Asianet Suvarna News Asianet Suvarna News

ಕಾರ್ ರೇಸ್ ವೇಳೆ ಭೀಕರ ಅಪಘಾತ: ಭಾರತದ ರೇಸರ್ ಕೆ.ಇ ಕುಮಾರ್ ಸಾವು

 ತಮಿಳುನಾಡಿನ ಚೆನ್ನೈನಲ್ಲಿ ಕಾರ್‌ ರೇಸ್ ವೇಳೆ ನಡೆದ ಭೀಕರ ಅಪಘಾತದಲ್ಲಿ ಭಾರತದ ಹಿರಿಯ ಕಾರ್ ರೇಸರ್ 59 ವರ್ಷ ಕೆ.ಇ. ಕುಮಾರ್ ದುರಂತವಾಗಿ ಸಾವನ್ನಪ್ಪಿದ್ದಾರೆ. ಚೆನ್ನೈನ ಇರುಂಗಾಟುಕೊಟ್ಟೈನಲ್ಲಿರುವ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ  ಈ ಅನಾಹುತ ನಡೆದಿದೆ.

Veteran Car Racer KE Kumar died in accident at Car Racing Championship at Chennai akb
Author
First Published Jan 9, 2023, 3:42 PM IST

ಚೆನ್ನೈ:  ತಮಿಳುನಾಡಿನ ಚೆನ್ನೈನಲ್ಲಿ ಕಾರ್‌ ರೇಸ್ ವೇಳೆ ನಡೆದ ಭೀಕರ ಅಪಘಾತದಲ್ಲಿ ಭಾರತದ ಹಿರಿಯ ಕಾರ್ ರೇಸರ್ 59 ವರ್ಷ ಕೆ.ಇ. ಕುಮಾರ್ ದುರಂತವಾಗಿ ಸಾವನ್ನಪ್ಪಿದ್ದಾರೆ. ಚೆನ್ನೈನ ಇರುಂಗಾಟುಕೊಟ್ಟೈನಲ್ಲಿರುವ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ  ಈ ಅನಾಹುತ ನಡೆದಿದೆ.   ಈ ಕಾರು ರೇಸ್‌ನ ಲೈವ್ ವಿಡಿಯೋಗಳು ಯುಟ್ಯೂಬ್‌ನಲ್ಲಿದ್ದು, ಅಪಘಾತದ ಭೀಕರ ದೃಶ್ಯಗಳನ್ನು ಇದು ತೋರಿಸುತ್ತಿದೆ.  ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಕೆಇ ಕುಮಾರ್ ಅವರಿದ್ದ ಕಾರು ಅಪಘಾತಕ್ಕೊಳಗಾಗಿದೆ. 

ಯೂಟ್ಯೂಬ್‌ನಲ್ಲಿ (Youtube) ಹರಿದಾಡುತ್ತಿರುವ ವಿಡಿಯೋದಲ್ಲಿ ವೇಗವಾಗಿ ಬರುತ್ತಿರುವ ಕುಮಾರ್ (K E Kumar) ಅವರ ಕಾರು ಎಡಭಾಗದಿಂದ  ಬರುತ್ತಿದ್ದ ಮತ್ತೊಂದು ಕಾರಿನ ಮುಂಭಾಗದಲ್ಲಿ ಅಡ್ಡಕ್ಕೆ ಪಾಸಾಗಿ ಟ್ರಾಕ್‌ನಿಂದ ಕೆಳಗಿಳಿದು ಪಲ್ಟಿಯಾಗಿದ್ದು, ಕಾಣಿಸುತ್ತಿದೆ.  ಈ ಕಾರಿನ ಹಿಂದೆ ಬರುತ್ತಿದ್ದ ಉಳಿದ ಕಾರುಗಳು ಅಪಘಾತದಿಂದ ಕ್ಷಣದಲ್ಲಿ  ಪಾರಾಗಿವೆ.  ಟ್ರಾಕ್‌ನಿಂದ ಹೊರಗಿಳಿದ ಕಾರು ಎರಡು ಪಲ್ಟಿಯಾಗಿ ರಸ್ತೆ ಪಕ್ಕದ ಕಂಬಗಳಿಗೆ ತಾಗಿ ನಿಲ್ಲುತ್ತದೆ.  ಇದಾದ ಬಳಿಕ ಕಾರಿನ ಇತರ ಭಾಗಗಳು ಕಳಚಿ ಬೀಳುತ್ತವೆ. ಕೂಡಲೇ ಈ ರೇಸ್ ಅನ್ನು ನಿಲ್ಲಿಸಲಾಗಿದೆ. 

Formula 1 ರೇಸ್‌ನತ್ತ ಭಾರತದ ಜೆಹಾನ್‌ ದಾರುವಾಲಾ

ಅಪಘಾತದಿಂದ ಕಾರಿನ (Car Accident) ಒಳಗೆ ಸಿಲುಕಿಕೊಂಡಿದ್ದ ಕೆಇ ಕುಮಾರ್ ಅವರನ್ನು ಕೂಡಲೇ ಕಾರಿನ ಅವಶೇಷಗಳಿಂದ ಹೊರತೆಗೆದು ರೇಸ್ ಟ್ರ್ಯಾಕ್‌ನ ವೈದ್ಯಕೀಯ ಕೇಂದ್ರದಲ್ಲಿ ಪ್ರಾಥಮಿಕ ತಪಾಸಣೆ ನಡೆಸಲಾಯಿತು. ನಂತರ ಕೂಡಲೇ ಆಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.  ಆದರೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. 

ಘಟನೆಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಕುಮಾರ್ ಒಬ್ಬ ಅನುಭವಿ ರೇಸರ್ ಆಗಿದ್ದರು. ನಾನು ಅವರನ್ನು ಹಲವಾರು ದಶಕಗಳಿಂದ ಸ್ನೇಹಿತ ಮತ್ತು ಪ್ರತಿಸ್ಪರ್ಧಿಯಾಗಿ ನೋಡಿದ್ದೇನೆ . MMSC ಮತ್ತು ಇಡೀ ರೇಸಿಂಗ್ ತಂಡವೂ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತದೆ ಮತ್ತು ಅವರ ಕುಟುಂಬದ ಜೊತೆಗಿರುತ್ತದೆ ಎಂದು ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌  ಅಧ್ಯಕ್ಷ ವಿಕ್ಕಿ ಚಾಂಧೋಕ್ (Vicky Chandhok) ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,  ನಿರ್ಲಕ್ಷ್ಯದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಕ್ರೀಡೆಯ ರಾಷ್ಟ್ರೀಯ ಆಡಳಿತ ಮಂಡಳಿ ಹಾಗೂ ರೇಸ್ ಆಯೋಜಿಸಿದವರು ಕೂಡ ತನಿಖೆ ನಡೆಸಿದ್ದಾರೆ. 

Formula 1 ರೇಸ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿರುವ ಯುವ ರೇಸರ್ ಜೆಹಾನ್ ದಾರುವಾಲಾ

Follow Us:
Download App:
  • android
  • ios