ಜಗತ್ತಿನ ಜ್ವಲಂತ ಸಮಸ್ಯೆಗಳ ವಿರುದ್ಧ 6ನೇ ಶತಮಾನದಲ್ಲೇ ಧ್ವನಿ ಎತ್ತಿದವರು ಪ್ರವಾದಿ ಮುಹಮ್ಮದರು

ಆಧುನಿಕ ಜಗತ್ತಿನ ಜ್ವಲಂತ ಸಮಸ್ಯೆಗಳಾದ ಅಸಮಾನತೆ, ಸ್ತ್ರೀ ಶೋಷಣೆ, ಮಧ್ಯಪಾನ, ಬಡ್ಡಿ ಮುಂತಾದ ಎಲ್ಲ ಕೆಡುಕುಗಳ ಮುಕ್ತ ಸಮಾಜವನ್ನಾಗಿ ಮಾಡಿ ತೋರಿಸಿದ ಪ್ರವಾದಿ ಮುಹಮ್ಮದ್ ಈಗಿನ ಜಗತ್ತಿನಲ್ಲಿ ಚರ್ಚಿಸಲ್ಪಡುತ್ತಿರುವ ಸಮಸ್ಯೆಗಳ ವಿರುದ್ಧ 6ನೇ ಶತಮಾನದಲ್ಲಿಯೇ ಧ್ವನಿ ಎತ್ತಿದವರು ಪ್ರವಾದಿಗಳು ಚಿಂತಕ, ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಂ. ದತ್ತಾತ್ರೇಯ ಹೇಳಿದರು.

Seerat pravachana of Prophet Mohammad in Terikere at chikkamagaluru rav

ತರೀಕೆರೆ (ಅ.16): ಆಧುನಿಕ ಜಗತ್ತಿನ ಜ್ವಲಂತ ಸಮಸ್ಯೆಗಳಾದ ಅಸಮಾನತೆ, ಸ್ತ್ರೀ ಶೋಷಣೆ, ಮಧ್ಯಪಾನ, ಬಡ್ಡಿ ಮುಂತಾದ ಎಲ್ಲ ಕೆಡುಕುಗಳ ಮುಕ್ತ ಸಮಾಜವನ್ನಾಗಿ ಮಾಡಿ ತೋರಿಸಿದ ಪ್ರವಾದಿ ಮುಹಮ್ಮದ್ ಈಗಿನ ಜಗತ್ತಿನಲ್ಲಿ ಚರ್ಚಿಸಲ್ಪಡುತ್ತಿರುವ ಸಮಸ್ಯೆಗಳ ವಿರುದ್ಧ 6ನೇ ಶತಮಾನದಲ್ಲಿಯೇ ಧ್ವನಿ ಎತ್ತಿದವರು ಪ್ರವಾದಿಗಳು ಚಿಂತಕ, ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಂ. ದತ್ತಾತ್ರೇಯ ಹೇಳಿದರು.

ಪಟ್ಟಣದ ಮಸ್ಟಿವ್‌ .ಎ.ಮೆರಾಜ್, ಕೋಡಿಕ್ಯಾಂಪ್ ನ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ನಡೆದ ಪ್ರವಾದಿ ಮುಹಮ್ಮದ್ ರ ಸೀರತ್ ಪ್ರವಚನ ಕಾರ್ಯ ಕ್ರಮದಲ್ಲಿ ಮಾತನಾಡಿ, ಸಮಾನತೆ ಬಗ್ಗೆ ಮಾತನಾಡುವ ಇಂದಿನ ಮುಂದುವರಿದ ನಾಗರಿಕ ಸಮಾಜದಲ್ಲಿ ಉದರದಲ್ಲಿರುವ ಮಗು ಹೆಣ್ಣು ಎಂದು ತಿಳಿದೊಡನೇ ಅದನ್ನು ಹುಟ್ಟುವ ಮುನ್ನವೇ ಹೊಸಕಿ ಹಾಕಲಾಗುತ್ತಿದೆ. ಜೀವಂತ ಹೆಣ್ಣುಮಗುವನ್ನು ಹೂಳುತ್ತಿದ್ದಂತಹ ಅನಾಗರಿಕ, ಕ್ರೂರ ಸಮಾಜ ವನ್ನು ಪರಿವರ್ತಿಸಿ ಹೆಣ್ಣಿಗೆ ಅತ್ಯುನ್ನತ ಹಾಗೂ ಗೌರವದ ಸ್ಥಾನ ನೀಡಿದವರು ಪ್ರವಾದಿ ಮುಹಮ್ಮದರು ಎ೦ದು ತಿಳಿಸಿದರು.

ಮಾನ್ವಿ: ಸ್ವ-ಧರ್ಮದ ಜತೆಗೆ ಪರಧರ್ಮ ಗೌರವಿಸಿ -ಮೌಲಾನಾ ಖಾದ್ರಿ

ಪ್ರವಚನಕಾರ ರಿಯಾಜ್ ಅಹಮದ್‌ ರೋಡ್ ಮಾತನಾಡಿ ಜಗತ್ತಿನ ಎಲ್ಲ  ಮಾನವರ ಮಾರ್ಗದರ್ಶನಕ್ಕಾಗಿ ಆಗಮಿಸಿದವರು ಪ್ರವಾದಿ ಮುಹಮ್ಮದರು, ಹಾಗಾಗಿ ಎಲ್ಲ ಜನಾಂಗದವರೂ ಅವರ ಸಂದೇಶ ಅರಿಯಲು ಪ್ರಯತ್ನಿಸಬೇಕು. ಜಗತ್ತಿನ ಎಲ್ಲ ಮಾನವರೂ ಏಕೋದರ ಸಹೋದರರು, ಜಾತಿ, ಧರ್ಮ, ಬಣ್ಣ ಬಣ್ಣದ ಆಧಾರದಲ್ಲಿ ಯಾರೂ ಮೇಲೂ, ಕೀಳೂ ಅಲ್ಲ ಎಂದು ಸಾರಿದರು. ಜಗತ್ತಿನ ಎಲ್ಲಾ ಮಾನವರು ಬಯಸುವ ಶಾಂತಿ, ಸಮಾಧಾನ, ನೆಮ್ಮದಿ ಮನಶಾಂತಿ ದಯಪಾಲಿಸುವುದೇ ಧರ್ಮಗಳ ಕೆಲಸ. ಯಾರು ಇನ್ನೊಬ್ಬರನ್ನು ದ್ವೇಷಿಸಲು ಕಲಿಸುತ್ತಾನೋ ಅವನು ಧಾರ್ಮಿಕ ವ್ಯಕ್ತಿಯಾಗಲಿಕ್ಕೆ ಸಾಧ್ಯವಿಲ್ಲ ಎಂಬುದು ಸಂದೇಶದ ತಿರುಳು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಗೇಶ್ ಮಾಸ್ತರ್ 'ನನ್ನ ಅರಿವಿನ ಪ್ರವಾದಿ' ಪುಸ್ತಕ ಬಿಡುಗಡೆ ಮಾಡಲಾಯಿತು. 'ಸಮಾಜದ ಸಮಾನತೆಯ ಶಿಲ್ಪಿ ಪ್ರವಾದಿ ಮುಹಮ್ಮದ್ ' ವಿಷಯದ ಕುರಿತು ನಡೆದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆಯಲ್ಲಿ ತರೀಕೆರೆ ಸಾಹಿತಿ ಟಿ. ಎಸ್. ಮೋಹನ್ ಕುಮಾರ್‌ಪ್ರಥಮ ಬಹುಮಾನ ಗಳಿಸಿದರು, ಸೊಕ್ಕೆ ಸರ್ಕಾರಿ ಪ್ರೌಢ ಶಾಲೆ ಆರ್. ಅಕಿಲ್ ದ್ವಿತೀಯ ಹಾಗೂ ಅಜ್ಜಂಪುರದ ಸವಿತ ಶಿವಮೂರ್ತಿ ತೃತೀಯ ಬಹುಮಾನ ಗಳಿಸಿದರು. 

'ಮಂಗಳಾದೇವಿ'ಯಲ್ಲೂ ಧರ್ಮ ದಂಗಲ್ ಸದ್ದು: ಮುಸ್ಲಿಮರ ವ್ಯಾಪಾರ ತಡೆದ್ರೆ ತಕರಾರು ತೆಗೆಯುತ್ತೇವೆ ಎಂದ ಸಮಿತಿ!

ಮುಹಮ್ಮದ್ ಅಸದ್ ರವರ ಪಠನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ರಿಜ್ವಾನ್ ಖಾಲಿದ್, ಆದಿಲ್ ಪಾಶ ಜಮಾಅತೆ ಇಸ್ಲಾಮಿ ಹಿಂದ್‌ ತರೀಕೆರೆ ಶೇಕ್ ಜಾವೀದ್ ಇದ್ದರು.

Latest Videos
Follow Us:
Download App:
  • android
  • ios