ಶಿವಮೊಗ್ಗದ ಉರಗತಜ್ಞ ಸ್ನೇಕ್ ಕಿರಣ್‌ಗೆ ಕಚ್ಚಿದ ಕೊಳಕುಮಂಡಲ, ಪ್ರಾಣಾಪಾಯದಿಂದ ಪಾರು

ವನ್ಯಜೀವಿಗಳ ರಕ್ಷಕ ಉರಗತಜ್ಞ ಸ್ನೇಕ್ ಕಿರಣ್‌ಗೆ ವಿಷಪೂರಿತ ಹಾವು ಕಚ್ಚಿರುವ ಘಟನೆ ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದ ಬಳಿ ನಡೆದಿದೆ.

A venomous snake bit Snake Kiran, at shivamogga today rav

ಶಿವಮೊಗ್ಗ (ಮೇ.13) ವನ್ಯಜೀವಿಗಳ ರಕ್ಷಕ ಉರಗತಜ್ಞ ಸ್ನೇಕ್ ಕಿರಣ್‌ಗೆ ವಿಷಪೂರಿತ ಹಾವು ಕಚ್ಚಿರುವ ಘಟನೆ ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದ ಬಳಿ ನಡೆದಿದೆ.

ಸಾವಿರಾರು ಹಾವುಗಳು, ವನ್ಯಜೀವಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸ್ನೇಕ್ ಕಿರಣ್(Snake kiran) ಫೇಸ್ ಕಾಲೇಜ್ ಬಳಿ ಪ್ರತ್ಯಕ್ಷವಾದ ಕೊಳಕುಮಂಡಲ ಹಾವನ್ನು ರಕ್ಷಿಸಲು ಹೋಗಿದ್ದರು. ಈ ವೆಳೆ ಕಚ್ಚಿದ ಹಾವು. ವಿಷಪೂರಿತ ಹಾವು ಕಚ್ಚಿದ ತಕ್ಷಣ ತಡಮಾಡದೆ ಸ್ನೇಕ್ ಕಿರಣ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ತಕ್ಷಣವೇ ಚಿಕಿತ್ಸೆ ಪಡೆದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಸದ್ಯ ಖಾಸಗಿ ಆಸ್ಪತ್ರೆಯತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ನೇಕ್ ಕಿರಣ್. ಈ ಹಿಂದೆ ಇಂಥ ಅನಾಹುತಗಳನ್ನು ಮೈಮೇಲೆಳೆದುಕೊಂಡರೂ ಸ್ನೇಕ್ ಕಿರಣ್ ವನ್ಯಜೀವಿ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. 

ಯಾರೀತ ಸ್ನೇಕ್ ಕಿರಣ್

ಪ್ರಾಕೃತಿಕ ಸಮತೋಲನಕ್ಕೆ ವನ್ಯಜೀವಿಗಳ ರಕ್ಷಣೆಗೆ  ಟೊಂಕ ಕಟ್ಟಿ ನಿಂತವರಲ್ಲಿ ಸ್ನೇಕ್ ಕಿರಣ್ ಒಬ್ಬರು. ಇದುವರೆಗೆ ಅಪಾಯದಲ್ಲಿದ್ದ ಸಾವಿರಾರು ಹಾವು, ವನ್ಯಜೀವಿಗಳನ್ನು ರಕ್ಷಿಸಿದ್ದಾರೆ.

'ಪ್ರಕೃತಿಯು ಮಾನವನಿಗೆ ಎಲ್ಲವನ್ನೂ ಕೊಡುತ್ತಿರುವಾಗ ನಾನೇನು ಕೊಡಲು ಸಾಧ್ಯ?' ಎಂದು ಪ್ರಶ್ನಿಸುವ ಕಿರಣ್, ವನ್ಯ ಜೀವಿಗಳನ್ನು ಅಪಾಯದಿಂದ ಪಾರು ಮಾಡುವ ಕಾಯಕದಲ್ಲೇ ಮಗ್ನರಾಗಿದ್ದಾರೆ. 

ಕಾರೊಳಗೆ ಅಡಗಿದ್ದ 15 ಅಡಿ ಉದ್ದದ ನಾಗರ ಹಾವು: ರಕ್ಷಿಸಿ ಕಾಡಿಗೆ ಬಿಟ್ಟ ಉರಗತಜ್ಞ

Latest Videos
Follow Us:
Download App:
  • android
  • ios