ಸಿಂಕ್ ಹಿಡಿದು ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿದ Elon Musk..!
ತನ್ನ ವಿಚಿತ್ರ ಶೈಲಿ, ನಡವಳಿಕೆಗೆ ಹೆಸರುವಾಸಿಯಾಗಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಕಚೇರಿಗೆ ಬುಧವಾರ ಭೇಟಿ ನೀಡಿದಾಗ ಸಿಂಕ್ ಅನ್ನು ಹೊತ್ತುಕೊಂಡು ಟ್ವಿಟ್ಟರ್ ಕಚೇರಿಯ ಸಭಾಂಗಣಗಳಲ್ಲಿ ನಡೆದರು.
ಎಲಾನ್ ಮಸ್ಕ್ (Elon Musk) ತನ್ನ $44 ಶತಕೋಟಿ ಟ್ವಿಟ್ಟರ್ (Twitter) ಸ್ವಾಧೀನದ ಒಪ್ಪಂದವನ್ನು ಅಂತಿಮಗೊಳಿಸುತ್ತಿದ್ದಾರೆ. ಸ್ವಾಧೀನದ ಒಪ್ಪಂದ ಮುಕ್ತಾಯಗೊಳಿಸುವ ಮೊದಲೇ ಅವರು ತಮ್ಮ ಟ್ವಿಟ್ಟರ್ ಬಯೋವನ್ನು (Twitter Bio) "ಚೀಫ್ ಟ್ವಿಟ್" (Chief Twit) ಎಂದು ಬದಲಾಯಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಟ್ವಿಟ್ಟರ್‌ನ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಮುಖ್ಯ ಕಚೇರಿಗೆ (Head Quarters) ಟೆಸ್ಲಾ ಸಿಇಒ (Tesla CEO) ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ (World's Richest Person) ಭೇಟಿ ನೀಡಿದ್ದರು. ತಮ್ಮ ಭೇಟಿಯ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದು, ಇದು ವೈರಲ್ ಆಗುತ್ತಿದೆ.
ತನ್ನ ವಿಚಿತ್ರ ಶೈಲಿ, ನಡವಳಿಕೆಗೆ ಹೆಸರುವಾಸಿಯಾಗಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಕಚೇರಿಗೆ ಬುಧವಾರ ಭೇಟಿ ನೀಡಿದಾಗ ಸಿಂಕ್ ಅಥವಾ ವಾಷ್ ಬೇಸಿನ್ ಅನ್ನು ಹೊತ್ತುಕೊಂಡು ಕಚೇರಿಯ ಸಭಾಂಗಣಗಳಲ್ಲಿ ನಡೆದರು. ಈ ವೇಳೆ ತಮ್ಮ ಭೇಟಿಯ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ ಜಾಲತಾಣದಲ್ಲಿ ಹಂಚಿಕೊಂಡ ಎಲಾನ್ ಮಸ್ಕ್, ‘’ಟ್ವಿಟ್ಟರ್ ಪ್ರಧಾನ ಕಚೇರಿಗೆ ಪ್ರವೇಶಿಸುತ್ತಿದ್ದೇನೆ- ಅದು ಮುಳುಗಲು ಬಿಡಿ!" ಎಂದು ಎಲಾನ್ ಮಸ್ಕ್ ಕ್ಯಾಪ್ಷನ್ ಅನ್ನು ಬರೆದುಕೊಂಡಿದ್ದಾರೆ.
ಇದನ್ನು ಓದಿ: ನಾನು ಟ್ವಿಟ್ಟರ್ ಖರೀದಿಸಲು, ನೀವು ದಯವಿಟ್ಟು ನನ್ನ ಸುಗಂಧ ದ್ರವ್ಯ ಕೊಂಡುಕೊಳ್ಳಿ: Elon Musk
ಈ ವಿಡಿಯೋದಲ್ಲಿ ಎಲೋನ್ ಮಸ್ಕ್ ಅವರು ಸಿಂಕ್ ಅನ್ನು ಹೊತ್ತುಕೊಂಡು ಸಿಂಕ್ ಇನ್ ಆಗಲು ಪ್ರಯತ್ನಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು, ಟ್ವಿಟ್ಟರ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಲೆಸ್ಲಿ ಬರ್ಲ್ಯಾಂಡ್ ಅವರು ಎಲಾನ್ ಮಸ್ಕ್ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಗೆ ಭೇಟಿ ನೀಡಲು ಯೋಜಿಸಿದ್ದಾರೆ ಎಂದು ಇಮೇಲ್‌ನಲ್ಲಿ ಸಿಬ್ಬಂದಿಗೆ ತಿಳಿಸಿದ್ದರು. ಟ್ವಿಟ್ಟರ್ ಸ್ವಾಧೀನ ಒಪ್ಪಂದವನ್ನು ಅಂತಿಮಗಳಿಸುವ ಮುನ್ನ ಎಲಾನ್ ಮಸ್ಕ್ ಭೇಟಿ ನೀಡಿದ್ದಾರೆ.
ಏಪ್ರಿಲ್‌ನಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಅನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ಬಿಲಿಯನೇರ್ ಘೋಷಿಸಿದಾಗಿನಿಂದ ಈ ಬೆಳವಣಿಗೆ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ಜುಲೈನಲ್ಲಿ ಟ್ವಿಟ್ಟರ್ ಡೀಲ್ ರದ್ದುಗೊಳಿಸಿದ್ದ ಟೆಸ್ಲಾ ಸಿಇಒ, ಟ್ವಿಟ್ಟರ್ ನಾಯಕತ್ವವು ಸ್ಪ್ಯಾಮ್ ಮತ್ತು ನಕಲಿ ಬಾಟ್ ಖಾತೆಗಳ ಸಂಖ್ಯೆಯನ್ನು ತಪ್ಪಾಗಿ ಪ್ರತಿನಿಧಿಸುವ ಮೂಲಕ ಖರೀದಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಎಲಾನ್ ಮಸ್ಕ್ ಬಗ್ಗೆ ನನಗೆ ಹೆಮ್ಮೆ ಇಲ್ಲ, ಇನ್ನೂ ಸಂಗಾತಿ ಹುಡುಕಿಕೊಂಡಿಲ್ಲ ಎಂದ ಅಪ್ಪ..!
ನಂತರ, ಎಲಾನ್ ಮಸ್ಕ್ ವಿರುದ್ಧ ಟ್ವಿಟ್ಟರ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು ಮತ್ತು ಒಪ್ಪಂದದಿಂದ ನಿರ್ಗಮಿಸಲು ಅವರು ಬಾಟ್‌ಗಳನ್ನು ನೆಪವಾಗಿ ಬಳಸಿದ್ದಾರೆ ಎಂದು ವಾದಿಸಿದ್ದರು. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಬೆನ್ನಲ್ಲೇ ಕಳೆದ ವಾರ ಯೂ - ಟರ್ನ್ ತೆಗೆದುಕೊಂಡಿದ್ದ ಎಲಾನ್ ಮಸ್ಕ್ ಅವರು ಮೂಲತಃ ಒಪ್ಪಿದ ಬೆಲೆಯಲ್ಲಿ - ಒಂದು ಷೇರಿಗೆ $54.20 ಬೆಲೆಯಲ್ಲಿ ಒಪ್ಪಂದವನ್ನು ಮುಂದುವರಿಸುವುದಾಗಿ ದೃಢಪಡಿಸಿದ್ದರು.
ಇನ್ನು, ಒಪ್ಪಂದದ ಕಾನೂನು ಹೋರಾಟವನ್ನು ಆಲಿಸಿದ ನ್ಯಾಯಾಧೀಶರು ಅಕ್ಟೋಬರ್ 28 ರವರೆಗೆ ವಿಚಾರಣೆಯನ್ನು ಮುಂದೂಡಿದರು. ಹಾಗಾಗಿ, ಒಪ್ಪಂದವು ನಾಳೆ ಮುಕ್ತಾಯಗೊಳ್ಳದಿದ್ದರೆ, ವಿಚಾರಣೆ ಮತ್ತೆ ಆರಂಭವಾಗುತ್ತದೆ. ಈ ಹಿನ್ನೆಲೆ ನಾಳೆಯ ಡೆಡ್‌ಲೈನ್‌ನೊಳಗೆ ಎಲಾನ್ ಮಸ್ಕ್ ಟ್ವಿಟ್ಟರ್ ಒಪ್ಪಂದವನ್ನು ಮುಕ್ತಾಯಗೊಳಿಸಬೇಕಿದ್ದು, ಈ ಹಿನ್ನೆಲೆ ಅವರು ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿದ್ದು, ಪ್ರಾಮುಖ್ಯತೆ ಪಡೆದುಕೊಂಡಿದೆ.
ಇದನ್ನೂ ಓದಿ: ಟ್ವಿಟರ್ ಡೀಲ್‌ನಿಂದ ಹಿಂದೆ ಸರಿದ ಎಲಾನ್ ಮಸ್ಕ್, ಕಾನೂನು ಕ್ರಮಕ್ಕೆ ನಿರ್ಧರಿಸಿದ ಕಂಪನಿ!