ಹಣ, ತಂತ್ರಜ್ಞಾನವಿಲ್ಲದೆ ಕಾಡಲ್ಲಿ ಬದುಕುತ್ತಿರುವ ಐರಿಶ್ ಬರಹಗಾರನಿಗೆ ಗಾಂಧೀಜಿಯೇ ಸ್ಫೂರ್ತಿ!

2008 ರಿಂದ ಸಂಪೂರ್ಣ ಐಶಾರಾಮಿ, ಹಣ ತೊರೆದು ಬದುಕುತ್ತಿರುವ ಐರಿಶ್ ವ್ಯಕ್ತಿಗೆ ವ್ಯಕ್ತಿಗೆ ಗಾಂಧೀಜಿಯೇ ಸ್ಪೂರ್ತಿಯಂತೆ. 2016 ರಿಂದ ಆಧುನಿಕ ತಂತ್ರಜ್ಞಾನವಿಲ್ಲದೆ ಬದುಕಿದ್ದಾರೆ.

Irish man Mark Boyle  who lives without money and technology  influenced by Gandhiji gow

ಹೆಚ್ಚಿನ ಜನರು ಸಂಪಾದನೆ ಮಾಡಿ ಆರಾಮದಾಯಕ ಮತ್ತು ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ. ಈ ಲೇಖನದಲ್ಲಿ 2008 ರಿಂದ ಸಂಪೂರ್ಣ ಐಶಾರಾಮಿ, ಹಣ ತೊರೆದು ಬದುಕುತ್ತಿರುವ ವ್ಯಕ್ತಿಯ ಬಗ್ಗೆ ತಿಳಿಸುತ್ತೇವೆ.

ಮಾರ್ಕ್ ಬೊಯ್ಲ್, 'ದಿ ಮನಿಲೆಸ್ ಮ್ಯಾನ್' ಎಂದೂ ಕರೆಯಲ್ಪಡುವ ಐರಿಶ್ ಬರಹಗಾರ, ಅವರು ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್‌ಗೆ ನಿಯಮಿತವಾಗಿ ಬರೆಯುತ್ತಿರುತ್ತಾರೆ. ಮತ್ತು  ನವೆಂಬರ್ 2008 ರಿಂದ ಹಣವಿಲ್ಲದೆ ಬದುಕಿದ ಮತ್ತು 2016 ರಿಂದ ಆಧುನಿಕ ತಂತ್ರಜ್ಞಾನವಿಲ್ಲದೆ ಬದುಕಿದ ಅನುಭವಗಳನ್ನು ತಮ್ಮ ಕೆಲವು ಪುಸ್ತಕಗಳಲ್ಲಿ ಬರೆದಿದ್ದಾರೆ.

ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಇನ್ಫಿ ನಾರಾಯಣಮೂರ್ತಿಯವರನ್ನು ಹಿಂದಿಕ್ಕಿದ ಕನ್ನಡದ ಸಹೋದರರು!

ಮಾರ್ಕ್ ಬೊಯೆಲ್ 1979 ರಲ್ಲಿ ಐರ್ಲೆಂಡ್‌ನಲ್ಲಿ ಜನಿಸಿದರು. ಅವರು ಗಾಲ್ವೇ-ಮೇಯೊ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ವ್ಯವಹಾರಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರು 2002 ರಲ್ಲಿ UK ಗೆ ತೆರಳಿ ಬ್ರಿಸ್ಟಲ್‌ನಲ್ಲಿ ಉತ್ತಮ ವೇತನದ ಉದ್ಯೋಗ ಪಡೆದರು. 

ಆದಾಗ್ಯೂ, 2007 ರಲ್ಲಿ ಒಂದು ದಿನ ರಾತ್ರಿ ಅವರ ಆಲೋಚನೆ ಜೀವನದ ಕೆಲ ದಿಕ್ಕುಗಳನ್ನು ಬದಲಾಯಿಸಿತು. ಅವರು ಹೌಸ್‌ಬೋಟ್‌ನಲ್ಲಿ ಕುಳಿತು ತತ್ವಶಾಸ್ತ್ರದ ಬಗ್ಗೆ ಮಾತನಾಡುತ್ತಿದ್ದರು. ಈ ಸಮಯದಲ್ಲಿ, ಎಲ್ಲಾ ಸಮಸ್ಯೆಗಳಿಗೆ ಹಣವೇ ಮೂಲ ಎಂದು ಅವರು ಅರಿತುಕೊಂಡರು. ಆಗ  ಹಣ ಸಂಪಾದಿಸಿ ಖರ್ಚು ಮಾಡಬಾರದು ಎಂಬ ನಿರ್ಣಯ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದರು.

ಫೋರ್ಬ್ಸ್ ಶ್ರೀಮಂತರ ಪಟ್ಟಿ 2023, ಭಾರತದ ಟಾಪ್‌ 10 ಮಹಿಳಾ ಶ್ರೀಮಂತರಲ್ಲಿ ಬೆಂಗಳೂರಿನ ಏಕೈಕ ಮಹಿಳೆಗೆ ಸ್ಥಾನ!

ಮಾರ್ಕ್ ತನ್ನ ದುಬಾರಿ ದೋಣಿಯನ್ನು ಮಾರಿ ಹಣವಿಲ್ಲದೆ ಹಳೆಯ ಕ್ಯಾರವಾನ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು. ಆರಂಭದಲ್ಲಿ ಅವರು ಸಮಸ್ಯೆಗಳನ್ನು ಎದುರಿಸಿದರು, ಆದರೆ ಬರಬರುತ್ತಾ ಅವರು ಚಹಾ, ಕಾಫಿ ಮತ್ತು ಇತರ ಅನುಕೂಲಗಳನ್ನು ತ್ಯಜಿಸಿದರು. 

ಈಗ ಅವರು  ಪ್ರಕೃತಿಯಿಂದ ಪಡೆದದ್ದನ್ನು ಮಾತ್ರ ತನ್ನ  ಜೀವನಕ್ಕೆ ಬಳಸಿಕೊಳ್ಳುತ್ತಾರೆ. ಅಂದಿನಿಂದ ಅವರು ಅನಾರೋಗ್ಯಕ್ಕೆ ಒಳಗಾಗಿಲ್ಲ ಅಥವಾ ಅವರಿಗೆ ರಕ್ಷಣೆ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಅನೇಕ ಸ್ನೇಹಿತರನ್ನೂ ಅವರು ಸಂಪಾದಿಸಿದ್ದಾರೆ. ಮಾರ್ಕ್ ತಂತ್ರಜ್ಞಾನವನ್ನೂ ಸಂಪೂರ್ಣವಾಗಿ ತ್ಯಜಿಸಿದ್ದಾರೆ ಮತ್ತು ತಮ್ಮ ಹಳೆಯ ಜೀವನದ ಬದಲಿಗೆ ಭವಿಷ್ಯದ ಬಗ್ಗೆ ಯೋಚಿಸುತ್ತಾರಂತೆ.

ಇವರೇ ಶ್ರೀಮಂತಿಕೆಯಲ್ಲಿ ನಾರಾಯಣ ಮೂರ್ತಿ, ಪ್ರೇಮ್‌ಜಿ, ಪಿಚೈರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಐಟಿ ಉದ್ಯಮಿ!

ಬೋಯ್ಲ್ ಅವರು ತಮ್ಮ ಪದವಿಯ ಅಂತಿಮ ವರ್ಷದಲ್ಲಿ, ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಜೀವನ ಮತ್ತು ಅವರ ಜೀವನವನ್ನು   ಬದಲಾಯಿಸಿದ ಕ್ಷಣದ ಕುರಿತ 'ಗಾಂಧಿ' ಚಲನಚಿತ್ರವನ್ನು ವೀಕ್ಷಿಸಿದ್ದರು ಎಂದು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

Latest Videos
Follow Us:
Download App:
  • android
  • ios