ಹಾವನ್ನೇ ಹಗ್ಗದಂತೆ ಬಳಸಿ ಹೊಡೆದಾಟ: ಯುವಕನ ಜೈಲಿಗಟ್ಟಿದ ಪೊಲೀಸರು
ಹಾವೊಂದನ್ನು ಹಿಡಿದು ಯುವಕನೋರ್ವ ತನ್ನ ಎದುರಾಳಿಯ ಜೊತೆ ಸೆಣೆಸಾಡುತ್ತಿದ್ದಾನೆ. ಲಂಡನ್‌ನ ಟೊರೊಂಟೋದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಲಂಡನ್: ಸಾಮಾಜಕ ಜಾಲತಾಣದಲ್ಲಿ ಚಿತ್ರ ವಿಚಿತ್ರವಾದ ವೀಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಹಾವೊಂದನ್ನು ಹಿಡಿದು ಯುವಕನೋರ್ವ ತನ್ನ ಎದುರಾಳಿಯ ಜೊತೆ ಸೆಣೆಸಾಡುತ್ತಿದ್ದಾನೆ. ಲಂಡನ್‌ನ ಟೊರೊಂಟೋದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸಾಮಾನ್ಯವಾಗಿ ಹಾವು ಎಂದರೆ ಹೆದರಿ ಓಡ್ ಹೋಗೋದೆ ಹೆಚ್ಚು, ಆದರೆ ಈತ ಹಾವನ್ನು ಹಗ್ಗದಂತೆ ಬಳಸಿ ಎದುರಾಳಿಯ ಜೊತೆ ಸಖತ್ ಫೈಟ್ ಮಾಡಿದ್ದು ಈ ವಿಡಿಯೋ ಭಯ ಮೂಡಿಸುತ್ತಿದೆ.
ಲಂಡನ್‌ನ ಸಿಬಿಸಿ ನ್ಯೂಸ್ ಪ್ರಕಾರ, ಮೇ.10 ರಂದು ರಾತ್ರಿ 11.50ರ ಸುಮಾರಿಗೆ ಡುಂಡಾಸ್ ಸ್ಟ್ರೀಟ್ ವೆಸ್ಟ್ & ಮ್ಯಾನಿಂಗ್ ಅವೆನ್ಯೂ ಪ್ರದೇಶದಲ್ಲಿ (Dundas Street West and Manning Avenue area) ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತಾನು ಸಾಕಿದ್ದ ಹಾವನ್ನು ಹಗ್ಗದಂತೆ ಬಳಸಿ ನಡುಬೀದಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಪೊಲೀಸ್ ವಾಹನ ಅಲ್ಲಿಗೆ ಬಂದಿದ್ದು, ಆತ ಹಾವನ್ನು ಕೆಳಗೆ ಬಿಟ್ಟಿದ್ದಾನೆ. ಹಾವು ರಸ್ತೆಯಲ್ಲಿ ಹರಿದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಶಿವಮೊಗ್ಗದ ಉರಗತಜ್ಞ ಸ್ನೇಕ್ ಕಿರಣ್‌ಗೆ ಕಚ್ಚಿದ ಕೊಳಕುಮಂಡಲ, ಪ್ರಾಣಾಪಾಯದಿಂದ ಪಾರು
ಟ್ವಿಟ್ಟರ್‌ನಲ್ಲಿ Crazy Clips (@crazyclipsonly) ಎಂಬ ಖಾತೆಯಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಟೊರೊಂಟೋದಲ್ಲಿ ಬೀದಿ ಕಾಳಗದ ವೇಳೆ ಯುವಕನೋರ್ವ ತಾನು ಸಾಕಿದ್ದ ಹಾವನ್ನೇ ಆಯುಧವಾಗಿ ಬಳಸಿದ ಎಂದು ಬರೆದು ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಂತರ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು, ವ್ಯಕ್ತಿಯೊಬ್ಬ ಹಾವನ್ನು ಬಳಸಿಕೊಂಡು ಜನರನ್ನು ಹೆದರಿಸುತ್ತಿದ್ದಾನೆ (threatening people) ಎಂದು ಕರೆ ಬಂದ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ಅಧಿಕಾರಿಗಳನ್ನು ಕಳಹಿಸಲಾಯಿತು ಎಂದು ಹೇಳಿದ್ದಾರೆ. ಅದೊಂದು ದೈಹಿಕ ಹೊಡೆದಾಟವಾಗಿದ್ದು, ವ್ಯಕ್ತಿಯೊಬ್ಬ ಮತ್ತೊಬ್ಬನ ಮೇಲೆ ದಾಳಿ ಮಾಡಲು ಹಾವನ್ನು ಬಳಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಹೀಗೆ ಹಾವನ್ನು ಹಲ್ಲೆ ಮಾಡಲು ಬಳಸಿದ ವ್ಯಕ್ತಿಯನ್ನು ಟೊರೊಂಟೊ ನಿವಾಸಿ (Toronto resident) 45 ವರ್ಷದ ಲಾರೆನಿಯೊ ಅವಿಲಾ (Laurenio Avila) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಆಯುಧದಿಂದ ಹಲ್ಲೆ ಮಾಡಿದ ಮತ್ತು ಪ್ರಾಣಿಗಳಿಗೆ ಅನಗತ್ಯ ನೋವು ಅಥವಾ ಹಿಂಸೆ ಉಂಟುಮಾಡಿದ ಆರೋಪ ಹೊರಿಸಿ ಬಂಧಿಸಲಾಗಿದ್ದು, ಮೇ 11 ರಂದು ವೀಡಿಯೊ ಲಿಂಕ್ ಮೂಲಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ನೀಡಲಾಗಿದೆ.
ಕಾರೊಳಗೆ ಅಡಗಿದ್ದ 15 ಅಡಿ ಉದ್ದದ ನಾಗರ ಹಾವು: ರಕ್ಷಿಸಿ ಕಾಡಿಗೆ ಬಿಟ್ಟ ಉರಗತಜ್ಞ
ಇತ್ತ ಈ ಹೊಡೆದಾಟದ ವೀಡಿಯೋವನ್ನು ಶೇರ್ ಆದಾಗಿನಿಂದ 14 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, 43,000 ಜನ ಲೈಕ್ಸ್ ಮಾಡಿದ್ದಾರೆ. 5,000 ಕ್ಕೂ ಹೆಚ್ಚು ಜನ ವೀಡಿಯೋ ರೀಟ್ವೀಟ್ ಮಾಡಿದ್ದಾರೆ. ಅನೇಕರು ಇದನ್ನು ಪ್ರಾಣಿಗೆ ನೀಡಿದ ಹಿಂಸೆ ಎಂದು ಕರೆದಿದ್ದಾರೆ. ಅಲ್ಲದೇ ಆತನ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮತ್ತೆ ಕೆಲವರು ತಮ್ಮ ಜೀವನದಲ್ಲಿ ಇಂತಹ ಘಟನೆಯೊಂದನ್ನು ಈ ಹಿಂದೆಂದೂ ನೋಡಿಯೂ ಇರಲಿಲ್ಲ. ಕೇಳಿಯೂ ಇಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹಾವು ಮತ್ತು ಅದರ ಯೋಗಕ್ಷೇಮದ ಬಗ್ಗೆ ಪ್ರಶ್ನಿಸಿದ್ದಾರೆ.