ಹಿಮದಲ್ಲಿ ಆನೆ ಮರಿಯ ಆಟ... ಮನಮೋಹಕ ದೃಶ್ಯ ವೈರಲ್
- ಮಂಜಿನಲ್ಲಿ ಆನೆಗಳ ಮೋಜಿನಾಟ
- ರಷ್ಯಾ ಮೃಗಾಲಯವೊಂದರ ದೃಶ್ಯ ವೈರಲ್
- ಮಂಜನ್ನು ಮೇಲೆರೆಚಿಕೊಂಡು ಕುಣಿದಾಟ
ರಷ್ಯಾ(ಡಿ.30): ಪ್ರಾಣಿಗಳಲ್ಲೇ ಬುದ್ಧಿವಂತ ಪ್ರಾಣಿ ಆನೆ. ಆನೆಗಳು ಮೋಜು ಮಾಡುವುದರಲ್ಲಿ ಎತ್ತಿದ ಕೈ ನೀರಿನಲ್ಲಿ ಆನೆಗಳು ಮೋಜು ಮಾಡುವುದನ್ನು ನೀವು ಈಗಾಗಲೇ ನೋಡಿರಬಹುದು. ಆದರೆ ಇಲ್ಲೊಂದು ಆನೆ ಹಿಮದಲ್ಲಿ ಆಟವಾಡುತ್ತಿದೆ. ಹಿಮವನ್ನು ಮೈಮೇಲೆ ಸುರಿದುಕೊಂಡು ಆನೆ ಮೋಜು ಮಾಡುವ ದೃಶ್ಯ ಎಲ್ಲರನ್ನು ಸೆಳೆಯುತ್ತಿದೆ. ರಷ್ಯಾದ ಮಾಸ್ಕೋ (Moscow) ದಲ್ಲಿರುವ ಮೃಗಾಲಯವೊಂದರ ದೃಶ್ಯಾವಳಿ ಇದು. ರಾಯಿಟರ್ಸ್ (Reuters) ಇದನ್ನು ಸಾಮಾಜಿಕ ಜಾಲತಾಣ ಟ್ಟಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ.
ಆನೆಗಳು ಹಿಮದಲ್ಲಿ ಕುಣಿಯುವುದನ್ನು ತೋರಿಸುವ ಈ ತಣ್ಣನೆಯ ವಿಡಿಯೋ ಎಲ್ಲರನ್ನು ಕೂಲ್ ಮಾಡುತ್ತಿದೆ. ಈ ಆನೆಗಳ ಗುಂಪಿನಲ್ಲಿಇರುವ ಮತ್ತೊಂದು ಮರಿಯಾನೆ ತನ್ನ ಸೊಂಡಿಲಿನಲ್ಲಿ ಮಂಜನ್ನು ಎತ್ತಿ ಎಸೆಯುವ ದೃಶ್ಯ ಕಣ್ಮನ ಸೆಳೆಯುತ್ತಿದೆ. ಈ ಆನೆ ಮರಿ ನಾಲ್ಕು ವರ್ಷದ್ದಾಗಿದ್ದು, ಇದಕ್ಕೆ ಫಿಲಿಮೊನ್ (Filimon) ಎಂದು ಹೆಸರಿಡಲಾಗಿದೆ. ರಷ್ಯಾದಲ್ಲಿ ಆನೆಗಳ ಸಂತತಿ ತುಂಬಾ ಕಡಿಮೆಯಾಗಿದ್ದು, ಕೇವಲ 11 ಆನೆಗಳನ್ನು ರಷ್ಯಾ ಹೊಂದಿದೆ. ಈ ಹನ್ನೊಂದರಲ್ಲಿ ನಾಲ್ಕು ಆನೆಗಳು ಮಾಸ್ಕೋದ ಮೃಗಾಲಯದಲ್ಲಿ ಆಶ್ರಯ ಪಡೆದಿವೆ. ಇವುಗಳನ್ನು ಮೃಗಾಲಯದ ಸಿಬ್ಬಂದಿ ತುಂಬಾ ಚೆನ್ನಾಗಿ ನೋಡಿ ಕೊಳ್ಳುತ್ತಿದ್ದಾರೆ. ಜೊತೆಗೆ ಮೃಗಾಲಯಕ್ಕೆ ಬರುವ ಪ್ರಾಣಿ ಪ್ರಿಯರಿಗೂ ಇವು ಖುಷಿ ನೀಡುತ್ತಿವೆ.
ಮಾನವ-ಪ್ರಾಣಿ ಸಂಘರ್ಷಕ್ಕೆ ಕೊನೆ ಎಂದು?
ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು ಇದರ ಪರಿಣಾಮ ಕಳೆದ 8-10 ವರ್ಷಗಳಲ್ಲಿ 10-15 ಆನೆಗಳು ಸಾವನ್ನಪ್ಪಿವೆ. ಹೊಲ-ಗದ್ದೆಗಳಲ್ಲಿ ಬೆಳೆ ನಾಶ ಮಾಡುತ್ತವೆ ಎಂದು ರೈತರು ಜಮೀನಿಗೆ ಅಳವಡಿಸಿರುವ ವಿದ್ಯುತ್ ತಂತಿಗೆ ಸಿಕ್ಕಿ ಅವುಗಳು ಪ್ರಾಣ ಕಳೆದುಕೊಳ್ತಿವೆ. ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ಈ ಸಂಘರ್ಷಕ್ಕೆ ಪರಿಹಾರ ಒದಗಿಸುವಂತೆ ರೈತರು, ಸಾಕಷ್ಟು ಭಾರೀ ಸರ್ಕಾರದ ಗಮನ ಸೆಳೆದರು. ಸರ್ಕಾರದ ದಿವ್ಯನಿರ್ಲಕ್ಷತನದಿಂದ ವನ್ಯಪ್ರಾಣಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ.
Emotional Video : ಆನೆ ಹಾಗೂ ಸಾಕಿದಾತನ ಅಪೂರ್ವ ಸಮ್ಮಿಲನ... ಮತ್ತೆ ಮತ್ತೆ ನೋಡುವಂತೆ ಮಾಡುವ ವಿಡಿಯೋ
ನಾಗರಹೊಳೆ (Nagarahole) ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿ ಕಾಡಾನೆಗಳ (Elephant) ಹಾವಳಿ ಸಾಮಾನ್ಯ. ಗುಂಪು ಗುಂಪಾಗಿ ಆನೆಗಳು ಇಲ್ಲಿ ಓಡಾಡುತ್ತಿರುತ್ತವೆ. ಹೋಗಿ ಬರುವ ವಾಹನ ಸವಾರರಿಗೆ ಉಪಟಳ ಕೊಡುತ್ತಿರುತ್ತವೆ. ಹೀಗೆ ಕಾಡಿನಿಂದ ನಾಡಿಗೆ ಬಂದ ಆನೆಯನ್ನು ಕಾಡಿಗಟ್ಟಲು ಗ್ರಾಮಸ್ಥರು ಹರಸಾಹಸಪಟ್ಟಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಆನೆಯತ್ತ ಬೆಂಕಿ ಎಸೆದಿದ್ದಾನೆ. ಸಿಟ್ಟಿಗೆದ್ದ ಆನೆ ಗ್ರಾಮಸ್ಥರತ್ತ ನುಗ್ಗಿದೆ. ಜೊತೆಗೆ ವಾಹನ ಸವಾರರನ್ನು ಓಡಾಡಿಸಿದೆ. ವಿದ್ಯುತ್ ಕಂಬವನ್ನು ಕಿತ್ತೆಸೆದಿದೆ. ಕೆಲ ದಿನಗಳ ಹಿಂದೆ ಹುಣಸೂರು ತಾಲೂಕಿನ ಗುರುಪುರ ಟಿಬೆಟ್ ಕ್ಯಾಂಪ್ ಬಳಿ ಈ ಘಟನೆ ನಡೆದಿತ್ತು.
Elephant attack: ಬೈಕ್ ಅಥವಾ ಲೈಫ್..! ದಾಳಿ ಮಾಡೋಕೆ ಬಂದ ಆನೆಯಿಂದ ಬಚಾವಾಗಿದ್ದು ಹೇಗೆ ?
ಆನೆಗಳ ವೀನಿಂಗ್:
ತಾಯಿಯಾನೆಯಿಂದ ಮರಿಯಾನೆಯನ್ನು ದೂರ ಮಾಡುವ ಪ್ರಕ್ರಿಯೆಯನ್ನು ವೀನಿಂಗ್ ಎಂದು ಕರೆಯುತ್ತಾರೆ. ಸಕ್ರೆಬೈಲಿನ ಆನೆ ಬಿಡಾರದ ನೇತ್ರಾ ಮತ್ತದರ ಗಂಡು ಮರಿಯಾನೆ ಪವರ್ ಸ್ಟಾರ್ ಅಪ್ಪುವನ್ನು ವೀನಿಂಗ್ ಮಾಡಲಾಯಿತು. ವೀನಿಂಗ್ ವೇಳೆ ಮಾವುತರು, ಕಾವಾಡಿಗರು ಹಾಗೂ ಅರಣ್ಯಾಧಿಕಾರಿಗಳು ಭಾವುಕರಾದರು. ಸೂರ್ಯ, ಕಿರಣ, ಶಿವ ಇದೀಗ ಅಪ್ಪು ಹೀಗೆ ನಾಲ್ಕು ಗಂಡು ಮಗುವಿಗೆ ಜನ್ಮ ನೀಡಿದ ನೇತ್ರಾಳಿಗೆ ಇದು 4 ನೇ ವೀನಿಂಗ್.