ಹಾಸನ ಆಸ್ಪತ್ರೆಯ ನವಜಾತ ಶಿಶು ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್, ತಪ್ಪಿದ ಬಹುದೊಡ್ಡ ದುರಂತ!

ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ  ಭಾರಿ ಅನಾಹುತ ತಪ್ಪಿದೆ.

short circuit in newborn baby NICU at Hassan Institute of Medical Sciences news gow

ಹಾಸನ(ಜು.2): ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ  ಭಾರಿ ಅನಾಹುತ ತಪ್ಪಿದೆ. ಘಟನೆ ನಡೆದಾಗ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯ್ತು. ಕೂಡಲೇ ಐಸಿಯುನಲ್ಲಿದ್ದ 24 ನವಜಾತ ಶಿಶುಗಳು ಬೇರೆಡೆಗೆ ಸಿಬ್ಬಂದಿ ಶಿಫ್ಟ್ ಮಾಡಿದ್ದಾರೆ. ಕಿಟಕಿ ಗಾಜುಗಳನ್ನು ಒಡೆದು‌ ಮಕ್ಕಳನ್ನುಆಸ್ಪತ್ರೆ ಸಿಬ್ಬಂದಿ ರಕ್ಷಿಸಿದರು. 

ಮಟ ಮಟ ಮಧ್ಯಾಹ್ನ ಒಂಟಿ ಮಹಿಳೆ ಕೊಲೆ: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಕೊಲೆಗಾರ..!

ಶಾರ್ಟ್ ಸರ್ಕ್ಯೂಟ್ ಘಟನೆ ನಡೆದ ತಕ್ಷಣ ಐಸಿಯು ಕೋಣೆಯೊಳೆಗೆ ಹೊಗೆ ತುಂಬಿಕೊಂಡಿತ್ತು. ಅಷ್ಟರೊಳಗೆ ನವಜಾತ ಶಿಶುಗಳನ್ನು ಆಸ್ಪತ್ರೆ ಸಿಬ್ಬಂದಿ ರಕ್ಷಿಸಿದರು. ಹೀಗಾಗಿ ನವಜಾತ ಶಿಶುಗಳ‌ ಪೋಷಕರು ನಿಟ್ಟುಸಿರು ಬಿಟ್ಟರು. 

ಎಲ್ಲಾ 24 ನವಜಾತ ಶಿಶುಗಳು ಸುರಕ್ಷಿತವಾಗಿದ್ದು, ಐಸಿಯುನ ಎಸಿಯ ವಿದ್ಯುತ್ ಪರಿವರ್ತಕ ಬ್ಲಾಸ್ಟ್ ಆಗಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.  ಆಸ್ಪತ್ರೆಯ ಸಿಬ್ಬಂದಿ ಗಳ ಸಮಯ ಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ಹಿಮ್ಸ್‌ನ ನಿರ್ದೇಶಕ ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ‌ ಕೃಷ್ಣಮೂರ್ತಿ ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾನು ಕಾಂಗ್ರೆಸ್‌ಗೆ ಹೋಗ್ತಿನಿ ಅಂತಾ ಯಾವನೋ ಮಠ್ಠಾಳ ಟಿ.ವಿ.ಗೆ ಹಾಕಿಸ್ತಾನೆ:

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ವಿಚಾರವಾಗಿ ಮಾತನಾಡಿದ ಮಕ್ಕಳ ತಜ್ಞ ಡಾ.ಮನುಪ್ರಕಾಶ್, ಎಸಿಯ ವಿದ್ಯುತ್ ಪರಿವರ್ತಕ ಬ್ಲಾಸ್ಟ್ ಆಗಿ ಹೊಗೆ ತುಂಬಿಕೊಂಡಿತ್ತು. ಕೂನೆಗೆ ಎಚ್ಚೆತ್ತು ಮಕ್ಕಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಯ್ತು. ಐಸಿಯುನಲ್ಲಿ ತುಂಬಿಕೊಂಡಿದ್ದ ಹೊಗೆ ಯೆಲ್ಲಾ ಕ್ಲಿಯರ್ ಆಗಿದೆ. ಮಕ್ಕಳನ್ನು ಮರಳಿ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಎಲ್ಲಾ ಮಕ್ಕಳು ಸುರಕ್ಷಿತವಾಗಿ ಇದ್ದಾರೆ. ಘಟನೆಯಿಂದ ಯಾವುದೇ ಮಕ್ಕಳ ಅರೋಗ್ಯದ ಮೇಲೆ ಪರಿಣಾಮ ಆಗಿಲ್ಲ. ಎಲ್ಲಾ ನವಜಾತ ಶಿಶುಗಳನ್ನ ಪರೀಕ್ಷೆ ನಡೆಸಿ ಪೋಷಕರಿಗೆ ತೋರಿಸಲಾಗಿದೆ. ಯಾವ ಪೋಷಕರೂ ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios