಸ್ತಿಯಿಂದಾಗಿ ಈ ಕಾದಂಬರಿ ಮತ್ತಷ್ಟು ಜನರನ್ನು ತಲುಪಲಿದೆ ಎಂದು ಅವರು ಹೇಳಿದರು.
ನೊಬೆಲ್, ಬೂಕರ್ ಪ್ರಶಸ್ತಿ ಒಡೆಯ ನೈಪಾಲ್ ವಿಧಿವಶ!
ಆದರೆ ನನ್ನ ಹಿಂದೆ ಮತ್ತು ಈ ಪುಸ್ತಕದ ಹಿಂದೆ ಹಿಂದಿ ಮತ್ತು ದಕ್ಷಿಣ ಏಷ್ಯಾದ ಇತರ ಭಾಷೆಗಳಲ್ಲಿ ಶ್ರೀಮಂತ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಅನೇಕ ಸಾಹಿತ್ಯ ಹಾಗೂ ಸಾಹಿತಿಗಳಿದ್ದಾರೆ. ಈ ಭಾಷೆಗಳಲ್ಲಿ ಕೆಲವು ಅತ್ಯುತ್ತಮ ಬರಹಗಾರರನ್ನು ತಿಳಿದುಕೊಳ್ಳಲು ವಿಶ್ವ ಸಾಹಿತ್ಯವು ಉತ್ಕೃಷ್ಟವಾಗಿರುತ್ತದೆ. ಅಂತಹವರಿಂದ ಜೀವನದ ಸಂವಹನ ಶಬ್ದಕೋಶವು ಹೆಚ್ಚಾಗುತ್ತದೆ ಎಂದು ಗೀತಾಂಜಲಿ ಹೇಳಿದರು.
Yadgir: ದೇವಾಪುರ ಶ್ರೀಮಠದಿಂದ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್‌ಗೆ ಕಾಯಕ ಶ್ರೀ ಪ್ರಶಸ್ತಿ ಪ್ರದಾನ!
ಯುಎಸ್‌ನ (US) ವರ್ಮೊಂಟ್‌ನಲ್ಲಿ (Vermont) ವಾಸಿಸುತ್ತಿರುವ ವರ್ಣಚಿತ್ರಕಾರ, ಬರಹಗಾರ ಮತ್ತು ಅನುವಾದಕ ರಾಕ್‌ವೆಲ್ (Rockwell) ಅವರು ಕೂಡ ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆಯ ಮೇಲೆ ಗೀತಾಂಜಲಿ ಅವರೊಂದಿಗೆ ಸೇರಿಕೊಂಡರು. ಅಂತಿಮವಾಗಿ, ಡೈಸಿ ರಾಕ್‌ವೆಲ್‌ರ ಉತ್ಸಾಹಭರಿತ ಅನುವಾದದಿಂದ ಗೀತಾಂಜಲಿ ಶ್ರೀ ಅವರ ಕಾದಂಬರಿಯಾದ 'ಟಾಂಬ್ ಆಫ್ ಸ್ಯಾಂಡ್' ನ್ನು ನಾವು ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದು ತೀರ್ಪುಗಾರರ ಸಮಿತಿಯ ಅಧ್ಯಕ್ಷ ಫ್ರಾಂಕ್ ವೈನ್ ಹೇಳಿದರು.