Asianet Suvarna News Asianet Suvarna News

Meme on Parag Agrawal: ಪರಾಗ್ ಅಗರ್‌ವಾಲ್ ಮೀಮ್ ವೈರಲ್‌ : ಎಲೋನ್‌‌ ಮಸ್ಕ್ ಟ್ವೀಟ್ ಹಿಂದಿನ ಮರ್ಮವೇನು?

*ಟ್ವೀಟರ್‌ ಸಿಇಓ ಪರಾಗ್‌ ಅಗರವಾಲ್‌ ಮೀಮ್‌
*ಫೋಟೊಶಾಪ್‌ ಮಾಡಿದ ಚಿತ್ರ ಹಂಚಿಕೊಂಡ ಎಲೋನ್‌
*ಎಲೋನ್ ಮಸ್ಕ್ ಟ್ವೀಟ್ ಮರ್ಮವೇನು?‌ ಇಲ್ಲಿದೆ ಡಿಟೇಲ್ಸ

Elon Musk Took A Dig At Twitter CEO Parag Agrawal With This Meme mnj
Author
Bengaluru, First Published Dec 3, 2021, 10:05 AM IST
  • Facebook
  • Twitter
  • Whatsapp

ಯುಎಸ್‌ಎ(ಡಿ. 03): ಅಮೆರಿಕ ಮೂಲದ ಚುಟುಕು ಸಾಮಾಜಿಕ ಜಾಲತಾಣ ಟ್ವೀಟರ್‌ನ ನೂತನ ಸಿಇಒ (India-born Parag Agrawal) ಆಗಿ ಭಾರತೀಯ ಮೂಲದ ಪರಾಗ್‌ ಅಗರ್‌ವಾಲ್‌ ಆಯ್ಕೆಯಾಗಿದ್ದಾರೆ. ಟ್ವಿಟರ್‌ನ ಸಂಸ್ಥಾಪಕ ಮತ್ತು ಹಾಲಿ ಸಿಇಒ ಜಾಕ್‌ ಡೋರ್ಸ(Twitter CEO Parag Agarwal) ಪದತ್ಯಾಗದ ಹಿನ್ನೆಲೆಯಲ್ಲಿ ಪರಾಗ್‌ ಅವರನ್ನು ಹೊಸ ಹುದ್ದೆಗೆ ನೇಮಿಸಲಾಗಿದೆ. ಹಾಲಿ ಟ್ವಿಟರ್‌ನ ಸಿಟಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಾಗ್‌ ಟ್ವೀಟರ್‌ ಸಿಇಓ ಆಗಿ ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ 

ಏತನ್ಮಧ್ಯೆ ಯುಎಸ್ ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತೀಯ ಪ್ರತಿಭೆಗಳ ಕೊಡುಗೆಗಳ ಚರ್ಚೆ ಜೋರಾಗಿದೆ. ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ (Elon Musk) ಕೂಡ ಈಗ ಪರಾಗ್‌ ಬಗ್ಗೆ ಟ್ವೀಟ್‌ ಮಾಡಿದ್ದೂ ಅವರು ಟ್ವಿಟರ್ ಸಿಇಒ ಪರಾಗ್ ಅಗರವಾಲ್‌ ಅವರ ಫೋಟೋಶಾಪ್ (Photoshop) ಮಾಡಿದ ಮೀಮ್ (Meme) ಹಂಚಿಕೊಂಡಿದ್ದಾರೆ. ಮಾಜಿ ಯುಎಸ್‌ಎಸ್‌ಆರ್ (USSR) ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ (Joseph stalin) ಅವರ ಮುಖದ ಮೇಲೆ  ಅಗರವಾಲ್ ಅವರ ಮುಖವನ್ನು ಫೋಟೋಶಾಪ್ ಮಾಡಿರುವ ಮೀಮ್ ಮಸ್ಕ್‌ ಹಂಚಿಕೊಂಡಿದ್ದಾರೆ.  ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮುಕ್ತ ವಾಕ್ಚಾತುರ್ಯದ (Free Speech) ಕುರಿತು ಭಾರತೀಯ ಮೂಲದ  ಪರಾಗ್‌ ಅವರು ಈ ಹಿಂದೆ ಮಾಡಿರುವ ಕಾಮೆಂಟ್‌ಗಳ ಬಗ್ಗೆ ಮಸ್ಕ್ ಟೀಕೆ‌ ಮಾಡಿದ್ದಾರೆ ಎಂದು ಹಲವರು ಹೇಳಿದ್ದಾರೆ.

ಸ್ಟಾಲಿನ್‌ ಆದೇಶದ ಮೇರೆಗೆ ನಿಕೋಲಾಯ್ ಹತ್ಯೆ!

ಮೊದಲ ಚಿತ್ರದಲ್ಲಿ  ಅಗರವಾಲ್ ಅವರ ಜತೆ ಟ್ವೀಟರ್‌ ಮಾಜಿ ಸಿಇಒ ಜ್ಯಾಕ್ ಡಾರ್ಸೆ ಪಕ್ಕದಲ್ಲಿ ನಿಂತಿರುವುದನ್ನು ಚಿತ್ರ ತೋರಿಸುತ್ತದೆ. ನಿಕೋಲಾಯ್ ಯೆಜೋವ್ ಮುಖದ ಮೇಲೆ ಜ್ಯಾಕ್ ಡಾರ್ಸೆ ಚಿತ್ರ ಪೇಸ್ಟ್‌ ಮಾಡಲಾಗಿದೆ.   ನಿಕೋಲಾಯ್ ಯೆಜೋವ್ ಸ್ಟಾಲಿನ್‌ನ ನಿಕಟ ಸಹವರ್ತಿಯಾಗಿದ್ದ. ಆದರೆ ನಂತರ ಸ್ಟಾಲಿನ್‌ ಆದೇಶದ ಮೇರೆಗೆ ನಿಕೋಲಾಯ್ ಹತ್ಯೆ ಮಾಡಲಾಗಿತ್ತು. ಎಲೋನ್ ಮಸ್ಕ್ ಹಂಚಿಕೊಂಡ ಎರಡನೇ ಚಿತ್ರದಲ್ಲಿ,  ಡಾರ್ಸೆ ಕಾಣೆಯಾದ ನಂತರ ನಾವು ನದಿಯಲ್ಲಿ ನೀರು ಚಿಮ್ಮುವುದನ್ನು ಕಾಣಬಹುದು. 

 

 

Twitter CEO on trend: ಭಾರತೀಯ ಮೂಲದ ಟ್ವಿಟ್ಟರ್‌ನ ಹೊಸ ಸಿಇಒ ಬಗ್ಗೆ ನಿಮಗೆಷ್ಟು ಗೊತ್ತು?

ಎಲೋನ್ ಮಸ್ಕ್ ಮೆಮೆಗಾಗಿ ಬಳಸಿಕೊಂಡ ಓರಿಜಿನಲ್‌ ಚಿತ್ರಗಳ ಹಿಂದಿನ ಮರ್ಮವನ್ನು ನೆಟ್ಟಿಗರೊಬ್ಬರು ಈ ರೀತಿ ವಿವರಿಸಿದ್ದಾರೆ. ಈ ಫೋಟೋಗಳಲ್ಲಿನ ನಿಜವಾದ ವ್ಯಕ್ತಿಗಳು ಮಾಜಿ ಸೋವಿಯತ್ ಒಕ್ಕೂಟದ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಮತ್ತು ಅವರ ಆಡಳಿತದಲ್ಲಿ ಮರಣದಂಡನೆ ಕಾರ್ಯನಿರ್ವಹಿಸುತ್ತಿದ್ದ ಉನ್ನತ ಅಧಿಕಾರಿ (execution executive) ನಿಕೊಲಾಯ್ ಯೆಜೋವ್. 1936-38ರಲ್ಲಿ ಸೋವಿಯತ್ ಒಕ್ಕೂಟದಲ್ಲಿ ನಡೆದ ಮಹಾ ರಾಜಕೀಯ ಬದಲಾವಣೆ ಸಮಯದಲ್ಲಿ, ರಾಜಕೀಯ ವಿರೋಧದ ದಮನದ ಉದ್ದೇಶಗಳಿಗಾಗಿ ನೀಡಿದ ಅರ್ಧ ಮಿಲಿಯನ್ ಮರಣದಂಡನೆಗಳ ಮೇಲ್ವಿಚಾರಣೆ  ಯೆಜೋವ್ ವಹಿಸಿದ್ದರು.

 

 

ಆದರೆ ಸೋವಿಯತ್ ಅಧಿಕಾರಿಗಳು ರಾಜಕೀಯ ಅಪರಾಧಗಳು ಮತ್ತು 'ಸಲಿಂಗಕಾಮ'ದ ಆರೋಪ ಹೊರಿಸಿದ ನಂತರ ರಹಸ್ಯ ಪೊಲೀಸ್ ಸೇವಾ ಅಧಿಕಾರಿ ಯೆಜೋವ್ ಗಲ್ಲಿಗೇರಿಸಲಾಗಿತ್ತು. ಜೋಸೆಫ್ ಸ್ಟಾಲಿನ್ ಸ್ವಂತ ಸಹಾಯಕರು ಸೇರಿದಂತೆ ಅವರ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಮರಣದಂಡನೆ ನೀಡಿದ ನಂತರ, ಅವರು ತಮ್ಮ ಕಲಾವಿದರ ಗುಂಪನ್ನು ಬಳಸಿಕೊಂಡು ಆ ಜನರನ್ನು ಒಕ್ಕೂಟದ ಅಧಿಕೃತ ಫೋಟೋಗಳಿಂದಲೂ ತೆಗೆದು ಹಾಕಿದ್ದರು. ಈ ಮೂಲಕ ಅವರ ಮುಖಗಳನ್ನು ಇತಿಹಾಸದ ಹಾಳೆಗಳಿಂದ ತೆಗೆದುಹಾಕಬಹುದು ಎಂದು ಸ್ಟಾಲಿನ್‌ ನಂಬಿದ್ದರು. ಈಗ ಪೋಟೋಗಳನ್ನು ಬಳಸಿ ಎಲೋನ್‌ ಮಸ್ಕ್‌ ಟ್ವೀಟರ್‌ ಹೊಸ ಸಿಇಓ ಪರಾಗ ಅಗರವಾಲ್‌ ಬಗ್ಗೆ ಮೀಮ್‌ ಮಾಡಿದ್ದಾರೆ.

Twitterಗೆ ಭಾರತೀಯ ಮೂಲದ ಪರಾಗ್‌ ಮುಖ್ಯಸ್ಥ, ಡೋರ್ಸಿಗೆ ಬಲವಂತದ ನಿವೃತ್ತಿ!

ಡೋರ್ಸಿಗೆ ಗೇಟ್‌ಪಾಸ್‌?

ಟ್ವಿಟರ್‌ನ ಸಂಸ್ಥಾಪಕ, ಸಿಇಒ ಜಾಕ್‌ ಡೋರ್ಸಿ ಅವರನ್ನು ಹುದ್ದೆಯಿಂದ ಬಲವಂತವಾಗಿ ಕಿತ್ತುಹಾಕಲಾಗಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಡೋರ್ಸಿ, ಟ್ವಿಟರ್‌ (Twitter)  ವಿಷಯದಲ್ಲಿ ಹೆಚ್ಚಿನ ಗಮನ ವಹಿಸುತ್ತಿದ್ದ ಎಂದು ಸಂಸ್ಥೆಯಲ್ಲಿನ ದೊಡ್ಡ ಹೂಡಿಕೆದಾರ ಸಂಸ್ಥೆಯಾದ ಎಲಿಯೋಟ್‌ ಮ್ಯಾನೇಜ್‌ಮೆಂಟ್‌ ಕಾಪ್‌ರ್‍ ಆರೋಪ ಮಾಡಿತ್ತು. ಅದೇ ಕಾರಣಕ್ಕಾಗಿ ಅವರನ್ನು ಇದೀಗ ಸಿಇಒ ಹುದ್ದೆಯಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ. ಈ ವಿಷಯವನ್ನೇ ಎಲೋನ್‌ ಮಸ್ಕ್‌ ಟ್ವೀಟ್ ಮಾಡಿದ್ದಾರೆ ಎಂದು ಹಲವರು ಹೇಳಿದ್ದಾರೆ.

ಯಾರು ಈ ಪರಾಗ್‌?

ಭಾರತದಲ್ಲಿ ಜನಿಸಿದ ಪರಾಗ್‌ ಅಗರವಾಲ್‌ ತಮ್ಮ ಆರಂಭಿಕ ಶಿಕ್ಷಣವನ್ನು ಭಾರತದಲ್ಲಿಯೇ ಮುಗಿಸಿದ್ದಾರೆ. ಬಾಂಬೆಯ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಇವರು ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಪಿಎಚ್‌ಡಿ ಮಾಡುತ್ತಿದ್ದ ಸಮಯದಲ್ಲಿ ಮೈಕ್ರೋಸಾಫ್ಟ್‌, ಎಟಿಟಿ, ಯಾಹೂ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. 2011ರಲ್ಲಿ ಆ್ಯಡ್‌ ಇಂಜಿನಿಯರ್‌ ಆಗಿ ಟ್ವೀಟರ್‌ ಸೇರಿದ ಇವರು ನಂತರದ ವರ್ಷಗಳಲ್ಲಿ ಪ್ರೋಗ್ರಾಮ್‌ ಇಂಜಿನಿಯರ್‌ ಆಗಿ ಪದೋನ್ನತಿ ಪಡೆದಿದ್ದರು. 2018ರಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. 2019ರಲ್ಲಿ ಟ್ವೀಟರ್‌ ಆರಂಭಿಸಿದ ಪ್ರಾಜೆಕ್ಟ್ ಬ್ಲೂ ಸ್ಕೈನ ಮುಖ್ಯಸ್ಥರಾಗಿಯೂ ಪರಾಗ್‌ ಸೇವೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios