9 ಕೆಜಿ ತೂಕ ಕಳೆದುಕೊಂಡ ಎಲಾನ್ ಮಸ್ಕ್: ಡಯಟ್ ಸೀಕ್ರೆಟ್ ಬಹಿರಂಗ..!
ವಿಶ್ವದ ನಂ. 1 ಶ್ರೀಮಂತ 9 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡಿದ್ದಾರಂತೆ. ಅಲ್ಲದೆ, ಇಷ್ಟವಿಲ್ಲದಿದ್ದರೂ ವರ್ಕೌಟ್ ಮಾಡುತ್ತಿರುವುದಾಗಿ ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ.
ರುಚಿಕರವಾದ ಆಹಾರವನ್ನು ತಿನ್ನಲು ಇಷ್ಟಪಡುವ ವಿಶ್ವದ ನಂ. 1 ಶ್ರೀಮಂತ ಹಾಗೂ ಬಿಲಿಯನೇರ್ ಎಲಾನ್ ಮಸ್ಕ್ ಈಗ ತಮ್ಮ ಆರೋಗ್ಯದ ಬಗ್ಗೆ ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ. ಅಲ್ಲದೆ, ತನಗೆ ವರ್ಕೌಟ್ ಮಾಡಲು ಇಷ್ಟವಿಲ್ಲದಿದ್ದರೂ, ಹೇಗಾದರೂ ಮಾಡಬೇಕಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ''ನಾನು ವರ್ಕೌಟ್ ಮಾಡಬೇಕಾಗಿದೆ ಮತ್ತು ಉತ್ತಮ ಸ್ಥಿತಿಯಲ್ಲಿರಬೇಕು ... ನನಗೆ ನಿಜವಾಗಿಯೂ ವರ್ಕೌಟ್ ಮಾಡಲು ಇಷ್ಟವಾಗಲ್ಲ, ಆದರೆ ನಾನು ಅದನ್ನು ಮಾಡಬೇಕಾಗಿದೆ" ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ, ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಕೂಡ ತಮ್ಮ ಮಗ ಎಲಾನ್ ಮಸ್ಕ್ ಅತಿಯಾಗಿ ತಿನ್ನುತ್ತಿದ್ದಾನೆ, ಹೆಚ್ಚು ವಯಸ್ಸಾದಂತೆ ಕಾಣುತ್ತಾನೆ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಎರೋಲ್ ಮಸ್ಕ್ ಅವರು ತಮ್ಮ ಮಗನಿಗೆ ಗಾರ್ಸಿನಿಯಾ ಕಾಂಬೋಜಿಯಾ ಎಂಬ ತೂಕ ನಷ್ಟ ಮಾತ್ರೆ ತೆಗೆದುಕೊಳ್ಳಲು ಶಿಫಾರಸು ಮಾಡಿದರು. ಹಾಗೂ, ಈ ಮಾತ್ರೆ ತನಗೆ ಕೆಲವು ಪೌಂಡ್‌ಗಳನ್ನು ಹೊರಹಾಕಲು ಸಹಾಯ ಮಾಡಿದೆ ಎಂದೂ ಅವರು ಹೇಳಿದ್ದರು. ಈ ಹಿನ್ನೆಲೆ ತನ್ನ ತಂದೆಯ ಮಾತನ್ನು ಕೇಳಿ, ಎಲೋನ್ ಮಸ್ಕ್ ತನ್ನ ತೂಕ ಇಳಿಸುವ ಪ್ರಯಾಣವನ್ನು ಪ್ರಾರಂಭಿಸಿದ್ದಾರಾ ಎಂದೂ ಹೇಳಲಾಗುತ್ತಿದೆ.
ಎಲಾನ್ ಮಸ್ಕ್ ಬಗ್ಗೆ ನನಗೆ ಹೆಮ್ಮೆ ಇಲ್ಲ, ಇನ್ನೂ ಸಂಗಾತಿ ಹುಡುಕಿಕೊಂಡಿಲ್ಲ ಎಂದ ಅಪ್ಪ..!
ಆದರೆ, ಅವರು ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮರುಕಳಿಸುವ ಉಪವಾಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಲಾನ್ ಮಸ್ಕ್. ಈ ಸಂಬಂಧ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ತನ್ನ ಒಳ್ಳೆಯ ಸ್ನೇಹಿತರ ಸಲಹೆ ಮೇರೆಗೆ ನಾನು ನಿಯಮಿತವಾಗಿ ಉಪವಾಸ ಮಾಡುತ್ತಿದ್ದೇನೆ ಹಾಗೂ ಆರೋಗ್ಯವಾ ಉತ್ತಮವಾಗಿದ್ದೇನೆ ಎನಿಸುತ್ತಿದೆ ಎಂದೂ ಹೇಳಿದ್ದಾರೆ. ಟ್ವಿಟ್ಟರ್‌ನಲ್ಲಿ 104.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಎಲಾನ್ ಮಸ್ಕ್, ತೂಕ ಇಳಿಸುವ ರಹಸ್ಯವನ್ನು ಮೈಕ್ರೋ ಬ್ಲಾಗಿಂಗ್ ಜಾಲತಾಣದಲ್ಲಿ ಸ್ಪೇಸ್ ಎಕ್ಸ್ ಹಾಗೂ ಟೆಸ್ಲಾ ಸಂಸ್ಥಾಪಕರು ಬಹಿರಂಗಪಡಿಸಿದ್ದಾರೆ.
ಅಲ್ಲದೆ, ತೂಕ ಕಡಿಮೆ ಮಾಡಲು ಸಹಾಯ ಮಾಡಿದ ತೂಕ ನಷ್ಟ ಅಪ್ಲಿಕೇಶನ್ ಅನ್ನು ಸಹ ಎಲಾನ್ ಮಸ್ಕ್ ಶ್ಲಾಘಿಸಿದರು. ಈ ಸಂಬಂಧ ಟ್ವೀಟ್ ಮಾಡಿದ ಎಲಾನ್ ಮಸ್ಕ್, "ಝೀರೋ ಫಾಸ್ಟಿಂಗ್ ಅಪ್ಲಿಕೇಶನ್ (Zero Fasting App) ತುಂಬಾ ಒಳ್ಳೆಯದು" ಎಂದಿದ್ದಾರೆ. ಈ ಮಧ್ಯೆ,
ಒಬ್ಬ ಟ್ವಿಟ್ಟರ್ ಬಳಕೆದಾರರು ಎಲೋನ್ ಮಸ್ಕ್ ಅವರನ್ನು ಕೇಳಿದರು, "ನೀವು ಎಷ್ಟು ಪೌಂಡ್ ತೂಕ ಕಳೆದುಕೊಂಡಿದ್ದೀರಿ. ದಿನಕ್ಕೆ 800 ಕ್ಯಾಲೊರಿಗಳು ಅದ್ಭುತಗಳನ್ನು ಮಾಡುತ್ತದೆ ಮತ್ತು ಕೆಲವು ದಿನಗಳ ನಂತರ ಕಡುಬಯಕೆಗಳು ದೂರವಾಗುತ್ತವೆ"
ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ ಎಲಾನ್ ಮಸ್ಕ್, "ನನ್ನ (ಅನಾರೋಗ್ಯಕರ) ಗರಿಷ್ಠ ತೂಕದಿಂದ 20 ಪೌಂಡ್ (9.07 ಕಿಲೋಗಳು) ಕಡಿಮೆಯಾಗಿದೆ" ಎಂದು ಟ್ವೀಟ್ ಮೂಲಕ ಉತ್ತರಿಸಿದ್ದಾರೆ. ಹಾಗೂ, ಮತ್ತೊಬ್ಬ ಬಳಕೆದಾರರು ನೀವು ವರ್ಕೌಟ್ ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ, ‘’ಹೌದು, ನಾನು ಸ್ವಲ್ಪ ಲಿಫ್ಟ್ ಮಾಡುತ್ತೇನೆ’’ ಎಂದು ಎಲಾನ್ ಮಸ್ಕ್ ಉತ್ತರಿಸಿದ್ದಾರೆ.
ಗೂಗಲ್ ಸಹ ಸಂಸ್ಥಾಪಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಲಾನ್ ಮಸ್ಕ್..?
ಟೇಸ್ಟಿ ಫುಡ್ ತಿನ್ನಲು ಇಷ್ಟ ಎಂದಿದ್ದ ಮಸ್ಕ್..!
ಟೇಸ್ಟಿ ಫುಡ್ ತಿನ್ನಲು ಇಷ್ಟ, ಹಾಗೂ ವ್ಯಾಯಾಮವಿಲ್ಲದೆ ಇದನ್ನು ಮಾಡಲು ಬಯಸುತ್ತೇನೆ ಎಂದೂ ಎಲಾನ್ ಮಸ್ಕ್ ಒಮ್ಮೆ ಹೇಳಿದ್ದರು. "ದಿ ಜೋ ರೋಗನ್ ಎಕ್ಸ್‌ಪೀರಿಯೆನ್ಸ್" ಎಂಬ ಪಾಡ್‌ಕ್ಯಾಸ್ಟ್‌ನಲ್ಲಿ, ಎಲಾನ್ ಮಸ್ಕ್ ವೈಯಕ್ತಿಕ ತರಬೇತುದಾರರನ್ನು ಹೊಂದಿರುವುದನ್ನು ಒಪ್ಪಿಕೊಂಡರು, ಆದರೆ ಅವರು ಒಟ್ಟಿಗೆ ವರ್ಕೌಟ್ ಮಾಡಿ "ಸ್ವಲ್ಪ ಸಮಯ" ಆಗಿದೆ. ನಂತರ ತಾನೇ ಸ್ವತಃ "ಸ್ವಲ್ಪ ಭಾರವನ್ನು ಎತ್ತುತ್ತೇನೆ" ಎಂದು ಬಹಿರಂಗಪಡಿಸಿದ್ದರು. ಅಲ್ಲದೆ, ಓಡುವುದನ್ನು ಇಷ್ಟಪಡುವುದಿಲ್ಲ, ತಾನು ಟ್ರೆಡ್‌ಮಿಲ್‌ಗೆ ಹೋದರೆ, ಟಿವಿ ನೋಡುತ್ತೇನೆ ಎಂದೂ ಎಲಾನ್ ಮಸ್ಕ್ ಹೇಳಿಕೊಂಡಿದ್ದರು. ಇನ್ನು, ಎಲಾನ್ ಮಸ್ಕ್ ಅವರಿಗೆ ಟೇಕ್ವಾಂಡೋ, ಕರಾಟೆ, ಜೂಡೋ ಮತ್ತು ಬ್ರೆಜಿಲಿಯನ್ ಜಿಯು-ಜಿಟ್ಸುಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಹ ಸಕ್ರಿಯರಾಗಿರುತ್ತಾರಂತೆ.