ಶ್ರೀಲಂಕಾ ಸೇನೆ ಆಯೋಜಿಸಿದ ಕಾರು ರೇಸ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರು ರೇಸ್ ನೋಡಲು ಅಪಾರ ಜನರು ಸೇರಿದ್ದರು. ನಿಂತಿದ್ದ ಪ್ರೇಕ್ಷಕರ ಮೇಲೆ ಹಾರು ಹರಿದಿದೆ. ಈ ವಿಡಿಯೋ ವೈರಲ್ ಆಗಿದೆ. ಈ ಘಟನೆಯಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 27 ಮಂದಿ ಗಾಯಗೊಂಡಿದ್ದಾರೆ. 

ಕೊಲೊಂಬೊ(ಏ.21) ಶ್ರೀಲಂಕಾ ಸೇನೆ ಬೃಹತ್ ಕಾರು ರೇಸ್ ಆಯೋಜಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಫಾಕ್ ಹಿಲ್‌ನಲ್ಲಿ ಕಾರು ರೇಸ್ ಆಯೋಜಿಸಿದ ಶ್ರೀಲಂಕಾ ಸೇನೆ, ಆಸಕ್ತರಿಗೆ ಉಚಿತ ಪ್ರವೇಶ ನೀಡಿತ್ತು. ಹೀಗಾಗಿ ಕಾರು ರೇಸ್ ವೀಕ್ಷಿಸಲು 10,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿದ್ದರು. ಆದರೆ ಕಾರು ರೇಸ್ ವೇಲೆ ಭೀಕರ ಅಪಘಾತ ಸಂಭವಿಸಿದೆ. ಕಾರು ನೇರವಾಗಿ ವೀಕ್ಷಕರ ಮೇಲೆ ಹರಿದಿದೆ. ಇದರ ಪರಿಣಾಮ 7 ಮಂದಿ ಮೃತಪಟ್ಟಿದ್ದಾರೆ. 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಕೊರೋನಾ ಕಾರಣದಿಂದ ಶ್ರೀಲಂಕಾ ಸೇನೆ ಪ್ರತಿ ವರ್ಷ ಆಯೋಜಿಸುತ್ತಿದ್ದ ಕಾರು ರೇಸ್ ಸ್ಥಗಿತಗೊಂಡಿತ್ತು. ಕೋವಿಡ್ ನಿಯಂತ್ರಣಕ್ಕೆ ಬಂದರೂ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿರಲಿಲ್ಲ. ಹೀಗಾಗಿ ಬರೋಬ್ಬರಿ 5 ವರ್ಷಗಳ ಬಳಿಕ ಶ್ರೀಲಂಕಾ ಸೇನೆ ಮತ್ತೆ ಕಾರು ರೇಸ್ ಆಯೋಜಿಸಿತ್ತು. ಸುದೀರ್ಘ ವರ್ಷಗಳ ಬಳಿಕ ಆಯೋಜಿಸಿದ ಕಾರು ರೇಸ್ ವೀಕ್ಷಿಸಲು ಮುಕ್ತ ಅವಕಾಶ ನೀಡಲಾಗಿತ್ತು. ಯಾವುದೇ ಶುಲ್ಕವಿಲ್ಲದ ಆಸಕ್ತರು ಈ ಕಾರು ರೇಸ್ ನೋಡಲು ಅವಕಾಶ ಮಾಡಿಕೊಡಲಾಗಿತ್ತು.

ಫ್ರೀ ಎಂಟ್ರಿ ಹಾಗೂ ಕಾರು ರೇಸ್ ಕಾರಣ 10,000ಕ್ಕೂ ಹೆಚ್ಚು ಮಂದಿ ರೇಸ್ ವೀಕ್ಷಿಸಲು ಆಗಮಿಸಿತ್ತು. ರೇಸ್ ಆರಂಭಗೊಂಡ ಕೆಲವೇ ಹೊತ್ತಲ್ಲಿ, ಎತ್ತರ ಹಾಗೂ ಸಣ್ಣ ತಿರುವಿನಲ್ಲಿ ಕಾರೊಂದು ಪಲ್ಟಿಯಾಗಿತ್ತು. ಮಾರ್ಶಲ್ಸ್ ಹಾಗೂ ಇತರ ಸಿಬ್ಬಂದಿಗಳು ಹಳದಿ ಬಾವುಟ ಹಿಡಿದು ಹಿಂದಿನಿಂದ ಬರುತ್ತಿದ್ದ ಕಾರು ಡ್ರೈವರ್ಸ್‌ಗೆ ಸೂಚನೆ ನೀಡುತ್ತಿದ್ದರು. ಇತ್ತ ಪಲ್ಟಿಯಾದ ಕಾರಿನೊಳಗಿರುವ ಚಾಲಕರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿತ್ತು. 

ಕಾರ್ ರೇಸ್ ವೇಳೆ ಭೀಕರ ಅಪಘಾತ: ಭಾರತದ ರೇಸರ್ ಕೆ.ಇ ಕುಮಾರ್ ಸಾವು

ಆದರೆ ವಿಪರೀತ ಧೂಳು ಹಾಗೂ ಅತೀ ವೇಗದ ಕಾರಣ ಕಾರು ಪಲ್ಟಿಯಾಗಿರುವುದನ್ನು ಹಿಂಬದಿಯಿಂದ ಬರುತ್ತಿದ್ದ ಚಾಲಕರು ಗಮನಿಸಲಿಲ್ಲ. ಹತ್ತಿರ ಬರುತ್ತಿದ್ದಂತೆ ಅಪಘಾತ ತಪ್ಪಿಸಲು ಕಾರು ತಿರುಗಿಸಲಾಗಿದೆ. ಇದರ ಪರಿಣಾಮ ಒಂದು ಕಾರು ನಿಂತಿದ್ದ ಪ್ರೇಕ್ಷಕರ ಮೇಲೆ ಹರಿದಿದೆ. ಅತೀ ವೇಗದಲ್ಲಿ ಕಾರು ಹಾರಿ ಬಂದು ಪ್ರೇಕ್ಷಕರಿಗೆ ಡಿಕ್ಕಿ ಹೊಡೆದಿದೆ. 

Scroll to load tweet…

ನಿಂತಿದ್ದ ಪ್ರೇಕ್ಷಕರು ಚೀರಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ. ಈ ಅಪಘಾತದ ಪರಿಣಾಮ 7 ಮಂದಿ ಮೃತಪಟ್ಟಿದ್ದಾರೆ. 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆ ದಾಖಲಿಸಲಾಗಿದೆ.

ವಿಶ್ವದ ಅತೀ ಅಪಾಯಕಾರಿ ರಸ್ತೆಗಳ ಪೈಕಿ ಶ್ರೀಲಂಕಾ ಕೂಡ ಒಂದಾಗಿದೆ. ಶ್ರೀಲಂಕಾದಲ್ಲಿ ಅತೀ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಶ್ರೀಲಂಕಾ ಸರ್ಕಾರದ ಮಾಹಿತಿ ಪ್ರಕಾರ ಪ್ರತಿ ದಿನ ಸರಾಸರಿ 8 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ.

ಇದು ಜಗತ್ತಿನ ಮೊದಲ ಹಾರುವ ಎಲೆಕ್ಟ್ರಿಕ್ ರೇಸಿಂಗ್ ಕಾರ್!