ಆನೆ ಹಾಗೂ ಸಾಕಿದಾತನ ಅಪೂರ್ವ ಸಮ್ಮಿಲನ ಮತ್ತೆ ಮತ್ತೆ ನೋಡುವಂತೆ ಮಾಡುತ್ತಿದೆ ಆನೆಗಳ ಈ ಭಾವುಕ ವಿಡಿಯೋ ಥೈಲ್ಯಾಂಡ್‌ನ ರಕ್ಷಿತಾರಣ್ಯದ ವಿಡಿಯೋ 

ಥೈಲ್ಯಾಂಡ್‌(ಡಿ. 27): ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿವಂತ ಪ್ರಾಣಿ ಆನೆ. ಪ್ರಾಣಿಗಳಿಗೆ ಬಾಯಿ ಬಾರದಿರಬಹುದು. ಆದರೆ ಅವು ಬುದ್ದಿವಂತಿಕೆ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಮನುಷ್ಯನಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ. ಪ್ರಾಣಿಗಳ ಪ್ರೀತಿ ಹಾಗೂ ಭಾವುಕತೆ ಬಗ್ಗೆ ಈಗಾಗಲೇ ನಾವು ಹಲವು ನಿದರ್ಶನಗಳನ್ನು ನೋಡಿರಬಹುದು. ಈಗ ನಾವು ಹೇಳ ಹೊರಟಿರುವುದು ಆನೆಗಳ ಪ್ರೀತಿ ಬಗ್ಗೆ. ಆನೆಗಳು ತಮ್ಮನ್ನು ನೋಡಿಕೊಂಡಿದ್ದ ವ್ಯಕ್ತಿಯನ್ನು 14 ತಿಂಗಳ ಬಳಿಕ ಮೊದಲ ಬಾರಿಗೆ ನೋಡಿದಾಗ ಅವುಗಳ ಭಾವುಕ ಪುನರ್‌ಮಿಲನದ ವಿಡಿಯೋ ಇದಾಗಿದೆ. ತಮ್ಮನ್ನು ಸಾಕಿದವನನ್ನು 14 ತಿಂಗಳ ಬಳಿಕ ನೋಡುವ ಆನೆಗಳು ಆತನ ಸುತ್ತ ಸೇರಿ ಪ್ರೀತಿ ಮಾಡುವ ವಿಡಿಯೋ ಇದಾಗಿದೆ.

Buitengebieden ಎಂಬ ಟ್ವಿಟ್ಟರ್‌ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, 3.7 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಆಳವಿಲ್ಲದ ಹರಿಯುವ ನೀರಿನಲ್ಲಿ ದೂರದಲ್ಲಿ ನಿಂತು, ಆನೆ ಸಾಕಿದ ಡೆರೆಕ್‌ (Derek)ಎಂಬವರು ತಮ್ಮ ಬಾಯಿಯ ಮೂಲಕ ವಿಭಿನ್ನವಾದ ಶಬ್ಧವನ್ನು ಮಾಡುತ್ತಾರೆ. ಈ ಶಬ್ಧವನ್ನು ಕೇಳಿಸಿದ ಕೂಡಲೇ ಶಬ್ಧ ಬಂದ ಕಡೆಗೆ ಧಾವಿಸಿ ಬರುವ ನಾಲ್ಕು ಐದು ಆನೆಗಳ ಗುಂಪು ಹರಿಯುವ ನೀರಿಗೆ ವಿರುದ್ಧವಾದ ದಿಕ್ಕಿನಲ್ಲಿ ನಿಂತಿರುವ ತಮ್ಮನ್ನು ಸಾಕಿದಾತನನ್ನು ನೋಡಲು ಬೇಗ ಬೇಗನೇ ಧಾವಿಸಿ ಬರುತ್ತವೆ. ಬಳಿಕ ಸಾಕಿದಾತನ ಸುತ್ತ ಸೇರಿ ತಮ್ಮ ಸೊಂಡಿಲಿನಲ್ಲಿ ಆತನನ್ನು ಮುದ್ದಾಡುತ್ತವೆ. ಈ ಕ್ಷಣವೂ ಜನರು ವಿಡಿಯೋವನ್ನು ಮತ್ತೆ ಮತ್ತೆ ನೋಡುವಂತೆ ಮಾಡಿದೆ. 

Scroll to load tweet…

ಇನ್ನು ಈ ಆನೆ ಸಾಕಿದ ಡೆರೆಕ್‌ ತೋಮ್ಸನ್‌ (Derek Thompson) ಬಗ್ಗೆ ಹೇಳುವುದಾದರೆ ಇವರು ಆನೆಗಳನ್ನು ರಕ್ಷಿಸುವ ಸೇವ್‌ ಎಲಿಪ್ಯಾಂಟ್‌ ಫೌಂಡೇಶನ್‌ನ (Save The Elephant Foundation) ಸಹ ಸಂಸ್ಥಾಪಕರಾಗಿದ್ದಾರೆ. ವಿಭಿನ್ನವಾದ ಸ್ವರಗಳಲ್ಲಿ ಆನೆಗಳನ್ನು ಕರೆದಾಗ ಅವುಗಳು ಓಡಿ ಓಡಿ ಬರುವ ದೃಶ್ಯ ಎಲ್ಲರನ್ನು ಭಾವುಕರನ್ನಾಗಿಸುತ್ತವೆ. ಈ ವಿಡಿಯೋವನ್ನು ಡಿಸೆಂಬರ್ 24 ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು ಅಲ್ಲಿ 3.7 ಜನ ಅದನ್ನು ವೀಕ್ಷಿಸಿದ್ದಾರೆ. ಜೊತೆ ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ನಲ್ಲೂ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ಡೆರೆಕ್‌ ಥಾಮ್ಸನ್‌ನನ್ನು ಗುರುತಿಸಿದ ವ್ಯಕ್ತಿಯೊಬ್ಬರು, ಈತ ಆನೆಗಳ ಬಗ್ಗೆ ಕಾಳಜಿ ವಹಿಸುವ ಸಲುವಾಗಿ ತನ್ನ ಫೈರ್‌ಫೈಟರ್‌ (ಅಗ್ನಿಶಾಮಕ ಇಲಾಖೆಯ ಕೆಲಸ) ಕೆಲಸವನ್ನು ಬಿಟ್ಟು ಬಂದಿದ್ದಾನೆ ಎಂದಿದ್ದಾರೆ. 

Viral Video: ಅಡುಗೆ ಮನೆ ಕಿಟಕಿಯಲ್ಲಿ ಸೊಂಡಿಲು ಹಾಕಿ, ಆಹಾರ ಹುಡುಕಿದ ಕಾಡಾನೆ!

ಈತ ನನ್ನ ಗೆಳೆಯ ಡೆರೆಕ್‌ ಥಾಮ್ಸನ್‌, ಈತ ಟೊರೆಂಟೋದಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಆನೆಗಳ ರಕ್ಷಣೆ ಹಾಗೂ ಕಾಳಜಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಈತ ತನ್ನ ಕೆಲಸವನ್ನೇ ಅದಕ್ಕಾಗಿ ತೊರೆದ. ಇದು ಥೈಲ್ಯಾಂಡ್‌ (Thailand) ನ ಅಭಯಾರಣ್ಯ (sanctuary) ವೊಂದರ ವಿಡಿಯೋ ಇದಾಗಿದ್ದು, ಇದನ್ನು ಡೆರೆಕ್‌ ಹಾಗೂ ಆತನ ಪತ್ನಿ ಲೆಕ್‌(Lek) ಸ್ಥಾಪಿಸಿದ್ದಾರೆ ಎಂದು ಬ್ರಿಯಾನ್ ರತುಶ್ನಿಯಾಕ್ (Bryan Ratushniak) ಎಂಬವರು ಕಾಮೆಂಟ್‌ನಲ್ಲಿ ಬರೆದಿದ್ದಾರೆ. 

Bandipura Elephant Camp : ಉಪಟಳ ನೀಡುತ್ತಿದ್ದ 8 ಸಾಕಾನೆ ಬಂಡೀಪುರಕ್ಕೆ

ಈ ವರ್ಷದಲ್ಲಿ ನೋಡಿದ ಅತ್ಯಂತ ಸುಂದರವಾದ ವಿಡಿಯೋ ಇದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಪ್ರೀತಿ ಎಂಬುದು ಒಂದು ಸಾರ್ವತ್ರಿಕ ಭಾವನೆ. ಪ್ರಾಣಿಗಳು ನಿಜವಾಗಿಯೂ ಹೇಗೆ ಯೋಚಿಸುತ್ತವೆ ಹಾಗೂ ಭಾವನೆಯನ್ನು ವ್ಯಕ್ತಪಡಿಸುತ್ತವೆ ಎಂಬುದನ್ನು ನಾವು ಕೊನೆಗೂ ಕಲಿತ್ತಿದ್ದೇವೆ. ನಾವು ಅವುಗಳನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದನ್ನು ಯೋಚಿಸಿದರೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ ಎಂದು ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನಾನು ಆನೆಗಳ ಬಗ್ಗೆ ತುಂಬಾ ತೀವ್ರವಾದ ಭಾವನೆಯನ್ನು ಹೊಂದಿದ್ದೇನೆ. ಅವು ಬುದ್ಧಿವಂತಿಕೆಯಲ್ಲಿ ಮನುಷ್ಯನಿಗಿಂತ ಶ್ರೇಷ್ಠವಾಗಿವೆ. ಈ ಆನೆಗಳು ಭೂಮಿಯ ಮೇಲೆ ಯಾರು ಮಾಡದಂತದ ವಿಸ್ಮಯವನ್ನು ಉಂಟು ಮಾಡಿವೆ ಎಂದು ಮತ್ತೊಬ್ಬ ವೀಕ್ಷಕ ಕಾಮೆಂಟ್ ಮಾಡಿದ್ದಾರೆ.