ಯುರೋಪ್‌ನಲ್ಲಿ ಕ್ರೈಸ್ತ ಧರ್ಮದ ಮೇಲಿನ ನಂಬಿಕೆ ಕ್ಷೀಣ, ನೈಟ್‌ಕ್ಲಬ್‌ ಆಗಿ ಬದಲಾಗುತ್ತಿದೆ ಚರ್ಚ್!

ಯುರೋಪ್‌ನಲ್ಲಿರುವ ಹಲವಾರು ಚರ್ಚುಗಳನ್ನು  ರೆಸ್ಟೋರೆಂಟ್ , ನೈಟ್‌ಕ್ಲಬ್‌ಗಳಾಗಿ ಬದಲಾಗುತ್ತಿವೆ. ಬೆಲ್ಜಿಯಂನಲ್ಲಿರುವ ಹಲವು ಪ್ರಮುಖ ಚರ್ಚ್‌ಗಳು ಈಗ ಗುರುತೇ ಸಿಗದಂತೆ ಬದಲಾವಣೆಯಾಗಿದೆ.

Europe and Belgian ancient churches being converted into hotels night clubs and cafes gow

ಯುರೋಪ್‌ನಲ್ಲಿರುವ ಹಲವಾರು ಚರ್ಚುಗಳನ್ನು  ರೆಸ್ಟೋರೆಂಟ್ , ನೈಟ್‌ಕ್ಲಬ್‌ಗಳಾಗಿ ಬದಲಾಗುತ್ತಿವೆ.  ಬೆಲ್ಜಿಯಂನಲ್ಲಿರುವ ಹಲವು ಪ್ರಮುಖ ಚರ್ಚ್‌ಗಳನ್ನು ಈಗ  ಹೋಟೆಲ್‌ಗಳು, ಕೆಫೆಗಳು ಮತ್ತು ನೈಟ್‌ಕ್ಲಬ್‌ಗಳಾಗಿ ಪರಿವರ್ತಿಸಲಾಗುತ್ತಿದೆ. ಯುರೋಪ್‌ ನ ಒಂದು ಮೂಲೆಯಲ್ಲಿ ಸೇಕ್ರೆಡ್ ಹಾರ್ಟ್ ಚರ್ಚ್ ಇದೆ. ಬೆಲ್ಜಿಯಂನವರು ಇಲ್ಲಿಗೆ ಬಂದು ತಮ್ಮ ಪಾಪಗಳನ್ನು ಒಪ್ಪಿಕೊಂಡು ಪ್ರಾರ್ಥಿಸಿ ಪರಿಹಾರ ಮಾಡಿಕೊಳ್ಳಲು ಬರುತ್ತಿದ್ದರು. ಆದರೆ ಈಗ ಅದೇ ಸ್ಥಳವನ್ನು ಕೆಫೆಯಾಗಿ ಪರಿವರ್ತಿಸಲಾಗಿದೆ. ಅದೇ ರೀತಿ ಫ್ರಾನ್ಸಿಸ್ಕನ್ ಚರ್ಚ್ ಅನ್ನು ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಇಲ್ಲಿ ಇತ್ತೀಚೆಗೆ ಸಂಗೀತ ತಾರೆ ಸ್ಟ್ರೋಮ್ ತನ್ನ ಮದುವೆಯ ನಂತರ ಮೊದಲ ರಾತ್ರಿಯನ್ನು ಕಳೆದರು.

ಕ್ರಿಶ್ಚಿಯನ್ ಧರ್ಮದ ಹೆಚ್ಚಿನ ಜನರು ಬೆಲ್ಜಿಯಂನಲ್ಲಿ ವಾಸಿಸುತ್ತಿದ್ದಾರೆ. ಒಂದು ಕಾಲದಲ್ಲಿ ಅಲ್ಲಿ ವಾಸಿಸುತ್ತಿದ್ದ 83% ಜನರು ಕ್ರಿಶ್ಚಿಯನ್ನರಾಗಿದ್ದರು. ಹೀಗಾಗಿ  ಬೆಲ್ಜಿಯಂನ 300 ಪಟ್ಟಣಗಳಲ್ಲಿ ಅನೇಕ ಚರ್ಚುಗಳು, ಕ್ಯಾಥೆಡ್ರಲ್ಗಳು ಮತ್ತು ಪ್ರಾರ್ಥನಾ ಮಂದಿರಗಳ ನಿರ್ಮಾಣಕ್ಕೆ ನಾಂದಿ ಹಾಡಿತು. ಆದರೆ ಈಗ ಕಾಲ ಕಳೆದಂತೆ ಧರ್ಮವನ್ನು ಅನುಸರಿಸುವವರ ಸಂಖ್ಯೆ ಕಡಿಮೆಯಾಗಿದೆ ಮತ್ತು ಕ್ರಿಶ್ಚಿಯನ್ನರು ಎಂದು ಕರೆದುಕೊಳ್ಳುವವರು 55% ಜನರು ಮಾತ್ರ ಉಳಿದುಕೊಂಡಿದ್ದಾರೆ. ಅವರಲ್ಲಿ 10% ಜನ ಮಾತ್ರ ನಿಯಮಿತವಾಗಿ ಚರ್ಚ್‌ಗೆ ಹೋಗುತ್ತಾರೆ. ಮಿಕ್ಕವರು ಚರ್ಚ್ ಕಡೆ ಕಡಿಮೆ ಹೋಗುತ್ತಾರೆ.

ಹಾಸನ ಆಸ್ಪತ್ರೆಯ ನವಜಾತ ಶಿಶು ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್, ತಪ್ಪಿದ ಬಹುದೊಡ್ಡ

ವರದಿಗಳ ಪ್ರಕಾರ, ಧರ್ಮದಲ್ಲಿನ ನಂಬಿಕೆ ಕ್ಷೀಣಿಸುತ್ತಿರುವ ಕಾರಣ ಕೆಲ ಕೆಲವಯ ಜನರು ನಿಯಮಿತವಾಗಿ ಚರ್ಚ್‌ಗೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಚರ್ಚುಗಳ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಈ ಕಾರಣದಿಂದಲೇ ಚರ್ಚ್ , ಪ್ರಾರ್ಥನಾ ಮಂದಿರದ ಕಟ್ಟಡಗಳನ್ನು ಬೇರೆ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಅದರಂತೆ ಹೋಟೆಲ್‌, ಸೂಪರ್‌ ಮಾರ್ಕೆಟ್‌ ಇತ್ಯಾದಿಯಾಗಿ ಪರಿವರ್ತನೆಗೊಂಡಿವೆ. ಈಗ  ಈ ರೀತಿಯ ಬದಲಾವಣೆಗಳನ್ನು ಕೆಲವರು ವಿರೋಧಿಸುತ್ತಿದ್ದಾರೆ.   

ಚರ್ಚುಗಳಿಗೆ ನಾನಾ ರೂಪ ಕೊಡುವುದರಲ್ಲಿ ನಿರತರಾಗಿರುವ ಮೇಯರ್ ಸಂಬಾರ್ಟ್ ಕೂಡ ಸ್ವತಃ ಹೋಟೆಲ್ ಗಳಿಗೆ ಬಂದು ಮಲಗುತ್ತಾರೆ, ಸಂಸಾರ ಮಾಡುತ್ತಾರೆ, ಹಾಗಾದರೆ ಚರ್ಚ್ ಗಳನ್ನು ಹೋಟೆಲ್ ಗಳನ್ನಾಗಿ ಪರಿವರ್ತಿಸಬೇಕು ಎಂದು ಹೇಳುವುದು ಸರಿಯೇ? ಅಲ್ಲಿನ ಬಿಷಪ್ ಕೂಡ ಇಂತಹ ಬದಲಾವಣೆಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿನ ಜೀವನಕ್ಕೆ ಮರಳುವುದು ಸಾಧ್ಯವಿಲ್ಲ ಆದರೆ ಪವಿತ್ರ ಸ್ಥಳಗಳನ್ನು ಬಟ್ಟೆ ಅಂಗಡಿಗಳಿಂದ ನೈಟ್‌ಕ್ಲಬ್‌ಗಳಾಗಿ ಪರಿವರ್ತಿಸಲಾಗುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ನಾನು ಕಾಂಗ್ರೆಸ್‌ಗೆ ಹೋಗ್ತಿನಿ ಅಂತಾ ಯಾವನೋ ಮಠ್ಠಾಳ ಟಿ.ವಿ.ಗೆ ಹಾಕಿಸ್ತಾನೆ:

ಇವುಗಳಲ್ಲಿ ಒಂದು ಪ್ರಸಿದ್ಧ ಚರ್ಚ್ ಇಂದು ಬೆಲ್ಜಿಯಂನಲ್ಲಿ ಪ್ರಸಿದ್ಧ  ಹೋಟೆಲ್  ಆಗಿ ಮಾರ್ಪಟ್ಟಿದೆ. ಅದರ ಹೆಸರು ಮಾರ್ಟಿನ್ ಪಾಟರ್‌ಶಾಫ್ ಹೋಟೆಲ್. ಈ ಹೋಟೆಲ್‌ನ ಕಟ್ಟಡವು ಮೊದಲು ಚರ್ಚ್ ಆಗಿದ್ದು ನಂತರ ಅದನ್ನು ಹೋಟೆಲ್ ಆಗಿ ಪರಿವರ್ತಿಸಲಾಯಿತು. ಅದರ ಕಿಟಕಿಯಿಂದ ಹೊರಗೆ ನೋಡಿದರೆ ಮ್ಯೂಸಿಯಂ ಕಾಣುತ್ತಿದೆಯೇನೋ ಎನಿಸುತ್ತದೆ. ಅದರ ವಿನ್ಯಾಸ ಮತ್ತು ಸೌಂದರ್ಯವನ್ನು ನೋಡಿ, ಜನರು ಇದನ್ನು ಮೆಚೆಲೆನ್ ಹೃದಯ ಎಂದೂ ಕರೆಯುತ್ತಾರೆ.

ಜಗತ್ತಿನ ಅನೇಕ ಕ್ರೈಸ್ತ ದೇಶಗಳಲ್ಲಿ ಕ್ರೈಸ್ತರಲ್ಲಿ ಧರ್ಮದ ಮೇಲಿನ ಶ್ರದ್ಧೆಯು ಕ್ಷೀಣಿಸುತ್ತಿರುವುದರಿಂದ ಚರ್ಚ್ ಗಳು ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ. ಇಂತಹ ಸ್ಥಿತಿಯ ಮಧ್ಯೆ ಭಾರತದಲ್ಲಿ ಕ್ರೈಸ್ತ ಮತಾಂತರ ಆರೋಪ ಹೆಚ್ಚುತ್ತಲೇ ಇದೆ.

Latest Videos
Follow Us:
Download App:
  • android
  • ios