ನಾನು ಕಾಂಗ್ರೆಸ್‌ಗೆ ಹೋಗ್ತಿನಿ ಅಂತಾ ಯಾವನೋ ಮಠ್ಠಾಳ ಟಿ.ವಿ.ಗೆ ಹಾಕಿಸ್ತಾನೆ: ಮಾಧುಸ್ವಾಮಿ ಗರಂ

ನಾನು ಕಾಂಗ್ರೆಸ್ ಗೆ ಹೋಗ್ತಿನಿ ಅಂತಾ ಯಾವನೋ ಮಠ್ಠಾಳ  ಟಿ.ವಿ.ಗೆ ಹಾಕಿಸ್ತಾನೆ.  ಇಡೀ ಜೀವಮಾನದಲ್ಲಿ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದೋನು ನಾನು ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಗರಂ ಆಗಿದ್ದಾರೆ.

Never joins congress classification by BJP leader JC Madhuswamy Karnataka news gow

ತುಮಕೂರು (ಜು.2): ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾಂಗ್ರೆಸ್ ಸೇರ್ತಾರೆ ಎಂಬ ವದಂತಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ ಮಾತ್ರವಲ್ಲ ಗರಂ ಆಗಿದ್ದಾರೆ. ನಾನು ಕಾಂಗ್ರೆಸ್ ಗೆ ಹೋಗ್ತಿನಿ ಅಂತಾ ಯಾವನೋ ಮಠ್ಠಾಳ  ಟಿ.ವಿ.ಗೆ ಹಾಕಿಸ್ತಾನೆ. ನಾನೇ ಕಾಂಗ್ರೆಸ್ ಸಿದ್ದಾಂತ ವಿರೋಧ ಮಾಡಿ ಆ ಪಕ್ಷಕ್ಕೆ ಸೇರ್ತಿನಾ? ಇಡೀ ಜೀವಮಾನದಲ್ಲಿ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದೋನು ನಾನು. ನನಗೇನ್ರಿ ಬಂದಿದೆ ಅಂತಹ ದುಃಸ್ಥಿತಿ ಕಾಂಗ್ರೆಸ್ ಗೆ ಹೋಗೋದು. ಜೆ.ಪಿ.ಮೂಮೆಂಟಲ್ಲಿ ಹೋರಾಟ ಮಾಡಿದವರು ನಾವು. ನಾನು ಕಾಂಗ್ರೆಸ್ ಗೆ ಹೋಗ್ತಿನಾ? ನಾನು ಕಾಂಗ್ರೆಸ್ ಗೆ ಹೋಗ್ತಿನಿ ಅಂತಾ ನಮ್ಮ ಕಾರ್ಯಕರ್ತರು ತಲೆ ಕೆಡಿಸಿಕೊಂಡಿದ್ರು ಎಂದು ಚಿಕ್ಕನಾಯಕನಹಳ್ಳಿ ನಡೆದ ಸಭೆಯಲ್ಲಿ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

ಹಾಸನ ಆಸ್ಪತ್ರೆಯ ನವಜಾತ ಶಿಶು ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್, ತಪ್ಪಿದ ಬಹುದೊಡ್ಡ

ಬಿಜೆಪಿಯ ಅತ್ಯುತ್ತಮ ವಾಕ್ಪಟುಗಳಲ್ಲಿ ಒಬ್ಬರಾಗಿರುವ ಸಚಿವ ಜೆ.ಸಿ. ಮಾಧುಸ್ವಾಮಿ ಕಾಂಗ್ರೆಸ್ ಸೇರ್ತಾರೆ ಅಂತ ಇತ್ತೀಚೆಗೆ ನಡೆದ ಚುನಾವಣೆ ಸಮಯದಿಂದಲೂ ಮಾತುಗಳು ಕೇಳಿ ಬರುತ್ತಿದೆ. ಇವೆಲ್ಲದಕ್ಕೂ ಮಾಧುಸ್ವಾಮಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ   ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಸುರೇಶಬಾಬು ವಿರುದ್ಧ ಬಿಜೆಪಿಯ ಮಾಧುಸ್ವಾಮಿ ಸೋಲು ಕಂಡಿದ್ದರು.

ರಾಜಕೀಯ ದ್ವೇಷ, ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ ಟಿಎಂಸಿ ನಾಯಕನ ಹತ್ಯೆ 

 

Latest Videos
Follow Us:
Download App:
  • android
  • ios