Asianet Suvarna News Asianet Suvarna News

ಇಮ್ರಾನ್‌ ಖಾನ್ ಜೈಲು ಪಾಲಾದ ಬೆನ್ನಲ್ಲೇ 4 ವರ್ಷಗಳ ಬಳಿಕ ಮರಳಿ ಪಾಕಿಸ್ತಾನಕ್ಕೆ ಬಂದ ನವಾಜ್ ಷರೀಫ್

ಪಾಕಿಸ್ತಾನದಿಂದ ಪಲಾಯನಗೈದು ದುಬೈನಲ್ಲಿ ನೆಲೆಸಿದ್ದ ಮಾಜಿ ಪ್ರಧಾನಿ ನವಾಜ್ ಷರೀಫ್ ಸುಮಾರು ನಾಲ್ಕು ವರ್ಷಗಳ ಬಳಿಕ  ತಮ್ಮ ದೇಶ ಪಾಕ್‌ಗೆ ಮರಳಿದ್ದಾರೆ.

former leader Nawaz Sharif returns to Pakistan after nearly four years in self exile gow
Author
First Published Oct 21, 2023, 4:53 PM IST

ಪಾಕಿಸ್ತಾನದಿಂದ ಪಲಾಯನಗೈದು ದುಬೈನಲ್ಲಿ ನೆಲೆಸಿದ್ದ ಮಾಜಿ ಪ್ರಧಾನಿ ನವಾಜ್ ಷರೀಫ್ ಸುಮಾರು ನಾಲ್ಕು ವರ್ಷಗಳ ಬಳಿಕ  ತಮ್ಮ ದೇಶ ಪಾಕ್‌ಗೆ ಮರಳಿದ್ದಾರೆ. ದೇಶವು ಪ್ರಕ್ಷುಬ್ಧ ರಾಷ್ಟ್ರೀಯ ಚುನಾವಣೆ  ನಿರೀಕ್ಷಿಸುತ್ತಿರುವ ಬೆನ್ನಲ್ಲೇ ನವಾಜ್ ಷರೀಫ್ ತಾಯ್ನಾಡಿಗೆ ಮರಳಿದ್ದು, 4ನೇ ಬಾರಿಗೆ ಅಧಿಕಾರ ಗಳಿಸುವ ಪ್ರಯತ್ನದಲ್ಲಿ ಅವರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಬಳಿಕ  ಮತ್ತು ಒಮ್ಮೆ ಸೇನಾ ದಂಗೆಯಲ್ಲಿ ಪದಚ್ಯುತಗೊಂಡಿದ್ದ ಷರೀಫ್ ಶನಿವಾರ ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ತನ್ನ ಖಾಸಗಿ ವಿಮಾನದಲ್ಲಿ ಬಂದಿಳಿದರು ಎಂದು  ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸಿದ್ದಾರೆ.

100 ಕೊಠಡಿಯ ಅರಮನೆಯಲ್ಲಿ ಭಾರತದ ಅತ್ಯಂತ ದುಬಾರಿ ರಾಜಮನೆತನದ ವಿವಾಹ, ಇಶಾ ಅಂಬಾನಿ ಮದುವೆಗೂ ಇದಕ್ಕೂ ಲಿಂಕ್ ಇಲ್ಲ

 ಪಾಕಿಸ್ತಾನ್‌ ಮುಸ್ಲಿಂ ಲೀಗ್-ನವಾಜ್‌ (ಪಿಎಂಎಲ್-ಎನ್‌) ಪಕ್ಷದ ಮುಖಂಡರಾಗಿರುವ 73 ವರ್ಷದ ಷರೀಫ್‌  ಲಾಹೋರ್‌ನಲ್ಲಿ ನಡೆಯುವ ಪಕ್ಷದ ರ‍್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ ಎಂದು  ಮಾಧ್ಯಮ ವರದಿ ತಿಳಿಸಿದೆ.

2017 ರಲ್ಲಿ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್  ನಿಂದ ಅವರು ಅಧಿಕಾರದಿಂದ ಅನರ್ಹರಾಗಿ ಬಳಿಕ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು. ಈ ಆರೋಪಗಳನ್ನು ಅವರು ನಿರಾಕರಿಸಿದರು. ಆದರೆ ಷರೀಫ್ ಅವರ ಅನಾರೋಗ್ಯದ ಹಿನ್ನೆಲೆ ನೀಡಿದ್ದ ಶಿಕ್ಷೆಯನ್ನು ಅಮಾನತುಗೊಳಿಸಲಾಯಿತು. ನಾಲ್ಕು ವಾರಗಳಲ್ಲಿ ದೇಶಕ್ಕೆ ಹಿಂದಿರುಗುವ ಷರತ್ತಿನ ಮೇಲೆ ಚಿಕಿತ್ಸೆಗಾಗಿ ವಿದೇಶಕ್ಕೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟರು. ಆದರೆ ಈ ನಿಯಮವನ್ನು ಉಲ್ಲಂಘಿಸಿದ ಷರೀಫ್ ದುಬೈನಲ್ಲೇ ಉಳಿದುಬಿಟ್ಟರು.

ಹಣ, ತಂತ್ರಜ್ಞಾನವಿಲ್ಲದೆ ಕಾಡಲ್ಲಿ ಬದುಕುತ್ತಿರುವ ಐರಿಶ್ ಬರಹಗಾರನಿಗೆ ಗಾಂಧೀಜಿಯೇ ಸ್ಫೂರ್ತಿ!

ಇಸ್ಲಾಮಾಬಾದ್ ನ್ಯಾಯಾಲಯವು ತಮ್ಮ ವಿರುದ್ಧ ಇರುವ ಎರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಿದ ಕೆಲವೇ ದಿನಗಳಲ್ಲಿ ಅವರು ಪಾಕಿಸ್ತಾನಕ್ಕೆ ಹಿಂತಿರುಗಿದ್ದಾರೆ, ಅಂದರೆ ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ಅವರನ್ನು ಬಂಧಿಸಲಾಗುವುದಿಲ್ಲ. 2019ರಲ್ಲಿ ಸ್ವಯಂ ಗಡೀಪಾರಿಗೆ ಒಳಗಾಗಿದ್ದ ಷರೀಫ್‌ ಅವರು ಲಂಡನ್‌ಗೆ ಹಾರಿದ್ದರು.  ಬಳಿಕ ದುಬೈಗೆ ಬಂದಿದ್ದರು.

ಷರೀಫ್ ಅವರ ಪ್ರತಿಸ್ಪರ್ಧಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು  ಪದಚ್ಯುತಗೊಳಿಸಿದ ನಂತರ ಪಾಕಿಸ್ತಾನದಲ್ಲಿ ರಾಜಕೀಯ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಇಮ್ರಾನ್‌ ಖಾನ್‌ ಉಡುಗೊರೆಗಳ ಹಗರಣದಲ್ಲಿ ಜೈಲುಪಾಲಾಗಿದ್ದಾರೆ. ಹೀಗಾಗಿ ನವಾಜ್ ಶರೀಪ್‍ರ ಆಪ್ತರಾದ  ಶಾಹೀದ್‌ ಖಾಕನ್‌ ಅಬ್ಬಾಸಿ ಪಾಕಿಸ್ತಾನ ಪ್ರಧಾನಿಯಾದರು.

ಇತ್ತೀಚಿನ ಕೆಲ ತಿಂಗಳಿಂದ ಪಾಕಿಸ್ತಾನದಲ್ಲಿ ಏರುತ್ತಿರುವ ಬೆಲೆಗಳು ಮತ್ತು ದೇಶದ ಶಕ್ತಿಶಾಲಿ ಮಿಲಿಟರಿಯೆಡೆಗಿನ ತಿರಸ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇದೆ.  ಪಾಕಿಸ್ತಾನ ದಿವಾಳಿಯತ್ತ ಸಾಗುತ್ತಿದೆ.

Follow Us:
Download App:
  • android
  • ios