Yadgir: ದೇವಾಪುರ ಶ್ರೀಮಠದಿಂದ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್‌ಗೆ ಕಾಯಕ ಶ್ರೀ ಪ್ರಶಸ್ತಿ ಪ್ರದಾನ!

ಐಪಿಎಸ್ ಅಧಿಕಾರಿ ಹಾಗೂ ಸಿಐಡಿ ಅಪರಾಧ ವಿಭಾಗದ ಎಸ್ಪಿ ರವಿ.ಡಿ.ಚೆನ್ನಣ್ಣನವರ್ ಅವರಿಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರದ ಜಡಿಶಾಂತಲಿಂಗೇಶ್ವರ ಹಿರೇಮಠದಲ್ಲಿ ಕಾಯಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Kayaka Shree Award To IPS Officer Ravi D Channannavar By Yadgir Devapura Srimutt gvd

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ (ಮೇ.15): ಐಪಿಎಸ್ ಅಧಿಕಾರಿ (IPS Officer) ಹಾಗೂ ಸಿಐಡಿ ಅಪರಾಧ (CID Crime) ವಿಭಾಗದ ಎಸ್ಪಿ ರವಿ.ಡಿ.ಚೆನ್ನಣ್ಣನವರ್ (Ravi D Channannavar) ಅವರಿಗೆ ಯಾದಗಿರಿ (Yadgir) ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರದ ಜಡಿಶಾಂತಲಿಂಗೇಶ್ವರ ಹಿರೇಮಠದಲ್ಲಿ (Devapura Srimutt) ಕಾಯಕ ಶ್ರೀ ಪ್ರಶಸ್ತಿ (Kayaka Shree Award) ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಶ್ರೀಗಳಾದ ಶಿವಮೂರ್ತಿ ಶಿವಾಚಾರ್ಯರು, ರುಕ್ಮಾಪುರ ಮಠದ ಗುರುಶಾಂತ ಮೂರ್ತಿ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.

ಮಠಗಳು ಶುದ್ಧೀಕರಣದ ಕೇಂದ್ರಗಳು: ರವಿ.ಡಿ.ಚೆನ್ನಣ್ಣನವರ್: ದೇವಾಪುರ ಮಠದ ಕಾಯಕ ಶ್ರೀ ಪ್ರಶಸ್ತಿ ಸ್ವೀಕರಿಸಿ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಮಾತನಾಡಿ, ಜಗದ ಎಲ್ಲಾ ಧಾರ್ಮಿಕ ಕೇಂದ್ರಗಳ ಮೂಲ ಉದ್ದೇಶ ಸರ್ವೇ ಜನ ಸುಖಿಯೋ ಭವ, ಸತ್ಯಂ ಧರ್ಮಂ ಜಯ, ಸತ್ಯಮೇಚ ಜಯತೇ, ಮನುಷ್ಯನಿಗೆ ದೇವರು, ಧರ್ಮ, ಸರಿ-ತಪ್ಪು, ಸಂಸ್ಕಾರವನ್ನು ಹೇಳಿಕೊಡುವ ಮನಸ್ಸಿನ ಶುದ್ಧೀಕರಣ ಕೇಂದ್ರಗಳು ಮಠ, ಮಸೀದಿ, ಚರ್ಚ್, ಜೈನ ಬಸೀದಿಗಳಾಗಿವೆ. ಮನುಷ್ಯನ ಮನಸ್ಸಿನ ಪರಿಶುದ್ದೀಕರಣ ದೇವಸ್ಥಾನಗಳಿಂದ ಸಾಧ್ಯ. ದೇವಸ್ಥಾನಗಳು ಜಾಗೃತಿ  ಮತ್ತು ಶಕ್ತಿಪೀಠಗಳಾಗಿವೆ. ನಮ್ಮನ್ನು ರೀಚಾರ್ಜ್ ಮಾಡಿ ನಮ್ಮ ಮನಸ್ಸನ್ನು ಗಟ್ಟಿಗೊಳಿಸುತ್ತವೆ ಎಂದರು.

Yadgir: ಮದುವೆ ವಾರ್ಷಿಕೋತ್ಸವದ ದಿನವೇ ಪತ್ನಿಯನ್ನು ಕೊಲೆ ಮಾಡಿದ ಪತಿ: ಪಾಪಿ ಗಂಡ ಎಸ್ಕೇಪ್!

ಪ್ರಸಾದ ಮತ್ತು ವಿದ್ಯಾದಾನ ಮಠಗಳ ಸಂಸ್ಕೃತಿ: ಚೆನ್ನಣ್ಣನವರ್: ರವಿ.ಡಿ.ಚೆನ್ನಣ್ಣನವರ್ ಅವರಯ ತಮ್ಮ ವಿದ್ಯಾರ್ಥಿ ಜೀವನವನ್ನು ದೇವಾಪುರ ಮಠದಲ್ಲಿ ಸ್ಮರಿಸಿಕೊಂಡರು. ನಾನು ವಿದ್ಯಾರ್ಥಿಯಾಗಿದ್ದಾಗ ಮಠದಲ್ಲಿ ಪ್ರಸಾಧ ಮತ್ತು ವಿದ್ಯಾಧಾನ ನೀಡಿವೆ, ಹಾಗಾಗಿ ನಾನು ಒಬ್ಬ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಾಯಿತು. ನಾನು ಮಠದಲ್ಲಿಯೇ ಓದಿದ ವಿದ್ಯಾರ್ಥಿ. ಲಿಂ‌.ಪುಟ್ಟರಾಜ ಗವಾಯಿಗಳ ಆಶ್ರಯ ಮತ್ತು ರಾಮಕೃಷ್ಣ ಮಠದ ಶ್ರೀಗಳ ಬೋಧನೆ ನನ್ನ ಜೀವನ ಪರಿವರ್ತನೆಗೆ ಕಾರಣವಾಯಿತು. ಹುಬ್ಬಳ್ಳಿ ಸಿದ್ದರೂಢ ಮಠ, ಮುರುಘಾ ಮಠಗಳನ್ನು ಜೀವನದಲ್ಲಿಯೇ ಮರೆಯಲು ಸಾಧ್ಯವಿಲ್ಲ ಎಂದು ತಮ್ಮ ಮತ್ತು ಮಠಗಳ ನಡುವಿನ ಬಾಂಧವ್ಯವನ್ನು ನೆನಪಿಸಿಕೊಂಡರು. 

Booster Dose: ಸತ್ತವರಿಗೂ ಬೂಸ್ಟರ್‌ ಡೋಸ್‌ ಸಂದೇಶ: 9 ಜನಕ್ಕೆ ನೋಟಿಸ್‌

ರವಿ.ಡಿ.ಚೆನ್ನಣ್ಣನವರ ಹುಟ್ಟು ದರಿದ್ರವಾಗಿತ್ತು, ಸಾವು ಚರಿತ್ರೆಯಾಗುತ್ತೆ-ಶಿವಮೂರ್ತಿ ಶಿವಾಚಾರ್ಯರು: ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಶ್ರೀಗಳಾದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಬಡತನದಲ್ಲಿಯೇ ಹುಟ್ಟಿದವರು, ಜೀವನದಲ್ಲಿ ಕಷ್ಟ ಪಟ್ಟು ಬೆಳದವರು. ಈಗ ಐಪಿಎಸ್ ಅಧಿಕಾರಿಯಾಗಿ ಐಪಿಎಸ್, ಐಎಎಸ್ ಆಕಾಂಕ್ಷಿಗಳಿಗೆ ಉಚಿತವಾಗಿ ತರಭೇತಿಯನ್ನು ನೀಡ್ತಿದ್ದಾರೆ ಅವರ ಸಾಮಾಜಿಕ ಕಾರ್ಯ ಮೆಚ್ಚುವಂತದ್ದು. ಅವರು ಹುಟ್ಟು ದರಿದ್ರವಾಗಿತ್ತು, ಆದ್ರೆ ಅವರ ಸಾವು ಮಾತ್ರ ಚರಿತ್ರೆ ಆಗುವಂತೆ ಅವರು ಬದುಕುತಿದ್ದಾರೆ ಎಂದು ಹೇಳಿದರು.

Latest Videos
Follow Us:
Download App:
  • android
  • ios