ಪಾಕಿಸ್ತಾನದಲ್ಲಿ ಪ್ರಖ್ಯಾತವಾದ ಒಂದು ಮಾತಿದೆ. ಪಾಕಿಸ್ತಾನದಲ್ಲಿ ವಕೀಲರು ಹಾಗೂ ಕತ್ತೆಗಳು ಗಲ್ಲಿ ಗಲ್ಲಿಗಳಲ್ಲಿ ಸಿಗುತ್ತಾರೆ ಎನ್ನುವುದು. 2021-22ರ ಸಾಲಿನ ಪಾಕಿಸ್ತಾನ ಆರ್ಥಿಕ ಸಮೀಕ್ಷೆ ಬಿಡುಗಡೆಯಾಗಿದ್ದು, ಸತತ ಮೂರನೇ ವರ್ಷವೂ ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಅಷ್ಟಕ್ಕೂ ಪಾಕಿಸ್ತಾನ ಈ ಕತ್ತೆಗಳನ್ನು ಏನು ಮಾಡುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇರುವುದು ಸಾಮಾನ್ಯ.
ಕರಾಚಿ (ಜೂನ್ 14): 2021-22ರ ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯು (2021-22 Pakistan’s Economic Survey) ಈ ವಾರಿ ಬಿಡುಗಡೆಯಾಗಿದೆ. ಪಾಕಿಸ್ತಾನದಲ್ಲಿ ಇತರ ಜಾನುವಾರಗಳುಗಳ (livestock) ನಡುವೆ ಕತ್ತೆಗಳ (donkeys) ಸಂಖ್ಯೆಯಲ್ಲಿ ಸತತ ಮೂರನೇ ವರ್ಷವೂ ಗಮನಾರ್ಹ ಏರಿಕೆಯಾಗಿದೆ. ಪಾಕಿಸ್ತಾನವು ತನ್ನ ಆರ್ಥಿಕತೆಯ ಬಲ ಪಡಿಸುವ ನಿಟ್ಟಿನಲ್ಲಿ ಕೃಷಿ (agriculture ) ಹಾಗೂ ಜಾನುವಾರುಗಳಿಗೆ ಅಧಿಕ ಆದ್ಯತೆಯನ್ನು ನೀಡುತ್ತದೆ. ಅದರಲ್ಲೂ ಪಾಕಿಸ್ತಾನದಲ್ಲಿ ಬಹುತೇಕ ಕತ್ತೆಗಳು ವಿವಿಧ ರೂಪಗಳಲ್ಲಿ ಚೀನಾಕ್ಕೆ (China) ರಫ್ತು (Export) ಆಗುತ್ತದೆ.
ಚೀನಾಕ್ಕೆ ರಫ್ತು ಮಾಡುವ ಏಕಮೇವ ಉದ್ದೇಶದೊಂದಿಗೆ ಪಾಕಿಸ್ತಾನದಲ್ಲಿ ಕತ್ತೆಗಳನ್ನು ಸಾಕಲಾಗುತ್ತದೆ. ಪಾಕಿಸ್ತಾನದ ಪಾಲಿಗೆ ಪ್ರಾಣಿ ಎಷ್ಟು ಮುಖ್ಯವಾಗಿದೆ ಎಂದರೆ, 2021ರಲ್ಲಿ ಪಾಕಿಸ್ತಾನದ ಹಿಟ್ ಅನಿಮೇಟೆಡ್ ಚಿತ್ರ "ದಿ ಡಾಂಕಿ ಕಿಂಗ್' ಚೀನಾದಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇನ್ನು ರಾಜಕೀಯವಾಗಿಯೂ ಪಾಕಿಸ್ತಾನದಲ್ಲಿ ಕತ್ತೆ ಬಹಳ ಪ್ರಮುಖ ಪಾತ್ರ ವಹಿಸಿದೆ. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯನ್ನೂ ಕತ್ತೆಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದಾಗ ಇಮ್ರಾನ್ ಖಾನ್ (Imran Khan) ಸರ್ಕಾರವು ರಾಷ್ಟ್ರೀಯ ಅಸೆಂಬ್ಲಿಯ ಬಜೆಟ್ ಅಧಿವೇಶನದಲ್ಲಿ ತೀವ್ರ ವಿರೋಧವನ್ನು ಎದುರಿಸಿತ್ತು. "ಡಾಂಕಿ ರಾಜಾ ಕಿ ಸರ್ಕಾರ್ ನಹೀ ಚಲೇಗಿ' (ಕತ್ತೆಯ ರಾಜನ ಸರ್ಕಾರ ನಡೆಯುವುದಿಲ್ಲ) ಎಂದು ಘೋಷಣೆ ಕೂಗಿ ಟೀಕಿಸಿದ್ದರು.
ಇತ್ತೀಚಿನ ಸಮೀಕ್ಷೆಯ ಪ್ರಕಾರ, 2021-2022ರಲ್ಲಿ ಪಾಕಿಸ್ತಾನದ ಕತ್ತೆಗಳ ಸಂಖ್ಯೆ 5.7 ಮಿಲಿಯನ್‌ಗೆ ಏರಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಕತ್ತೆಗಳ ಸಂಖ್ಯೆಯಲ್ಲಿ 1 ಲಕ್ಷ ಏರಿಕೆಯಾಗಿದೆ. 2020-21 ರಲ್ಲಿ ಪಾಕಿಸ್ತಾನದಲ್ಲಿ 5.6 ಮಿಲಿಯನ್ ಕತ್ತೆಗಳಿದ್ದರೆ, ಅದಕ್ಕೂ ಹಿಂದಿನ ವರ್ಷ 5.5 ಮಿಲಿಯನ್ ಕತ್ತೆಗಳಿದ್ದವು. ಪ್ರಸ್ತುತ ಪಾಕಿಸ್ತಾನವು ವಿಶ್ವದಲ್ಲಿಯೇ ಗರಿಷ್ಠ ಕತ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಕತ್ತೆಯ ದುಡ್ಡಿನಲ್ಲಿ ನಡೆಯುವ ಆರ್ಥಿಕತೆ: ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಬಿಡುಗಡೆ ಮಾಡಿದ ಇತ್ತೀಚಿನ ಆರ್ಥಿಕ ಸಮೀಕ್ಷೆಯು ಪಾಕಿಸ್ತಾನದ ಜಿಡಿಪಿ ಹಿಂದಿನ ಇಮ್ರಾನ್ ಖಾನ್ ಸರ್ಕಾರ ನಿಗದಿಪಡಿಸಿದ ಗುರಿಗಿಂತ ವೇಗವಾಗಿ ಬೆಳೆಯುತ್ತಿದೆ ಎಂದು ತೋರಿಸಿದೆ. ದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ನಡುವೆಯೂ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 5.97 ಎಂದು ಸಮೀಕ್ಷೆ ಹೇಳಿದೆ. ಈ ದಾಖಲೆಗಳಲ್ಲಿ ಒಂದು ಮಾತ್ರ ಖಚಿತವಾಗಿ ಪ್ರತಿ ವರ್ಷ ಕತ್ತೆಗಳ ಸಂಖ್ಯೆಯಲ್ಲಿ 1 ಲಕ್ಷ ಏರಿಕೆ ಆಗುತ್ತಿರುವ ಕಾರಣ, ಸಾಲದ ಹೊರೆಯಲ್ಲಿರುವ ದೇಶವು ಜಾನುವಾರುಗಳ ರಫ್ತಿನ ಮೂಲಕ ಆದಾಯ ಪಡೆಯುತ್ತಿರುವುದು ನಿಶ್ಚಿತವಾಗಿದೆ. ಕತ್ತೆಗಳೊಂದಿಗೆ ಪಾಕಿಸ್ತಾನದಲ್ಲಿ ಕುರಿ, ಎಮ್ಮೆ ಹಾಗೂ ಮೇಕೆಗಳ ಸಂಖ್ಯೆಯುಲ್ಲೂ ಏರಿಕೆಯಾಗಿದೆ. 2021-22 ರ ಆರ್ಥಿಕ ಸಮೀಕ್ಷೆಯು "ದೇಶದಲ್ಲಿ ಆರ್ಥಿಕ ಬೆಳವಣಿಗೆ, ಆಹಾರ ಭದ್ರತೆ ಮತ್ತು ಬಡತನ ನಿವಾರಣೆಗಾಗಿ ಜಾನುವಾರು ವಲಯದ ಮೇಲೆ ತನ್ನ ಗಮನವನ್ನು ನವೀಕರಿಸಿದೆ" ಎಂದು ಹೇಳಿದೆ.
ಪಾಕಿಸ್ತಾನದ ಕೃಷಿ ವಲಯವು ಅದರ ದೇಶದ ಜಿಡಿಪಿಗೆ ಶೇ. 14 ಕೊಡುಗೆ ನೀಡುತ್ತದೆ. "ಕೃಷಿ ವಲಯವು 4.4 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ, ಮುಖ್ಯವಾಗಿ ಬೆಳೆಗಳಲ್ಲಿನ 6.6 ಶೇಕಡಾ ಬೆಳವಣಿಗೆ ಮತ್ತು ಜಾನುವಾರುಗಳಲ್ಲಿ 3.3 ಶೇಕಡಾ ಬೆಳವಣಿಗೆ" ಆಗಿದೆ ಎಂದು ಪ್ರಸಿದ್ಧ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನದಲ್ಲಿ 80 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳು ಜಾನುವಾರು ಉತ್ಪಾದನೆಯಲ್ಲಿ ತೊಡಗಿವೆ. ಪ್ರಾಣಿಗಳ ಮೇಲಿನ ಗಮನವು ಹಣವನ್ನು ಸಹ ತರುತ್ತಿದೆ. ಜಿಯೋ ನ್ಯೂಸ್ ವರದಿಯ ಪ್ರಕಾರ, "ಜಾನುವಾರುಗಳ ಒಟ್ಟು ಮೌಲ್ಯವರ್ಧನೆಯು 5,269 ಶತಕೋಟಿ (2020-21) ನಿಂದ 5,441 ಶತಕೋಟಿ (2021-22) ಗೆ ಹೆಚ್ಚಾಗಿದೆ, ಇದು 3.26% ರಷ್ಟು ಹೆಚ್ಚಳವಾಗಿದೆ".
ಇನ್ನು ಪಾಕಿಸ್ತಾನದಲ್ಲಿಕತ್ತೆಗಳ ಸಂಖ್ಯೆ ಏರಿಕೆ ಆಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲೆಕ್ಕವಿಲ್ಲದಷ್ಟು ಜೋಕ್ ಗಳು ಹರಿದಾಡುತ್ತಿವೆ. "ಲಾಹೋರ್ ನ ಹೋಟೆಲ್ ನಲ್ಲಿ ಕತ್ತೆಗಳ ಕಬಾಬ್ ಸಿಗದೇ ಇದ್ದರೆ ಸಾಕು' ಎಂದು ಪಾಕಿಸ್ತಾನದ ಪತ್ರಕರ್ತ ಹಮೀದ್ ಮಿರ್ ವ್ಯಂಗ್ಯವಾಡಿದ್ದಾರೆ.
ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಿಸಿದ ಭಾರತ: ಆದರೆ ಚೀನಾ, ಪಾಕ್‌ನಷ್ಟಿಲ್ಲ!
ಚೀನಾಗೆ ಬೇಕಿದೆ ಕತ್ತೆಗಳು: ಪಾಕಿಸ್ತಾನದಲ್ಲಿ ಕತ್ತೆಗಳು ಹೆಚ್ಚಾಗಲು ಚೀನಾ ಕಾರಣ. ಕತ್ತೆ ಚರ್ಮ ಮತ್ತು ಜೆಲಾಟಿನ್ ಅನ್ನು ಚೀನೀ ಔಷಧದಲ್ಲಿ ಹೆಚ್ಚು ಮೌಲ್ಯಯುತವಾಗಿದೆ. ಮತ್ತು ಜಿಯೋ ನ್ಯೂಸ್ ಪ್ರಕಾರ, ಚೀನಾದ ಕಂಪನಿಗಳು ಪಾಕಿಸ್ತಾನದಲ್ಲಿ ಕತ್ತೆ ಸಾಕಾಣಿಕೆಯಲ್ಲಿ 3 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಸಿದ್ಧವಾಗಿವೆ. ಪಾಕಿಸ್ತಾನದ ಪಂಜಾಬ್ ಹಾಗೂ ಖೈಬರ್ ಪಖ್ತುಂಕ್ವಾದಲ್ಲಿ ಚೀನಾಕ್ಕೆ ರಫ್ತು ಮಾಡುವ ಉದ್ದೇಶದಲ್ಲಿಯೇ ಕತ್ತೆಗಳನ್ನು ಸಾಕಲಾಗುತ್ತಿದೆ. ಜಗತ್ತನಲ್ಲಿಯೇ ಅತೀ ಹೆಚ್ಚು ಕತ್ತೆಗಳನ್ನು ಹೊಂದಿರುವ ದೇಶ ಚೀನಾ.
ಆರ್ಥಿಕ ದಿವಾಳಿತನ ತಪ್ಪಿಸಲು ತೆರಿಗೆ ದ್ವಿಗುಣಗೊಳಿಸಿದ ಪಾಕಿಸ್ತಾನದ ಹೊಸ ಬಜೆಟ್
ಜೈವಿಕ ತಂತ್ರಜ್ಞಾನ ಉದ್ಯಮವು ಎಜಿಯಾವೋ ಎಂಬ ಸಾಂಪ್ರದಾಯಿಕ ಚೀನೀ ಔಷಧವನ್ನು ತಯಾರಿಸಲು ಕತ್ತೆಯ ಚರ್ಮವನ್ನು ನಿರ್ಣಾಯಕ ಘಟಕಾಂಶವಾಗಿ ಬಳಸುತ್ತದೆ. ಉತ್ತಮ ರಕ್ತ ಪರಿಚಲನೆ, ರಕ್ತಹೀನತೆ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ; ಆದಾಗ್ಯೂ, ಅದರ ವೈದ್ಯಕೀಯ ಪರಿಣಾಮಕಾರಿತ್ವವು ಸಾಬೀತಾಗಿಲ್ಲ. ಇಸ್ಲಾಮಾಬಾದ್ ಮತ್ತು ಬೀಜಿಂಗ್ ನಡುವಿನ 'ಸರ್ವ ಹವಾಮಾನ' ಸ್ನೇಹವು ಕತ್ತೆಯ ಮೇಲೆ ಸವಾರಿ ಮಾಡುತ್ತಿದೆ.
